ಕೃತಿ ಶೆಟ್ಟಿ ಈಕೆ ಹೆಸರಿಗೆ ತಕ್ಕಂತೆ ಸದಾ ತನ್ನ ಸೌಂದರ್ಯದಿಂದ ಸುದ್ದಿಯಾಗುವ ನಟಿ (Actress). ಸಿನಿಮಾ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲೂ (Social Media)ಈ ನಟಿ ಫುಲ್ ಆಕ್ಟೀವ್.
ಈಕೆ ಒಂದು ಫೋಟೋ (Photo) ಹಾಕಿದ್ರೆ ಸಾಕು, ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ಲೈಕ್ಸ್, ಸಾವಿರಗಟ್ಟಲೆ ಕಾಮೆಂಟ್ಸ್ ಬರುತ್ತದೆ. ಅಭಿಮಾನಿಗಳು ಒಂದು ಇವರ ಒಂದು ಝಲಕ್ ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ.
ಈ ಸುಂದರಿ ದಿನಕ್ಕೊಂದು ಅವತಾರದಲ್ಲಿ ಫೋಟೋ ಹಾಕಿ, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.
ಉಪ್ಪೇನಾ ಸಿನಿಮಾದ ಮೂಲಕ ಒಮ್ಮೆಲೇ ಸ್ಟಾರ್ ಹೀರೋಯಿನ್ ಆದರು. ಈ ಸಿನಿಮಾ ನೀಡಿದ ಜನಪ್ರಿಯತೆಯಿಂದ ಕನ್ನಡದ ಈ ಚೆಲುವೆ ಸದ್ಯ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಭಾಗವಾಗಿ, ಕೃತಿ ಶೆಟ್ಟಿ ಅಭಿನಯದ ವಾರಿಯರ್ ಚಿತ್ರದಲ್ಲಿ ರಾಮ್ ಪೋತಿನೇನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಕನ್ನಡದ ಬೆಡಗಿ ಸಿನಿಮಾಗಳಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹೌದು, ಅಭಿಮಾನಿಗಳ ಜೊತೆ ಕೃತಿ ಶೆಟ್ಟಿ ತಮ್ಮ ಸುಂದರ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಂದಿಗೂ ಫ್ಯಾನ್ಸ್ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಇದೀಗ ಕೃತಿ ಹಂಚಿಕೊಂಡಿರುವ ಹೊಸ ಫೋಟೋ ಸಖತ್ ವೈರಲ್ ಆಗಿದೆ.