Sandalwood Leading OnlineMedia

ಸಿನಿಮಾ ನಿರ್ಮಾಣ, ವಿತರಣೆ ಆಯ್ತು ಈಗ ಎಕ್ಸಿಬ್ಯೂಷನ್‌ಗೆ ಇಳಿದ KRG ಸಂಸ್ಥೆ

 

ಸ್ಯಾಂಡಲ್‌ವುಡ್ ಪ್ರತಿಷ್ಠಿತ ಸಿನಿಮಾ ಸಂಸ್ಥೆ ಕೆ.ಆರ್.ಜಿ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸಿನಿಮಾ ವಿತರಣೆ ಹಾಗೂ ನಿರ್ಮಾಣದಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಸಂಸ್ಥೆ ಇದೀಗ ಹೊಸ ಕ್ಷೇತ್ರಕ್ಕೆ‌ ಕಾಲಿಟ್ಟಿದೆ. 2017ರಲ್ಲಿ ಪ್ರಾರಂಭವಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರ ಕನಸಿನ ಸಂಸ್ಥೆ ಕೆ ಆರ್ ಜಿ ಇಂದು ಸ್ಯಾಂಡಲ್‌ವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಇದೀಗ ಈ ಸಂಸ್ಥೆ ವಿತರಣೆ ಹಾಗೂ ನಿರ್ಮಾಣ ಜೊತೆಗೆ ‘KRG ಎಕ್ಸಿಬ್ಯೂಷನ್ ಕ್ಷೇತ್ರಕ್ಕೆ’ ಲಗ್ಗೆ ಇಟ್ಟಿದೆ. ಸಿನಿಮಾ ನಿರ್ಮಾಣ, ವಿತರಣೆ ಹಾಗೂ ಪ್ರಮೋಷನ್ ಜೊತೆಗೆ ಜನರಿಗೆ ಸಿನಿಮಾ ತೋರಿಸುವುದು ಕೂಡ ಅಷ್ಟೆ ಮುಖ್ಯ ಹಾಗಾಗಿ ಎಕ್ಸಿಬ್ಯೂಷನ್ ಬ್ಯುಸಿನೆಬ್‌ಗೂ ಇಳಿದಿದೆ.

ಇದರ ಮೊದಲ ಹೆಜ್ಜೆ ಎಂಬಂತೆ ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್ ಚಿತ್ರಮಂದಿರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ‘ಕೆಆರ್‌ಜಿ ಸೌಂದರ್ಯ ಮಹಲ್’ ಎಂದು ಬದಲಾಯಿಸುವ ಮೂಲಕ ಕೆಆರ್‌ಜಿ ಎಕ್ಸಿಬ್ಯೂಷನ್‌ಗೆ ಭದ್ರ ಬುನಾದಿ ಇಟ್ಟಿದೆ. ಈ ಒಂದು ಮುಂದಿನ ದಿನಗಳಲ್ಲಿ ನೂರಾರು ಚಿತ್ರಮಂದಿರಗಳಾಗುವಂತೆ ಕೆಆರ್‌ಜಿ ಸಂಸ್ಥೆ ಗುರಿ ಇಟ್ಟುಕೊಂಡಿದೆ.

ನಿರ್ಮಾಪಕ ಕಾರ್ತಿಕ್ ಗೌಡ ಅವರಿಗೆ ಸಿನಿಮಾದ ಮೇಲೆ ಅಪಾರ ಪ್ರೀತಿ. ಕನ್ನಡ ಸಿನಿಮಾಗಳು ಹೆಚ್ಚು ಹೆಚ್ಚು ಸದ್ದು ಮಾಡಬೇಕು, ಕೇವಲ ಕೆಆರ್‌ಜಿಯಿಂದ ಬಂದ ಸಿನಿಮಾಗಳು ಮಾತ್ರವಲ್ಲದೆ ಕನ್ನಡದ ಎಲ್ಲಾ ಸಿನಿಮಾಗಳಿಗೂ ಸಹಾಯವಾಗಬೇಕು ಎನ್ನುವ ಮಹಾದಾಸೆಯಿಂದ ಕಾರ್ತಿಕ್ ಗೌಡ ಅಂಡ್ ಟೀಂ ಎಕ್ಸಿಬ್ಯೂಷನ್ ಪ್ರಾರಂಭಸಿದೆ.

ನಟ ವಿರಾಟ್ ನಾಯಕನಾಗಿ ಮಿಂಚಿರುವ ರಾಯಲ್ ಸಿನಿಮಾ ಮೂಲಕ ಕೆಆರ್‌ಜಿ ಎಕ್ಸಿಬ್ಯೂಷನ್‌ ಪ್ರಾರಂಭಮಾಡಲಿದೆ.  ರಾಯಲ್ ಸಿನಿಮಾ ಕೆಆರ್‌ಜಿ ಸೌಂದರ್ಯ ಮಹಲ್‌ನಲ್ಲೂ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಕೆಆರ್‌ಜಿ ನಿರ್ಮಾಣ, ವಿತರಣೆ, ಮಾರ್ಕೆಟಿಂಗ್ ಹಾಗೂ ಇದೀಗ ಎಕ್ಸಿಬ್ಯೂಷನ್ ಸೇರಿದಂತೆ‌ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಂತೆ ಆಗಿದೆ.

ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಪರಭಾಷೆಯ ಚಿತ್ರಗಳ ಹಾವಳಿಯೇ ಹೆಚ್ಚಾಗಿದೆ ಎನ್ನುತ್ತಿರುವ ಈ ಸಮಯದಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಆಧ್ಯತೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಒಟ್ನಲ್ಲಿ ಉತ್ತಮ ಕನ್ನಡ ಸಿನಿಮಾಗಳು ಹೆಚ್ಚಾಗಿ ಬರಬೇಕು, ಸಿನಿಮಾರಂಗ ಮತ್ತಷ್ಟು ಬೆಳಿಬೇಕು ಎನ್ನುವುದೇ ಉದ್ದೇಶ.

 

 

Share this post:

Related Posts

To Subscribe to our News Letter.

Translate »