Sandalwood Leading OnlineMedia

ಅಭಿಮಾನಿಗಳಿಗೆ ಚಿರಋಣಿ ಎಂದ ಡಿ ಬಾಸ್

ಚಂದನವನದ ನಟ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಪೋಲ್ಯಾಂಡ್‌ನಲ್ಲಿ  ನಡೆಯುತ್ತಿದೆ. ಈ ಬಗ್ಗೆ ದರ್ಶನ್‌ ಅಪ್ಡೇಟ್ ಕೊಟ್ಟಿದ್ದಾರೆ. ಚಿತ್ರದಲ್ಲಿನ ತಮ್ಮ ಹೊಸ ಲುಕ್‌ ಫೋಟೊವನ್ನು ಹಂಚಿಕೊಂಡಿರುವ ಅವರು, ‘ಕ್ರಾಂತಿ ಚಿತ್ರದ ಶೂಟಿಂಗ್ ಪೋಲ್ಯಾಂಡ್‌ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ‘ ಎಂದು ದರ್ಶನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/Cfo6222p3tu/

ದರ್ಶನ್‌ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ವಿ. ಹರಿಕೃಷ್ಣ ಆ್ಯಕ್ಷನ್ ಕಟ್ ​ಹೇಳುವುದರ ಜೊತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡಿದ್ದಾರೆ

https://www.instagram.com/p/Cff2mFYqlSA/

ಈ ಸಿನಿಮಾದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳಲಾಗಿದೆ.. ಸದ್ಯ ಚಿತ್ರತಂಡ ಪೋಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದೆ. ಪೋಲ್ಯಾಂಡ್‌ನಲ್ಲಿ ಕ್ರಾಂತಿ ಸಿನಿಮಾದ ಶೂಟಿಂಗ್‌ ನಡೆಯುತ್ತಿರುವ ಬಗ್ಗೆ ನಟ ದರ್ಶನ್‌ ಟ್ವೀಟ್‌ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. 

Share this post:

Related Posts

To Subscribe to our News Letter.

Translate »