Sandalwood Leading OnlineMedia

ನಟ ಅರ್ಜುನ್ ರಮೇಶ್ ಹುಟ್ಟು ಹಬ್ಬದ ಪ್ರಯುಕ್ತ ಕುರುಡು ಕಾಂಚಾಣ ಹಾಡು ರಿಲೀಸ್ ಮಾಡಿದ ಚಿತ್ರತಂಡ.

ನಟ ಅರ್ಜುನ್ ರಮೇಶ್ ಹುಟ್ಟು ಹಬ್ಬದ ಪ್ರಯುಕ್ತ ಕುರುಡು ಕಾಂಚಾಣ ಹಾಡು ರಿಲೀಸ್ ಮಾಡಿದ ಚಿತ್ರತಂಡ.

ಈಗಾಗಲೇ ಭರ್ಜರಿ ಪ್ರೊಮೋಷನ್ ನಲ್ಲಿ ಚಿತ್ರ ತಂಡ ತೊಡಗಿಕೊಂಡಿದ್ದು ಜುಲೈ 1ರಿಂದ “ಕೌಟಿಲ್ಯ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

ಈಗಾಗಲೇ ಹಾಡುಗಳಿಂದ ಸದ್ದು ಮಾಡಿರುವ ಕೌಟಿಲ್ಯ ಚಿತ್ರವು ಜುಲೈ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಜೇಂದ್ರ ರವರ ನಿರ್ಮಾಣದಲ್ಲಿ ಪ್ರಬಾಕರ್ ಶೇರ್ ಖಾನೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಂತೆಯೇ ಮನಸಾರೆ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಇಬ್ಬರೂ ನಟರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
 
ಕೌಟಿಲ್ಯ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದು, ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ.

Share this post:

Translate »