ಕನ್ನಡ ಚಿತ್ರರಂಗದಲ್ಲಿ ಕಲಾರಸಿಕರನ್ನು ಬೆಚ್ಚಿಬೀಳಿಸುವಂತಹ ವಿಷಿಷ್ಟ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಸಂವರ್ದಿನಿ ಪ್ರೊಡಕ್ಷನ್ ರವರ ‘ಕ್ರೀಂ’ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಕೆ. ಜಿ. ಎಫ್.ನಲ್ಲಿ ಕಲಾ ನಿರ್ದೇಶನ ಮಾಡಿ ಪ್ರೇಕ್ಷಕರನ್ನು ಸೆಳೆದ ಶಿವಕುಮಾರ್ ಜೆ.ರವರು ಹಾಕಿರುವ ಸೆಟ್ಗಳು ಎಲ್ಲರ ಹುಬ್ಬೇರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತಿಕೆಯ ಸೆಟ್ಗಳನ್ನು ಯಾರು ಕಂಡಿಲ್ಲ.
ಗಣಿ ಬರ್ತ್ಡೇಗೆ, ಭಟ್ರ ಸ್ಪೆಶಲ್ ಗಿಫ್ಟ್!
ಅದಕ್ಕಿಂತಲೂ ಪ್ರಮುಖವಾಗಿ ಆ ಚಿತ್ರದ ತಾರಾಗಣ, ಸಂಯುಕ್ತ ಹೆಗ್ಡೆ, ಅರುಣ್ ಸಾಗರ್, ಮತ್ತು ಅಚ್ಯುತ್ ಕುಮಾರ್ ರವರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ನಟರ ಹೆಸರನ್ನು ಭಾರಿ ಗೌಪ್ಯವಾಗಿಡಲಾಗಿದೆ. ಅದು ಎಲ್ಲೆಡೆ ಕುತೂಹಲ ಮೂಡಿಸಿದೆ.
ಕಿಚ್ಚ ಸುದೀಪ್ ಅವರ 10 ಎವರ್ ಗ್ರೀನ್ ಹಾಡುಗಳು
ಕ್ರೀಂ ಚಿತ್ರದ ಕಥೆ, ಸಂಯೋಜನೆ ಮತ್ತು ಚಿತ್ರಕಥೆಯನ್ನು ಸ್ರುಷ್ಟಿಸಿರುವವರು ಅಗ್ನಿ ಶ್ರೀಧರ್ ಅಂದಮೇಲೆ ಸಹಜವಾಗಿಯೇ ನೈಜ ಹಾಗೂ ಗೌಪ್ಯವಾಗಿ ನಡೆಯುತ್ತಿರುವ ಘಟನೆಗಳನ್ನು ಆಧರಿಸುವ ಸಿನೆಮಾ. ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕರು ಡಿ. ಕೆ.ದೇವೇಂದ್ರರವರಂತೂ ಹತ್ತು ದಿನಗಳ ಚಿತ್ರೀಕರಣ ಮುಗಿಯುವಷ್ಟರಲ್ಲಿ ಅಪಾರ ಹರ್ಷದಲ್ಲಿದ್ದಾರೆ. ಅವರ ಪ್ರಕಾರ ಈ ಸಿನಿಮಾ ಜಾಕ್ಪಾಟ್ ಹೊಡೆಯಲಿದೆ. ಸುನೋಜ್ ವೇಲಾಯುದನ್ ರವರ ಛಾಯಾಗ್ರಹಣ ಮತ್ತು ಸುರಾಗ್ ಸಂಗೀತವಿರುವ ಈ ಚಿತ್ರ, ವರ್ಷದ ಅಂತ್ಯದ ಹೊತ್ತಿಗೆ ಪ್ರೇಕ್ಷಕರಿಗೆ ಕಾಣಿಸಿಕೊಳ್ಳಲಿದೆ.