ಅಲೋಕ್ ದುರ್ಗಾಪ್ರಸಾದ್ ರ ಕೃತಾರ್ಥ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಾಣ ಗೊಂಡು, ಅವರೇ ನಿರ್ದೇಶಿಸಿ, ಅವರೇ ನಾಯಕನಟನಾಗಿಯೂ ಅಭಿನಯಿಸಿ, ಸದ್ಯದಲ್ಲೇ ಬಿಡುಗಡೆಯಾಗಲಿರುವ ವಿಭಿನ್ನ ಶೈಲಿಯ ಕುಡ್ಲ ನಮ್ದು ಊರು ಎಂಬ ಕನ್ನಡ ಸಿನಿಮಾದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚಿಗೆ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!
ಮಂಗಳೂರಿನ ಯುವ ಕಲಾ ಪ್ರತಿಭೆ ಅಲೋಕ್ ದುರ್ಗಾ ಪ್ರಸಾದ್ ರ ಚೊಚ್ಚಲ ಸಿನಿಮಾ ಇದಾಗಿದ್ದು, ಇನ್ನೂ ಹಲವಾರು ಸಿನಿಮಾಗಳು ಇವರ ಬ್ಯಾನರ್ ನಡಿ ತಯಾರಾಗುವ ಹಂತದಲ್ಲಿ ವೆ. ಕುಡ್ಲ ನಮ್ದು ಊರು ಸಿನಿಮಾವು ತುಳುನಾಡಿನ ಕಲೆ, ಸಂಸ್ಕೃತಿ, ಭಾಷಾ ವೈವಿಧ್ಯತೆ, ಆಚಾರ,ವಿಚಾರ, ಸಾಮರಸ್ಯ ಮುಂತಾದ ವಿಷಯಗಳ ಮೆರುಗನ್ನು ಅನಾವರಣ ಗೊಳಿಸುವ ವಿಭಿನ್ನ ಶೈಲಿಯ ಕತೆಯನ್ನೊಳಗೊಂಡಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು ಸದ್ಯದಲ್ಲೇ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ.
ತುಳು ಮತ್ತು ಕನ್ನಡ ಚಲನಚಿತ್ರದ ನಟ, ನಟಿಯರ ಜೊತೆಗೆ ತುಳುನಾಡಿನ ಯುವ ಪ್ರತಿಭೆಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ ವಿಶ್ವನಾಥ್ ಮತ್ತು ಮಾಜಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಅವರು ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು.