Sandalwood Leading OnlineMedia

ಕೃತಿ ಶೆಟ್ಟಿ  ಟ್ರೆಡಿಷನಲ್‌ ಲುಕ್ಕಿಗೆ ಫ್ಯಾನ್ಸ್‌ ಫಿದಾ..!

ಕೃತಿ ಶೆಟ್ಟಿ ತೆಲುಗು ಸಿನಿಪ್ರಿಯರ ಫೇವರಿಟ್ ನಟಿ. ಟಾಲಿವುಡ್‌ನ ಲಕ್ಕಿ ಹೀರೋಯಿನ್ ಅಂತಲೇ ಫೇಮಸ್. ಆಕೆಯ ಸೌಂದರ್ಯಕ್ಕೆ, ನಟನೆಗೆ ಮರುಳಾದವರಿಗೇನು ಕಮ್ಮಿಯಿಲ್ಲ. ‘ಉಪ್ಪೇನಾ’ ಸಿನಿಮಾ ಮೂಲಕ ಟಾಲಿವುಡ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೃತಿ ಶೆಟ್ಟಿಗೆ ಎಲ್ಲೆಡೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್ ಹೀರೋಯಿನ್ ಆದರು. ಒಂದೇ ರಾತ್ರಿಯಲ್ಲಿ ಟಾಪ್ ಹೀರೋಯಿನ್ ಆದ್ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

 

ತಮ್ಮ ನಟನೆಯಿಂದಾನೆ ತೆಲುಗು ಸಿನಿ ಪ್ರಿಯರ ಮನಗೆದ್ದಿದ್ದಾರೆ. ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ಕೃತಿ ಶೆಟ್ಟಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇತ್ತಿಚೆಗೆ ಟ್ರೆಡಿಷನಲ್‌ಗಿಂತ ಗ್ಲಾಮರಸ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಗ್ಲಾಮರಸ್‌ ಎನಿಸುವಂತ ಫೋಟೋಗಳನ್ನೇ ಹಂಚಿಕೊಳ್ಳುತ್ತಾ ಇರುತ್ತಾರೆ.

 

ಕೃತಿ ಶೆಟ್ಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಲುಕ್‌ನಲ್ಲಿ ಪೋಸ್ ಕೊಟ್ಟರೂ ಕೃತಿ ಫೋಟೊಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೆರೂನ್ ಬಣ್ಣದ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಸ್ಲೀವ್ ಲೆಸ್ ಡ್ರೆಸ್‌ನಲ್ಲಿ ಕೃತಿ ಶೆಟ್ಟಿ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಈಕೆ ಧರಿಸಿದ ಉಂಗುರ, ಕಿವಿಯೋಲೆ ಎಲ್ಲವೂ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿಯೇ ಇವೆ.

 

 

Share this post:

Translate »