ಸಾಮಾನ್ಯವಾಗಿ ಗಟ್ಟಿಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸುವುದು ರಂಗಭೂಮಿಯಿಂದಲೇ. ಈಗ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ, ಮಿಂಚುತ್ತಿರುವ ಮಂಗಳಗೌರಿ ಮದುವೆ ಖ್ಯಾತಿಯ ಬಳ್ಳಿ ಊರೂಫ್ ಕೃತಿ ಬೆಟ್ಟದ್, ಮೂಲತಃ ರಂಗಭೂಮಿಯಲ್ಲಿ ಹದಗೊಂಡ ಪ್ರತಿಭೆ. ಬಿಬಿಎಂ ಓದಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಕೃತಿಗೆ ನಟನೆ ಮೇಲಿನ ಸೆಳೆತ ಹೆಚ್ಚಾಗಿತ್ತು. ಹೀಗಾಗಿ ಉದ್ಯೋಗಕ್ಕೆ ಬಾಯ್ ಬಾಯ್ ಹೇಳಿ ಚಿತ್ರರಂಗದತ್ತ ಮುಖ ಮಾಡಿದರು.
ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ನ “ರೋಮಿಯೋ”
ಮೂಲತಃ ಗುಡಿಬಂಡೆಯವರಾದ ಕೃತಿ, ಮೂರು ವರ್ಷದವರಿದ್ದಾಗಲೇ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಒಂದರ್ಥದಲ್ಲಿ ವಿವರಿಸುವುದಾದರೆ ಕೃತಿಗೆ ನಟನೆ ರಕ್ತಗತವಾಗಿ ಬಂದುಬಿಟ್ಟಿತ್ತು. ಯಾಕಂದ್ರೆ ಅಪ್ಪ-ಅಮ್ಮ ಇಬ್ಬರು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರು. ಬಾಲ್ಯದಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾದೇವಿ ಆರಾಧಿಸುತ್ತಾ ನಟನೆಯಲ್ಲಿ ಪಳಗಿದರು. ನಾಟಕಗಳಲ್ಲಿ ಅಮೋಘ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಕೃತಿ ಮುಡಿ ಸೇರಿದವು.
ಅದಿತಿ ಪ್ರಭುದೇವ ಭಾವಿ ಪತಿಯೊಂದಿಗಿನ ಫೋಟೋ ವೈರಲ್
ನಟನೆ ಕೌಶಲ್ಯ ಕಲಿತ ಕೃತಿಗೆ ಮೊದಲು, ರಾಧಾ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಡಾನ್ ಪಾತ್ರವನ್ನು ತುಂಬಾ ಸೊಗಸಾಗಿ ನಿಭಾಯಿಸಿದ್ದರು. ಅದರ ಪ್ರತಿಫಲ ಎನ್ನುವಂತೆ ಕಲ್ಯಾಣ ರೇಖೆ ಧಾರಾವಾಹಿಯಲ್ಲಿ ಮೇನಕ ಎಂಬ ಪಾತ್ರ ಮಾಡಿದರು. ಹೀಗೆ ಒಂದೊಂದು ಧಾರಾವಾಹಿಗಳ ಅವಕಾಶ ಕೃತಿ ಮಡಿಲು ಸೇರಿತ್ತು. ಎಲ್ಲಾ ಸೀರಿಯಲ್ ಗಳಿಗಿಂತ ಕೃತಿಗೆ ಮಂಗಳಗೌರಿ ಮದುವೆ ಸೀರಿಯಲ್ ಬ್ರೇಕ್ ಕೊಡ್ತು. ಬಳ್ಳಿ ಪಾತ್ರ ಪ್ರೇಕ್ಷಕರ ಮನ ಮನೆ ಗೆದ್ದುಬಿಡ್ತು. ಬಳ್ಳಿ ಮಹೋನ್ನತ ಅಭಿನಯಕ್ಕೆ ಕಲರ್ಸ್ ಕನ್ನಡದ ಬೆಸ್ಟ್ ಕಾಮಿಡಿಯನ್ ಅವಾರ್ಡ್ ಕೃತಿ ಕೈ ಸೇರಿದೆ.
ಕಿರುತೆರೆಯಲ್ಲಿ ಹೀಗೆ ಸಾಗ್ತಿದ್ದ ಕೃತಿ ಪಯಣ ಬೆಳ್ಳಿತೆರೆಯತ್ತ ಸಾಗಿತು. ಮೈಲಾರಿ, ಡೆಡ್ಲಿ-2 ,ಝೂಮ್ , ಕೂಲ್, ಡ್ರಾಮಾ, ವಿಕ್ಟರಿ -2, ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಮನೋಜ್ಞವಾಗಿ ಅಭಿನಯಿಸಿದ ಕೃತಿ, ಬಾಲಿವುಡ್ ಗೂ ಹೆಜ್ಜೆ ಇಟ್ಟರು. ಜೋ ಬಿ ಕರ್ ವಾಲೇ ಸಿನಿಮಾದಲ್ಲಿ ನಟಿಸಿದಾಕೆ ನಂತ್ರ ತೆಲುಗು ಸಿನಿಮಾಗಳಲ್ಲಿಯೂ ಕಮಾಲ್ ಮಾಡಿದರು.