Koutilya Official Trailer | Kannada Movie | Arjun Ramesh | Priyanka | Prabhakar |Vijendra | A2 Music
ಶ್ರೀ ಕಲ್ಲೂರು ಆಂಜನೇಯ ಮೂವೀಸ್ ಲಾಂಛನದಲ್ಲಿ ವಿಜೇಂದ್ರ ಬಿ.ಎ ನಿರ್ಮಿಸಿರುವ, ಪ್ರಭಾಕರ್ ಶೇರಖಾನೆ ನಿರ್ದೇಶಿಸಿರುವ “ಕೌಟಿಲ್ಯ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದು, ಈಗ ಟ್ರೇಲರ್ ಸದ್ದು ಮಾಡುತ್ತಿದೆ. ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷೆಣೆಯಾಗಿ ಜನಮನ ಗೆದ್ದಿದೆ. ಜೋಗಿ ಪ್ರೇಮ್, ರಕ್ಷಿತ್ ಶೆಟ್ಟಿ ಮುಂತಾದ ಸ್ಯಾಂಡಲ್ ವುಡ್ ಗಣ್ಯರು ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
“ಶನಿ” ಹಾಗೂ “ಮಹಾಕಾಳಿ” ಧಾರಾವಾಹಿಗಳಲ್ಲಿ ನಟಿಸಿರುವ, “ಜಂಟಲ್ ಮನ್” ಚಿತ್ರದ ಮೂಲಕ ಪ್ರಸಿದ್ದರಾಗಿರುವ ಹಾಗೂ ಪ್ರಸ್ತುತ “ಬಿಗ್ ಬಾಸ್” ಸ್ಪರ್ಧಿಯಾಗಿರುವ ಅರ್ಜುನ್ ರಮೇಶ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾಯಕ “ಬಿಗ್ ಬಾಸ್” ಶೋ ನಲ್ಲಿರುವಾಗಲ್ಲೇ ಈ ಚಿತ್ರ ಬಿಡುಗಡೆಯಾಗುತ್ತಿದೆ. ಪ್ರಸ್ತುತ ಜನರು ಚಿತ್ರ ನೋಡುವ ರೀತಿ ಸಂಪೂರ್ಣ ಬದಲಾಗಿದೆ. ಜನ ಒಳ್ಳೆಯ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಖಂಡಿತವಾಗಿಯೂ ಜನರ ಮನಸ್ಸಿಗೆ ಹತ್ತಿರವಾಗುವ ಉತ್ತಮ ಕಂಟೆಂಟ್ “ಕೌಟಿಲ್ಯ” ಚಿತ್ರದಲ್ಲಿದೆ ಎಂಬ ಭರವಸೆ ನಿರ್ಮಾಪಕರಿಗೆ ಹಾಗೂ ನಾನು ಸೇರಿದಂತೆ ನನ್ನ ಇಡೀ ಚಿತ್ರ ತಂಡಕ್ಕೆ ಇದೆ ಎನ್ನುತ್ತಾರೆ ನಿರ್ದೇಶಕ ಪ್ರಾಭಾಕರ್ ಶೇರಖಾನೆ.
`ವಾಮನ’ ಸಿನಿಮಾದ ಜಬರ್ದಸ್ತ್ ಟೀಸರ್ ರಿಲೀಸ್…ಆಕ್ಷನ್ ಮೂಡ್ ನಲ್ಲಿ ಶೋಕ್ದಾರ್ ಧನ್ವೀರ್
“ಮಹಾಕಾಳಿ” ಧಾರಾವಾಹಿಯಲ್ಲಿ ದೇವಿ ಪಾತ್ರ ಮಾಡಿದ್ದ ಪ್ರಿಯಾಂಕ ಚಿಂಚೋಳಿ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಪ್ರಿಯಾಂಕ ಚಿಂಚೋಳಿ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.ನೀನಾಸಂ ಅಶ್ವತ್, ಹರಣಿ, ರಘು ಪಾಂಡೇಶ್ವರ್, ಸೂರ್ಯ ಪ್ರವೀಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. “ಕೌಟಿಲ್ಯ” ಅಂದರೆ ಅರ್ಥಶಾಸ್ತ್ರದ ಪಿತಾಮಹ ಚಾಣಕ್ಯ. ಅರ್ಥಶಾಸ್ತ್ರದ ಒಂದು ಎಳೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗೌಸ್ ಫಿರ್ ಹಾಗೂ ಅರ್ಜುನ್ ರಮೇಶ್ ಹಾಡುಗಳನ್ನು ಬರೆದಿದ್ದು, ಕಿರಣ್ ಕೃಷ್ಣಮೂರ್ತಿ ಸಂಗೀತ ನೀಡಿದ್ದಾರೆ. ನೌಶದ್ ಆಲಮ್ ಛಾಯಾಗ್ರಹಣ ಹಾಗೂ ರಾಜ್ ಶಿವ ಸಂಕಲನ ಈ ಚಿತ್ರಕ್ಕಿದೆ.