ಆಗಸ್ಟ್ 26 ರಂದು ಚಾಣಕ್ಷ ನಿರ್ದೇಶಕನ, ‘ಕೌಟಿಲ್ಯ’ ದರ್ಶನ
ಕೌಟಿಲ್ಯ.. ಈ ಹೆಸರು ಕೇಳಿದಾಕ್ಷಣ ಅರ್ಥಶಾಸ್ತ್ರದ ಚಾಣಾಕ್ಯ. ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟು ಹೋರಾಡಿದಾತ ಚಾಣಾಕ್ಯ. ಆದರೆ ಈ ಇತಿಹಾಸವನ್ನು ಈಗ ಯಾಕೆ ಹೇಳುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಉತ್ತರವೂ ಇದೆ. ಕೌಟಿಲ್ಯ ಹೆಸರಿನ ಸಿನಿಮಾವೊಂದು ಗಾ0ಧಿನಗರದಲ್ಲಿ ಸದ್ದು ಮಾಡುತ್ತಿದೆ. ಯುವ ನಿರ್ದೇಶಕ ಪ್ರಭಾಕರ್ ಶೇರ್‌ಖಾನೆ ‘ಕೌಟಿಲ್ಯ’ ಚಿತ್ರದೊಂದಿಗೆ ಸಿನಿಮಾ ಲೋಕದಲ್ಲಿ ತಮ್ಮ ಪಯಣ ಆರಂಭಿಸಲು ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ಲವ್, ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್, ಮನಿಗ್ಯಾಬಲಿಂಗ್, ಒಟ್ಟಾರೆ ಹೇಳ್ಬೇಕು ಅಂದ್ರೆ ಪಕ್ಕಾ ಪೈಸಾ ವಸೂಲ ಸಿನಿಮಾ ಇದಾಗಿದೆ. 100% ಎಂಟರ್ಟೈನ್ಮೆ0ಟ್ ಮೂವಿಯಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರುಥಿಯೇಟರ್‌ಗೆ ಬಂದು ಸಿನಿಮಾ ನೋಡಬಹುದಾಗಿದೆ. ನಗುವಿನ ಜೊತೆಗೆ ಒಂದೊಳ್ಳೆ ಕಾಮಿಡಿ ಜೊತೆಗೆ ಕಂಟೆಂಟ್ ಖಂಡಿತ ಇರಲಿದೆ. ಈ ಮಧ್ಯೆ ಹಾಡುಗಳು ಎಲ್ಲರ ಕಿವಿ ತಂಪು ಮಾಡಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶನಿ ಧಾರಾವಾಹಿಯಲ್ಲಿ ಈಶ್ವರನ ಪಾತ್ರ ಮತ್ತು ಜಂಟಲ್ ಮ್ಯಾನ್ ನಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಅರ್ಜುನ್ ರಮೇಶ್ ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಇವರ ಜೋಡಿಯಾಗಿ ಪ್ರಿಯಾಂಕ ಚಿಂಚೋಳಿ ಕಾಣಿಸಿಕೊ0ಡಿದ್ದಾರೆ. ಹಿರಿಯ ಕಲಾವಿದರಾದ ನಿನಾಸಂ ಅಶ್ವಥ್, ರಘು ಪಾಂಡೇಶ್ವರ,ನಯನಾ (ಕಾಮಿಡಿ ಕಿಲಾಡಿಗಳು), ಮಾಡಿನೂರ್ ಮನು, ಚಿಲ್ಲರ್ ಮಂಜು (ಮಜಾ ಭಾರತ) ಕಾರ್ತಿಕ್ ಹುಲಿ (ಮಜಾ ಭಾರತ), ಸುಶ್ಮಿತಾ (ಮಜಾ ಭಾರತ), ಸೂರಜ್ (ಕಾಮಿಡಿ ಕಿಲಾಡಿಗಳು) ಸೂರ್ಯಪ್ರವೀಣ್, ಹರ್ಷಿತ್ (ಮಜಾ ಭಾರತ್) ಲಷ್ಮಿಶ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸ0ಯೋಜಿಸಿದ್ದಾರೆ ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ. ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಯು/ಎ ಪ್ರಮಾಣಪತ್ರ ಪಡೆದಿದ್ದು, ಆಗಸ್ಟ್ 26 ರಂದು ಚಿತ್ರ ತೆರೆಗೆ ಬರಲಿದೆ.
ಪ್ರಭಾಕರ್ ಶೇರ್‌ಖಾನೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ನಾಗನೂರು. ಬಾಲ್ಯದಿಂದಲೇ ಇವರಿಗೆಸಿನಿಮಾ ಕುರಿತು ಆಸಕ್ತಿಯಿತ್ತು. ಬಣ್ಣದಲೋಕದ ಕಡೆಗಿನ ಸೆಳೆತದ ಕಾರಣದಿಂದಾಗಿಯೇ ಬೆಂಗಳೂರಿಗೆ ಬಂದ ಇವರು, ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್ ಸೇರಿದರು. ಅಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತರು. ನಂತರ ‘ಗಾಳಿಪಟ’ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಗೊಂಬೆಗಳ ಲವ್’, ‘ನಾನು ಲವರ್ ಆಫ್ ಜಾನು’, ‘ಕೆಂಡಸ0ಪಿಗೆ’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಈಗ ತಮ್ಮದೇ ನಿರ್ದೇಶನದ ‘ಕೌಟಿಲ್ಯ’ ಚಿತ್ರದೊಂದಿಗೆ ವೀಕ್ಷಕರ ಎದುರು ಬರಲಿದ್ದಾರೆ.
ನಿರ್ದೇಶಕ ಪ್ರಭಾಕರ ಶೇರಖಾನೆ ಅವರು ಈ ಹಿಂದೆ ನಿರ್ದೇಶಕ ಸೂರಿ ಅವರೊಂದಿಗೆ ಕೆಂಡಸ0ಪಿಗೆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಮತ್ತು ಕಡಿಪುಡ್ಡಿಯಲ್ಲಿ ಸಹಬರಹಗಾರರಾಗಿ ಕೆಲಸ ಮಾಡಿದ್ದರು. ಇದೀಗ ಕೌಟಿಲ್ಯಕ್ಕೆ ದಿನಗಣನೆ ಶುರುವಾಗಿದ್ದು, ಕೌಟಿಲ್ಯ ನನ್ನ ಮೊದಲನೇ ಸಿನಿಮಾ ಆದ್ರೆ ಇದರ ಹಿಂದೆ ನೂರಾರು ಕಥೆಗಳುಕನಸುಗಳು ಇತ್ತು. ಆ ಕನಸು ಇಂದು ಈಡೇರುತ್ತಿದೆ. ನನ್ನ ಕನಸುಗಳಿಗೆ ಬಣ್ಣ ತುಂಬಿ ಮರು ಜನ್ಮ ನೀಡಿದ್ದು ಬ್ರಹ್ಮ , ನಮ್ಮ ನಿರ್ಮಾಪಕ ವಿಜೇಂದ್ರ ಸರ್ ಅವರು. ಕಥೆ ಕೇಳಿ ಹೊಸಬ ಅಂತಾನೂ ನೋಡದೆ ಸಿನಿಮಾಮಾಡೋದು ನನ್ನ ಚಿಕ್ಕಂದಿನಿ0ದ ಕನಸು ನಿನ್ನ ನಂಬಿದೀನಿ ಒಳ್ಳೆ ಸಿನಿಮಾ ಮಾಡಿ ಎಂದು ಹೇಳಿ ಸ್ಪಾಟ್ ಅಲ್ಲೇ ಅಡ್ವಾನ್ಸ್ ಕೊಟ್ಟರು.
-ಪ್ರಭಾಕರ್ ಶೇರ್‌ಖಾನೆ, ನಿರ್ದೇಶಕರು
ಜಂಟಲ್ ಮ್ಯಾನ್ ಸೆಟ್‌ನಲ್ಲಿದ್ದಾಗಲೇ ನನಗೆ ಈ ಆಫರ್ ಬಂದಿತ್ತು. ಟೈಟಲ್‌ಗೆ ತಕ್ಕ ಹಾಗೆ ನಾಯಕ ನಟನ ಪಾತ್ರ ಇರುತ್ತೆ. ಕೌಟಿಲ್ಯನ ಚಾಣಾಕ್ಷತನ ಜೊತೆಗೆ ಕ್ರಿಮಿನಲಿಸಂ ಉಪಯೋಗಿಸಿದರೆ, ಹೇಗೆಲ್ಲಾ ಲಾಭ ಆಗುತ್ತೆ ಎಂಬುದು ಈ ಚಿತ್ರದಲ್ಲಿ ನೀವು ನೋಡಬಹುದು. ಈ ಚಿತ್ರದಲ್ಲಿ ನಾನು ಮಾಸ್ ಹೀರೋ, ಲವ್ವರ್ ಬಾಯ್ಜೊತೆಗೆ ನವರಸಗಳಲ್ಲಿ ನನ್ನನ್ನು ಕಾಣಬಹುದು. ಜಂಟಲ್ ಮ್ಯಾನ್‌ನಲ್ಲಿ ನಾನು ಸ್ಟೆಲಿಶ್ ವಿಲನ್. ಅದೇ ರೀತಿಯ ಲುಕ್‌ನಲ್ಲಿ ಇಲ್ಲಿ ನಾನು ಹೀರೋ ಆಗಿದ್ದೀನಿ. ನನ್ನ ಪಾತ್ರಕ್ಕೆ ನಿರ್ದೇಶಕರು ಸಂಪೂರ್ಣವಾಗಿ ಸ್ವಾತಂತ್ರ‍್ಯ ನೀಡಿದ್ದಾರೆ. ನನ್ನ ಪಾತ್ರದ ಹೆಸರು ಗೋಡ್ಸೆ. ಆ ಹೆಸರು ಕೇಳಿನೆ ನಾನು ಶಾಕ್ ಆಗಿದ್ದೆ. ಹೊರಗಡೆ ಗಾಂಧಿ ತತ್ವ ಅನುಸರಿಸಿದರು, ಒಳಗಡೆ ಗೋಡ್ಸೆ ಇರುತ್ತಾನೆ. ಅದು ಸಿನಿಮಾದಲ್ಲಿನೋಡಿದಾಗಲೇ ಅರ್ಥವಾಗುವುದು.
-ಅರ್ಜುನ್ ರಮೇಶ್,ನಾಯಕ