ಶ್ರೀನಿವಾಸ್ ರಾಜು ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನದಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಿಂದೆ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕರು ಈ ಬಾರಿ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ತೆರೆಗೆ ತಂದು ಗೆದ್ದು ಬೀಗಿದ್ದಾರೆ.
ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಮಿಂಚಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್, ಶಶಿಕುಮಾರ್, ಶ್ರುತಿ ಸೇರಿ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ಸಿನಿಮಾ ಮೊದಲ 2 ವಾರಕ್ಕೆ 15 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಸದ್ಯ ಗಳಿಕೆ 50 ಕೋಟಿ ರೂ. ಗಡಿ ದಾಟಿರುವ ಅಂದಾಜಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!
ಬಹಳ ದಿನಗಳ ನಂತರ ಗಣೇಶ್ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದ್ದಾರೆ. ಒಂದೊಳ್ಳೆ ಬ್ರೇಕ್ ಸಿಕ್ಕಂತಾಗಿದೆ. ಶ್ರೀಮಂತ ಮನೆತನದ ಯುವಕ ಕೃಷ್ಣ(ಗಣೇಶ್). ಅನಾಥಾಶ್ರಮದ ಯುವತಿ ಪ್ರಣಯ (ಮಾಳವಿಕಾ ನಾಯಕ್) ಮೇಲೆ ಆತನಿಗೆ ಲವ್ ಆಗುತ್ತದೆ. ತನ್ನ ಪ್ರೀತಿ ಪಡೆಯಲು ಕೃಷ್ಣ ಹಾಕುವ ವೇಷ ಎಂಥದ್ದು? ಮುಂದೆ ಇದು ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಒನ್‌ಲೈನ್ ಸ್ಟೋರಿ. ಕಾಮಿಡಿ ಟಚ್ ಕೊಟ್ಟು ಶ್ರೀನಿವಾಸ್ ರಾಜು ಕಥೆ ಹೇಳಿದ್ದಾರೆ. ಬೇರೆ ಭಾಷೆಯ ಕೆಲ ಸಿನಿಮಾಗಳನ್ನು ‘ಕೃಷ್ಣಂ ಪ್ರಣಯ ಸಖಿ’ ಕಣ್ಮುಂದೆ ತರುವಂತಿದೆ. ಆದರೆ ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ‘ದ್ವಾಪರ’ ಸಾಂಗ್ ಪ್ಲಸ್ ಆಗಿದೆ. 14ನೇ ವಾರವೂ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಅದಕ್ಕೆ ನಿದರ್ಶನ. ಸದ್ಯ ಚಿತ್ರ 100 ದಿನ ದಾಟಿದೆ. ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಆಗುತ್ತಲೇಯಿದೆ. ಇದೀಗ ಸನ್ ನೆಕ್ಸ್ಟ್ ಪ್ರೀಮಿಯರ್ ಆಗಿ ನಿಮ್ಮ ಮನಸ್ಸನ್ನು ಮತ್ತೋಮ್ಮೆ ಗೆಲ್ಲಲಿದೆ. ಮುದ ನೀಡುವ ಹಾಡುಗಳು, ಹಾಸ್ಯ, ಪ್ರೇಮ ಸಲ್ಲಾಪದ ಜತೆ ಸಾಗುವ ಅನಿರೀಕ್ಷಿತ ಪಯಣವನ್ನು ಇದೇ 29ರಿಂದ ತಪ್ಪದೆ ನೋಡಿ ಆನಂದಿಸಿರಿ.