Sandalwood Leading OnlineMedia

ಸೆಪ್ಟಂಬರ್ 2ಕ್ಕೆ `ಎಲ್.ಕೃಷ್ಣಪ್ಪ 75ರ ಅಭಿನಂದನಾ’ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ `ಕೃಷ್ಣಗಾರುಡಿ’ ಅಭಿನಂದನಾಗ್ರಂಥ

 

“ಎಲ್.ಕೃಷ್ಣಪ್ಪ “ಎಂಬ ಹೆಸರು ಒಬ್ಬ ವ್ಯಕ್ತಿಯದು ಹೌದಾದರೂ, ಅದು ಹವ್ಯಾಸಿ ಕನ್ನಡ ರಂಗಭೂಮಿಯ ಚರಿತ್ರೆಯ ಬಹುಮುಖ್ಯ ಅಡಿಗಲ್ಲು ಎನ್ನಬಹುದು.ಈ ತಳಹದಿಯ ಮೇಲೆ ಕನ್ನಡ ರಂಗಭೂಮಿಯ ನೆಲೆ ನಿಂತಂತೆ,ಕೃಷ್ಣಪ್ಪ ನೆಂಬ ಧೈತ್ಯ ಶಕ್ತಿಯೂ ನಿಂತಿದೆ .ಕೃಷ್ಣಪ್ಪ ಸಾಂಸ್ಕೃತಿಕ ಕ್ಷೇತ್ರದವರನೇಕರ ಮನೆಗಳನ್ನು ಕಟ್ಟಿದ್ದಾರೆ.ಅವರ ಕೈಯ ಕರಣೆ ರಂಗಧಾರಣೆಯಿಂದಲೇ ಬಂದಿದೆ ಕಾರಣಕ್ಕೆ ,ಆ ಮನೆಗಳು ಸಾಂಸ್ಕೃತಿಕ ಹೊಳಪು ಕಂಡಿದೆ.ಬಿಳುಪಿಗನಲ್ಲದ ಈ ಕೃಷ್ಣಾವತಾರಿಯ ಚರಿತ್ರೆಯ ಜಾಡು ಹಿಡಿದು ಹೊರಟರೇ ಅದೆಷ್ಟೋ ಸಾಧನೆಯ ಕಪ್ಪುನೆಲದ ಕರುನಾಡಿನ ಕಂಪು ವಾಸನೆ ಮತ್ತೆ,ಮತ್ತೆ ಮೂಸುವಂತೆ ಪರಿಮಳ ಸೂಸುತ್ತದೆ..ಇವರನಿರ್ದೇಶನದ ನಾಟಕ,ರಂಗಭೂಮಿಗೆ ಮೀಸಲಾದ ಈ ಮಾಸ ರಂಗಪತ್ರಿಕೆ,ವಿದ್ಯಾರ್ಥಿಗಳಿಗೆ ಏರ್ಪಡಿಸಿದ ನೂರಾರು ರಂಗ ತರಬೇತಿ ಶಿಬಿರಗಳು ,..ಹಿರಿಯರಲ್ಲಿ ಹಿರಿಯರಾಗಿ,ಕಿರಿಯರಲ್ಲಿ ಕಿರಿಯರಾಗಿ ,ಕೃಷ್ಣಪ್ಪ ಬೆರೆತು ಬಿಡುತ್ತಾರೆ..ನಮ್ಮ ಕೃಷ್ಣಪ್ಪ ಅವರಿಗೆ ಈಗ 75ವರ್ಷಗಳು !ಆದರೆ ನೋಡಲು ನವತರುಣ ..

 

 

 Rashmika Mandanna: ದುಲ್ಖರ್ ಜೊತೆ ರಶ್ಮಿಕಾ ಮೊದಲ ಸಿನಿಮಾ 50 ಕೋಟಿ ಗಳಿಕೆ! ಸೀತಾರಾಮಂ ಸೂಪರ್ ಹಿಟ್

ಏನು ಸರ್ ?ನಿಮ್ಮ ಚಿರಯವ್ವನದ ಗುಟ್ಟು ಅಂದರೆ ,..ಒಂದು ಕ್ಷಣ ನಕ್ಕು ರಂಗಭೂಮಿ ಆಸಕ್ತಿಯೇ ಗುಟ್ಟು ಎನ್ನುತಾರೆ..ಅವರ ಕಾಲಚಕ್ರ ರಂಗಚಟುವಟಿಕೆಯಲ್ಲಿ ತಿರು,ತಿರುಗಿ 75ಕ್ಕೆ ಬಂದು ನಿಂತ ಸಂಭ್ರಮದಲ್ಲಿ ಗೆಳೆಯರೆಲ್ಲ ಸೇರಿ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರದ ಸಂಘಟನೆಯಲ್ಲಿ ಎಲ್.ಕೃಷ್ಣಪ್ಪ 75 ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ..ಕೃಷ್ಣಗಾರುಡಿ ಎಂಬ ರಂಗಭೂಮಿಯ ಚರಿತ್ರೆಯ ಗ್ರಂಥ ಲೋಕಾರ್ಪಣೆಯು ಆದಿನ ನಡೆಯಲಿದೆ.

 

ಕೃಷ್ಣಗಾರುಡಿ ಕೃತಿಯ ಪ್ರಧಾನ ಸಂಪಾದಕರಾದ ದ್ವಾರನ ಕುಂಟೆ ಪಾತಣ್ಣ

ಕ್ಯೂರಿಯಾಸಿಟಿ ಮೂಡಿಸಿದ ‘19.20.21’ ಪೋಸ್ಟರ್

ಹಿರಿಯ ರಂಗಕರ್ಮಿಗಳಾದ ಕೆ.ಮರುಳಸಿದ್ದಪ್ಪ,ಪದ್ಮಶ್ರೀ ಪುರಸ್ಕೃತರಾದ ದೊಡ್ಡ ರಂಗೇಗೌಡರು,ಪ್ರಣಯರಾಜ ಶ್ರೀನಾಥ್,ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ,ಖ್ಯಾತ ನಾಟಕಕಾರರಾದ ಕೆ.ವೈ.ನಾರಾಯಣ ಸ್ವಾಮಿ,ಕಲ್ಬುರ್ಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ,ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ.ಭೀಮಸೇನ್ ,ರಾಷ್ಟ್ರ ಖ್ಯಾತಿಯ ಕನ್ನಡ ರಂಗಭೂಮಿಯ ಬೆಳಕಿನ ತಜ್ಞ ಚಂದ್ರಕುಮಾರ್ ಸಿಂಗ್, ಸಿಂಪಲ್ಲಾಗೊಂದು ಲವ್ ಸ್ಟೋರಿಯ ಖ್ಯಾತ ನಟಿ ಶ್ವೇತಾಶ್ರೀವಾತ್ಸವ್,ಹಿರಿಯ ಚಲನಚಿತ್ರ ನಟ ಶಂಕರ್ ಭಟ್,.ಕೃಷ್ಣಗಾರುಡಿ ಕೃತಿಯ ಪ್ರಧಾನ ಸಂಪಾದಕರಾದ ದ್ವಾರನ ಕುಂಟೆ ಪಾತಣ್ಣ,ಸಂಪಾದಕರಾದ ಆರ್.ವೆಂಕಟರಾಜು ಸೇರಿದಂತೆ ವಿಶೇಷ ಆಹ್ವಾನಿತರ ದೊಡ್ಡ ರಂಗಬಳಗವೇ ಕಲಾಕ್ಷೇತ್ರಕ್ಕೆ ಬಂದು ಸೇರಲಿದೆ.ಜೊತೆಗೆ ಒಂದಷ್ಟು ಹಾಡು ಹಸೆ ಶ್ರೀನಾಥ್ ಹಾಗೂ ಗಜಾನನ ಟಿ.ನಾಯಕ್ ಅವರಿಂದ,ಚಿಗುರು ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ವಿ.ಸಂತೋಷಿ ಅವರ ತಂಡದ ನೃತ್ಯ ಎಲ್ಲದರ ಜೊತೆ ಮದುಮಗ ಎಲ್.ಕೃಷ್ಣಪ್ಪ,ಹಾಗೂ ಮದುಮಗಳಾದ ವಿನೋದಿನಿ ಅವರಿಗೆ ರಂಗಗೌರವ ಸಲ್ಲಿಕೆ ಇದೆ. ಇದೆ.ದಿನಾಂಕ 02-09-2022 ಸಂಜೆ 5ಕ್ಕೆ ರವೀಂದ್ರಕಲಾಕ್ಷೇತ್ರದಲ್ಲಿ.

 

ಕೃಷ್ಣಗಾರುಡಿ ಕೃತಿಯ ಸಂಪಾದಕರಾದ ಆರ್.ವೆಂಕಟರಾಜು

 

Share this post:

Related Posts

To Subscribe to our News Letter.

Translate »