ಸ್ಯಾಂಡಲ್ ವುಡ್‌ನಿಂದ ಬಾಲಿವುಡ್‌ವರೆಗೆ ಹಿಟ್ ಚಿತ್ರಗಳನ್ನು ನೀಡಿರುವ ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಕುಬೇರಾ ಚಿತ್ರದಲ್ಲಿ, ರಶ್ಮಿಕಾ ಹೇಗೆ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
‘ಕುಬೇರʼ ಸಿನಿಮಾ ರಶ್ಮಿಕಾ ಅವರ ವೃತ್ತಿಜೀವನಕ್ಕೆ ಪ್ಲಸ್ ಆಗುವ ಸೂಚನೆ ಸಿಕ್ಕಿದೆ. 48 ಸೆಕೆಂಡ್ಗಳ ಟೀಸರ್ನಲ್ಲಿ ರಶ್ಮಿಕಾ ಮಂದಣ್ಣ ಅವರು ನೆಲದ ಒಳಗೆ ಹೂತಿಟ್ಟ ದೊಡ್ಡ ಸೂಟ್‌ಕೇಸ್ ಹೊರಗೆ ತೆಗೆಯುತ್ತಾರೆ. ಅದರ ತುಂಬ ಹಣದ ಕಂತೆಗಳೇ ಇರುವುದನ್ನು ಕಾಣಬಹುದು. ದುಡ್ಡು ನೋಡಿ ಖುಷಿ ಆಗುವ ರಶ್ಮಿಕಾ ಅವರು ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ. ಅಷ್ಟು ದುಡ್ಡು ಯಾರದ್ದು? ನೆಲೆದ ಒಳಗೆ ಹೂತಿಟ್ಟಿದ್ದು ಯಾಕೆ? ಈಗ ಅದನ್ನು ರಶ್ಮಿಕಾ ತೆಗೆದುಕೊಂಡು ಹೋಗುತ್ತಿರುವುದು ಎಲ್ಲಿಗೆ? ಇಂಥ ಹಲವು ಪ್ರಶ್ನೆಗಳು ಸಿನಿಪ್ರಿಯರ ಮನದಲ್ಲಿ ಹುಟ್ಟಿಕೊಂಡಿವೆ.
ಕುಬೇರ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ್ ನಿರ್ದೇಶನ ಮಾಡಿದ್ದಾರೆ. ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾತ್ರಿಯಂದು ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೈಲರ್ ರಿವೀಲ್ ಆಗಿತ್ತು. ಗಡ್ಡ ಬಿಟ್ಟ ಧನುಶ್, ಶಿವ – ಪಾರ್ವತಿ ಫೋಟೋ ಮುಂದೆ ನಿಂತಿದ್ದರು. ಈ ಚಿತ್ರದಲ್ಲಿ ಧನುಶ್ ಮೊದಲ ಬಾರಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.