Sandalwood Leading OnlineMedia

Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!

Rating  / 5

ಬರಹಗಾರರು, ನಿರ್ದೇಶಕರೂ ಆದ ಅಗ್ನಿ ಶ್ರೀಧರ್ ಈ ಹಿಂದೆ ಭೂಗತ ಲೋಕದ ಕಥೆ ಹೊತ್ತ `ಆ ದಿನಗಳುಮತ್ತು `ಎದೆಗಾರಿಕೆಎಂಬ ಅದ್ಭುತ ಸಿನಿಮಾಗಳನ್ನು ಕೊಟ್ಟವರು, ಈಗ ಇಂದಿಗೂ ಗೌಪ್ಯವಾಗಿ ನಡೆಯುತ್ತಿರುವ `ನರಬಲಿಯ ಕಥೆ ಹೊತ್ತ `ಕ್ರೀಮ್ಚಿತ್ರದೊಂದಿಗೆ ಬಂದಿದ್ದಾರೆ. ಇಲ್ಲಿನ ವಿಶೇಷವೆಂದರೆ ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆಯ ಜೊತೆ ನಟನೆಯನ್ನೂ ಮಾಡಿದ್ದಾರೆ. ಇವರ ಈ ಹಿಂದಿನ `ಆ ದಿನಗಳುಮತ್ತು `ಎದೆಗಾರಿಕೆಸಿನಿಮಾಗಳು ಭೂಗತ ಲೋಕದ ಕಥೆಯದ್ದಾಗಿದ್ದರೂ, ಹಿಂಸೆ ಮತ್ತು ರಕ್ತಪಾತವನ್ನು ವೈಭವೀಕರಿಸದೆ, ಅತ್ಯಂತ ಸೂಕ್ಷö್ಮವಾಗಿ ಹೇಳಲಾಗಿತ್ತು. ಆದರೆ `ಕ್ರೀಮ್ವಿಚಾರಕ್ಕೆ ಬಂದರೆ ಆರಂಭದಲ್ಲೇ ಕಥೆಯ ಸೂಕ್ಷತೆಯ `ಕತ್ತು ಕೊಯ್ಯಲಾಗುತ್ತದೆ’! ಸಿನಿಮಾದಲ್ಲಿ ಒಂದು ಕಡೆ ದೆಶ್‌ಮಂಡ್ ಪಟೇಲ್ (ಅಗ್ನಿ ಶ್ರೀಧರ್) `ನರಬಲಿಯಂತಹ ವಿಚಾರಗಳು ಸಾಮಾನ್ಯ ಜನರಿಗಲ್ಲಎಂಬರ್ಥದಲ್ಲಿ ಮಾತನಾಡುತ್ತಾನೆ. ಅದೇ ರೀತಿ `ಕ್ರೀಮ್ಸಿನಿಮಾ ಕೂಡ ಜನ ಸಮಾನ್ಯರಿಗೆ ನಿಲುಕದ ಅಸಾಮಾನ್ಯ ಕಂಟೆ0ಟ್ ಇರುವ ಚಿತ್ರ. ಸಿನಿಮಾದ ಆರಂಭದಲ್ಲಿ ರೆಕ್ಕೆ ಇರುವ ಕರಿ ಬಣ್ಣದ ಸಿಂಹದ ಅನಿಮೇಶನ್‌ನ ಪ್ರೊಡಕ್ಷನ್ ಹೌಸ್‌ನ ಲೋಗೋದಿಂದಲೇ ಸಿನಿಮಾ ಆರಂಭವದ0ತೆ ಭಾಸವಾಗುತ್ತದೆ. ಆದರೆ ಸಿನಿಮಾ ಆರಂಭವಾಗುವುದು ಅನಿಮೇಶನ್ ಮೂಲಕ ಹೇಳಲಾಗುವ ಕಥೆಯ ಮೂಲಕ.


Read More : Kappu Bilupina Naduve Movie Review : ದೇವಗಿರಿಯ ಡೆವಿಲ್ ರಹಸ್ಯ!

ಅಗರ್ಭ ಶ್ರೀಮಂತ, ಉದ್ಯಮಿ ದೆಶ್‌ಮಂಡ್ ಪಟೇಲ್ ಅಚಾನಕ್ಕಾಗಿ ಗುರೂಜಿಯೊಬ್ಬರ ಭೇಟಿಯಾಗುತ್ತಾನೆ. ಗೂರೂಜಿ ತಾವರೆ ಹೂವಿನಂತಹ ಹೂ ಇರುವ ಗಿಡವನ್ನು ಕೊಟ್ಟು ಯಾರೂ ಇಲ್ಲದ ಸಮಯದಲ್ಲಿ, ನಾಲ್ಕು ರಸ್ತೆ ಕೂಡುವಲ್ಲಿ ಆ ಗಿಡವನ್ನು ನೆಡುವಂತೆ ಹೇಳುತ್ತಾರೆ. ಗೂರೂಜಿ ಅಣತಿಯಂತೆ ನಡೆದುಕೊಂಡ ದೆಶ್‌ಮಂಡ್ ಪಟೇಲ್, ಗಿಡ ನೆಟ್ಟು ಹಿಂದಿರುಗುವಾಗ, ಮೂವರು ಅಪರಿಚಿತರು ಎದರುಗಾತ್ತಾರೆ. ಅವರು `ಹೊಟ್ಟೆ ಹಸಿದಿದೆ ತಿನ್ನಲು ಏನಾದರೂ ಕೊಡಿಅಂದಾಗ, ಪಟೇಲ್ ದುಡ್ಡಿನ ಕಂತೆಗಳನ್ನು ಕೊಡುತ್ತಾನೆ. ಆದರೆ ಮೂವರೂ ಅದನ್ನು ನಿರಾಕರಿಸಿ ತಮ್ಮ ದಾರಿ ಹಿಡಿಯುತ್ತಾರೆ. ಗೂರೂಜಿ `ಆ ಮೂವರು ಅಸಾಧಾರಣ ಸೃಷ್ಟಿಗಳು, ನಿನ್ನ ಅರವಿಗೆ ಬಾರದೆ ಅವಕಾಶದಿಂದ ವಂಚಿತನಾದೆಅಂದಾಗ, ಪಟೇಲ್ ಇನ್ನೊಂದು ಅವಕಾಶ ಕೇಳುತ್ತಾನೆ. ಆದರೆ ಗೂರೂಜಿ ನಿರಾಕರಿಸುತ್ತಾರೆ. ಇದಕ್ಕಾಗಿ ಪಟೇಲ್ ಸುಪ್ರೀಮ್ ಪವರ್‌ಗಾಗಿ ತನ್ನದೇ ದಾರಿ ಹುಡಿಕಿಕೊಳ್ಳುತ್ತಾನೆ. ಆಗ ಅವನಿಗೆ ಎದುರಾಗುವ ದಾರಿ `ಅಬಡ್ಡನ್ ಆರಾಧನೆ’. ಅಂದರೆ ಸೈತಾನನ ಆರಾಧನೆ. ಸೈತಾನನ ಆರಾಧನೆಗಾಗಿ ನರ ಬಲಿ ಕೊಟ್ಟವರು ಕೊನೆಗೆ ತಾವೇ ಬಲಿಯಾಗಿಬಿಡುತ್ತಾರೆ ಅನ್ನವುದು `ಕ್ರೀಮ್ಚಿತ್ರದ ಒಟ್ಟು ಆಶಯ.

Read More : Matsyagandha Movie Review; ಕಡಲ ಒಡಲೊಳಗೊಂದು ಕಾಡುವ ಲಹರಿ

ಸಿನಿಮಾದ ಮೇಕಿಂಗ್ ಮತ್ತು ನರೇಶನ್ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವುದರ ಜೊತೆಗೆ ಅದಕ್ಕೆ ತಕ್ಕಂತೆ, ಇಂಗ್ಲೀಷ್ ಸಂಭಾಷಣೆಗಳೇ ತುಂಬಿವೆ. ಸಿನಿಮಾದ ಫಸ್ಟ್ ಹಾಫ್ ಸೈತಾನ ಮತ್ತು `ಯಜಮಾನ್ರಸುತ್ತಲೇ ಸುತ್ತುವ ಕಥೆ, ಸೆಕೆಂಡ್ ಹಾಫ್ `ಅಕ್ಷಳಿಂದಾಗಿ (ಸಂಯುಕ್ತ ಹಗ್ಡೆ) ಅಕ್ಷರಶಃ `ಕರ್ಮ returnsಕಥೆಯಾಗಿಬಿಡುತ್ತದೆ. ನರಬಲಿಗೆ ಒಳಗಾಗಿ `ಬಾಬಒಬ್ಬರ ಸಹಾಯದಿಂದ ತನ್ನನ್ನು ಬಲಿ ಪಡೆದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಡುತ್ತಾಳೆ `ಅಕ್ಷ’. `ಸೇಡು ನಿನ್ನನ್ನೇ ಸುಡುತ್ತದೆಅನ್ನುವ ಬಾಬ ಸೇಡಿಗೆ `ಶಿಕ್ಷೆರ‍್ಯಾಪರ್ ತೊಡಿಸಿ ಅಕ್ಷಳನ್ನು ಮಾನಸಿಕವಾಗಿಗೂ ದೈಹಿಕವಾಗಿಯೂ ಒಂದು ಅರೂಪದ ಶಕ್ತಿಯನ್ನಾಗಿ ಮಾರ್ಪಡಿಸುತ್ತಾನೆ. ಎಲ್ಲಾ ಸಿನಿಮಾಗಳಂತೆ `ಓಂ ಕ್ರಿಂ ಕಲಿಕಾಯೇ ನಮಃಎಂಬ ಬ್ಯಾಕ್‌ರೌಂಡ್ ಹಾಡಿನ ಮೂಲಕ ಅಕ್ಷಳ ಸಿದ್ಧತೆಗಳನ್ನು ತೋರಿಸಲಾಗುತ್ತದೆ. ಇಡೀ ಸಿನಿಮಾದಲ್ಲಿ ಇರುವುದು ಇದೋಂದೇ ಹಾಡದರೂ, ಕಥೆಯ ಓಘವನ್ನು ಹೆಚ್ಚಿಸುತ್ತದೆ.  ನರಬಲಿ ಮಾಡುತ್ತಿರುವ ತಂಡದ ಸದಸ್ಯರನ್ನು ಅವರು ಅವರ ನೆಚ್ಚಿನ0 ಹವ್ಯಾಸ ಸಮಯದಲ್ಲಿ ತೊಡಗಿರುವಾಗಲೇ ವಿವಿಧ ರೀತಿಯಲ್ಲಿ ಕೊಲೆ ಮಾಡುವುದು ಇಂಟ್ರೆಸ್ಟಿ0ಗ್ ಆಗಿದೆ. ಅಕ್ಷ ಕಿರುಚಿದರೇ ಸಾಕು ಸಾವಾಗುತ್ತದೆ, ಹಸಿದ ತೋಳಗಳು ಕೇವಲ ಅಕ್ಷಳ ವೈರಿಯನ್ನು ಮಾತ್ರ ಮುಗಿಸುತ್ತದೆ, ಅಂತಹ ಅಮಾನುಷ ಶಕ್ತಿ ಅಕ್ಷಳಿಗೆ ಒಲಿದುರುತ್ತದೆ!

Read More :Ondu Sarala Prema Kathe Movie Review: ಬಾಳು `ಸರಳ’, ಪ್ರೇಮ `ವಿರಳ’.. ವಿಧಿ ಕರಾಳ!

ಸಿನಿಮಾದ climax ಹಂತದಲ್ಲಿನ ಫೈಟ್‌ನಲ್ಲಿ ಅಕ್ಷಳ ಆಕ್ಷನ್ ಅಲ್ಟಿಮೇಟ್. ಮುಲಾಜಿಲ್ಲದೆ ದಾಂಡಿಗರನ್ನು ಅಟ್ಟಾಡಿಸಿಕೊಂಡು ಒಬ್ಬೊಬ್ಬರನೇ ಸಾಯಿಸುವ ಅಕ್ಷ, ಪಟೇಲ್ ಅನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾಳೆ. ಮೊದಲೇ ಸಾಯಿಸದರೆ, climax ಡಲ್ ಆಗುವ ಉದ್ದೇಶ ಅಕ್ಷಳಿದ್ದರಬೇಕು. ಅಕ್ಷಳ ಅಕ್ಷಿಗಳ ಮುಂದೆ ರಿವಾಲ್ವರ್ ಹಿಡಿದವನೂ ನಪುಂಸಕ! `ಸೈತಾನನಿಗೆ ಬಲಿ ಕೊಡುವುದರಿಂದಲೇ ಈ ಜಗತ್ತು ನೆಮ್ಮದಿಯಾಗಿದೆಅನ್ನುವ ಪಟೇಲ್, ತಾನಂದುಕೊ00ತೆಯೇ `ಸಾವಿನ ಜೊತೆ ಒಂದು ಸಿಗಾ ಶೇರ್ಮಾಡಿ ಸಾವನ್ನು ಪ್ರಜ್ಞಾ ಪೂರಕವಾಗಿಯೇ ಸಾವನ್ನೂ ಬದುಕಿನ ಒಂದು ಭಾಗವೆಂಬ0ತೆ ಸ್ವೀಕರಿಸಿರೋದು ಪಟೇಲ್ ಪಾತ್ರವನ್ನು ಎತ್ತರಕ್ಕೇರಿಸಿದೆ.  ಪಟೇಲ್ ಮತ್ತು ಅವನ ಮಗನ ನಡುವಿನ ಮಾನಸಿಕ ತೋಯ್ದಾಟಗಳು, ಸಿದ್ದಾಂತಗಳ ನಡುವಿನ ಜಟಾಪಟಿ ಸಮರ್ಥವಾಗಿ ತೆರೆಯ ಮೇಲೆ ಮೂಡಿಬಂದಿದೆ.

Read More :Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?

 climax ಹಂತದಲ್ಲಿ ದುತ್ತನೆ ಯಾವುದೇ ಲಾಜಿಕ್ ಇಲ್ಲದೆ ಮ್ಯಾಜಿಕ್ ಥರ ಎಂಟ್ರಿ ಕೊಡುವ ಪಟೇಲ್ ಮಗ, ಸೈತಾನನ ಆರಾಧಕನಾದ ತನ್ನ ತಂದೆ ಮತ್ತು ತನ್ನ ಪ್ರಾಣ ಕಾಪಾಡಿದ ಹಾಗೂ ಸೈತಾನನ ವಿರುದ್ಧ ಇರುವ ಅಕ್ಷ ಇಬ್ರನ್ನೂ ಬಿಟ್ಟು ಸೈತಾನನ ವಿಗ್ರಹವನ್ನು ಉಡೀಸ್ ಮಾಡಿದ್ದು ಸಿನಿಮಾದ ಒಟ್ಟು ಆಶಯವನ್ನು ಎತ್ತಿ ಹಿಡಿದಿದೆ. ಇನ್ನು ನಟನೆಯ ವಿಚಾರಕ್ಕೆ ಬರುವುದಾದರೆ ಮೊದಲ ಬಾರಿ ತೆರೆಯ ಮೇಲೆ ಬಂದಿರುವ ಅಗ್ನಿ ಶ್ರೀಧರ್ ಭಾವನಾತ್ಮಕ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದು, ಸಂಭಾಷಣೆಯ ದೃಶ್ಯಗಳಲ್ಲಿ ಇನ್ನಷ್ಟು ನೈಜತೆಗೆ ಒತ್ತು ಕೊಡಬಹುದಿತ್ತೇನೋ. ಉಳಿದಂತೆ ಅಚ್ಯುತ್ ಕುಮಾರ್, ಅರುಣ್ ಸಾಗರ್ ಎಂದಿನ0ತೆ fullmarks ತೆಗೆದುಕೊಂಡಿದ್ದಾರೆ. ಇನ್ನು, ನಿರ್ಮಾಪಕರು ಥೀಯೆಟರ್ ಮುಂದೆ ಸಂಯುಕ್ತ ಹೆಗ್ಡೆಯ ಬೃಹತ್ ಕಟ್‌ಔಟ್ ನಿಲ್ಲಿಸಿದ್ದು ಯಾಕೆ ಎಂಬುದು ಚಿತ್ರದಲ್ಲಿ, ಅವರ ಪಾತ್ರ ನೋಡಿದರೆ ಅರ್ಥವಾಗುತ್ತದೆ. ಅಕ್ಷಳಾಗಿ ಸಂಯುಕ್ತ ಹೆಗ್ಡೆ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ಪಾತ್ರ ಪೋಷಣೆ ಅದ್ಭುತವಾಗಿದೆ. ಬರೀ ಕಣ್ಣಲ್ಲೇ ಮಾತನಾಡುವ ಸಂಯುಕ್ತ ನಿಜಕ್ಕೂ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. 

Read More : Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

ಸಿನಿಮಾದ ಬಹುಪಾಲು ಕಥೆ ರಾತ್ರಿಯಲ್ಲೇ ನಡೆಯುವುದರಿಂದ, ಈ ಹಿಂದೆ ಮಲ್ಲುವುಡ್‌ನ ಸೂಪರ್ ಸ್ಟಾರ್ ಮಮ್ಮುಟ್ಟಿ ಅಭಿನಯದ `ಫೈಯರ್‌ಮ್ಯಾನ್ಸಿನಿಮಾದ ಮೂಲಕ ಲೈಮ್ ಲೈಟಿಗೆ ಬಂದ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಕೆಲಸ ಇಡೀ `ಕ್ರೀಮ್ನ ಹೈಲೈಟ್. ಸುನೋಜ್ ಕಟ್ಟಿಕೊಟ್ಟಿರುವ ಫ್ರೇಮ್‌ಗಳು ನಿರ್ದೇಶಕ ಅಭಿಶೇಕ್ ಬಂಸ0ತ್‌ಗೆ ವರದಾನವಾಗಿದೆ. ನಿರ್ದೇಶಕ ಅಭಿಶೇಕ್ ಬಂಸ0ತ್ ಅವರದ್ದು `ಕ್ರೀಮ್ಮೊದಲ ಚಿತ್ರವೆಂದು ಅನ್ನಿಸುವುದಿಲ್ಲ. ಕಲೆವು ಶಾಟ್‌ಗಳು ಪ್ರೇಕ್ಷಕನ ತಾಳ್ಮೆಯನ್ನು ಪರಿಕ್ಷಿಸುತ್ತಾದರೂ, ಬಿಜಿಎಮ್ ಜೊತೆ ಅನುಭವಿಸಿದರೆ ಒಂದು ಬೆರೆಯದೇ ಅನುಭವ ನೀಡುತ್ತದೆ. ಶಿವಕುಮಾರ್ ಅವರ ಆ(ಹಾ)ರ್ಟ್ ವರ್ಕ್ ಅತ್ಯಂತ ನೈಜವಾಗಿದೆ. ರೋಹಿತ್ ಸೋವೆರ್ ಸಂಗೀತ ಸೋ ಗುಡ್. ಸಂಕಲನಕಾರ ಆರ್ಯನ್ ಗೌಡ ಸಿನಿಮಾದ ಆಶಯವನ್ನರಿತು ಕತ್ತರಿ ಪ್ರಯೋಗ ಮಾಡಿದ್ದಾರೆ. ರಂಜಿ0ತ್ ಶೆಟ್ಟಿ ಮತ್ತು ಪ್ರಭು ಅವರ ಆಕ್ಷನ್ ಸೀಕ್ವೆನ್ಸ್ಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಇಂತಹದ್ದೊ0ದು ಅರಿವು ಮೂಡಿಸುವ ಚಿತ್ರವನ್ನು ಜನರಿಗೆ ಕೊಡಬೇಕೆಂಬ ಒತ್ತಾಸೆಯಿಂದ ದುಡ್ಡು ಹಾಕಿದ ದೇವೆಂದ್ರ ಅವರ ನಿರ್ಧಾರಕ್ಕೊಂದು ಸೆಲ್ಯೂಟ್. ಇನ್ನು ಸೈತಾನನ ಪರಮ ಭಕ್ತನಾದ ಪಟೇಲ್ ಸಿಟ್ಟುಬಂದಾಗ ಶೂ ಹಾಕಿಕೊಂಡೆ ಸೈತಾನನ ಮೂರ್ತಿ ಬಳಿ ಹೋಗುವುದು, ಅಲ್ಲಿವರಗೆ ಇಲ್ಲದ ಪೆಟ್ರೋಲ್ ಕ್ಯಾನ್‌ಗಳು climaxನಲ್ಲಿ ಅಕ್ಷಳ ಬಳಿಯಲ್ಲೇ ಇರುವದು, ಪ್ಲಾಸ್ಟಿಕ್ ಬಾಳೆ ಎಲೆ, ಡುಬ್ಲಿಕೇಟ್ ಕರೆನ್ಸಿ… ಚಿತ್ರದ ಆರಂಭದಲ್ಲಿ ಮಾಡಿದ ಬಲಿ ಪೂಜೆಗೂ, ಅಕ್ಷಳ ಬಲಿ ಪೂಜೆಗೂ ಸಾಕಷ್ಟು ವ್ಯತ್ಯಾಸ ಇರುವುದು.. ಹೀಗೆ ಸಣ್ಣ ಪುಟ್ಟ ಲಾಜಿಕ್ ಇಲ್ಲದ ಸಂಗತಿಗಳು, ಒಟ್ಟಾಗಿ ಸಿನಿಮಾ ಕಟ್ಟಿಕೊಡುವ ಅದ್ಭುತ ಅನುಭವದ ಮುಂದೆ ನಗಣ್ಯ. ಒಟ್ಟಿನಲ್ಲಿ, ಒಂದು international ಮಟ್ಟದಲ್ಲಿ ಕನ್ನಡವನ್ನು ಕೊಂಡೊಯ್ಯೊವ ಶಕ್ತಿ ಇರುವ `ಕ್ರೀಮ್ಚಿತ್ರ ಇಲ್ಲಿನ ಪ್ರೇಕ್ಷಕರಿಗೆ ಎಷ್ಟು ತಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

By-ಬಿ.ನವೀನ್ ಕೃಷ್ಣ, ಪುತ್ತೂರು   

Share this post:

Translate »