ಶಶಾಂಕ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ, ನಿರ್ಮಾಪಕರಾಗಿ ಮತ್ತು ಗೀತರಚನೆಕಾರರಾಗಿ ತಮ್ಮದೇ ಆದ ಛಾಪು ಮೂಡಿಸಿದವರು. `ಸಿಕ್ಸರ್’ ಮೂಲಕ ನಿರ್ದೇಶಕರಾದ ಇವರು ತಮ್ಮ ಸಿನಿಪಯಣದಲ್ಲಿ ಸಿಕ್ಸರ್ ಬಾರಿಸುತ್ತಲೇ ಬಂದವರು. ಇವರ ನಿರ್ದೇಶನದ ಮೊಗ್ಗಿನ ಮನಸು ಚಿತ್ರ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಈ ಚಿತ್ರದ ಮೂಲಕವೇ ಕನ್ನಡಿಗರ ಹೆಮ್ಮೆಯ ನಟ ಯಶ್ ಅವರನ್ನು ಶಶಾಂಕ್ ಚಿತ್ರರಂಗಕ್ಕೆ ಪರಿಚಿಸಿದ್ದರು. ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣ-ಲೀಲಾ, ಮುಂಗಾರು ಮಳೆ -೨, ಲವ್ ೩೬೦.. ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ಈ ಮಹಾನ್ ಪ್ರತಿಭೆ ಈಗ `ಕೌಸಲ್ಯ ಸುಪ್ರಜಾ ರಾಮಾ’ ಎಂಬ ವಿಭಿನ್ನ ಕಥೆಯ ಚಿತ್ರದೊಂದಿಗೆ ಕನ್ನಡಿಗರ ಮುಂದೆ ಬಂದಿದ್ದಾರೆ, ಇವರ ನಿರ್ದೇಶನದ ಸಿನಿಮಾಗಳಲ್ಲಿ ಮುಖ್ಯವಾಗಿ ಇರುವ ಅಂಶವೆ0ದರೆ, ಫ್ಯಾಮಿಲಿ ಸೆಂಟಿಮೆ0ಟ್ ಮತ್ತು ಅನೂಹ್ಯವಾದ ಪ್ರೇಮ ಕಥೆ. ಅದರಲ್ಲೂ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾಗಳನ್ನು ಮಾಡುವುದರಲ್ಲಿ ಇವರು ನಿಸ್ಸೀಮರು. `ಕೌಸಲ್ಯಾ ಸುಪ್ರಜಾ ರಾಮ’ ಕೂಡ ಅಂಥದ್ದೇ ಒಂದು ಸಿನಿಮಾ. ಈ ಟೈಟಲ್ ಹೇಳಿಬಿಡುತ್ತದೆ ಇದೊಂದು ಅಮ್ಮ- ಮಗನ ಕಥೆ ಎಂಬುದು. ಹಾಗಿದ್ದರೆ ಅಮ್ಮ- ಮಗನ ಕಥೆ ಹೊತ್ತ ಸಾಕಷ್ಟು ಚಿತ್ರಗಳು ಈಗಾಗಲೇ ಬಂದಿದ್ದರೂ `ಕೌಸಲ್ಯ ಸುಪ್ರಜಾ ರಾಮಾ’ ಪ್ರೇಕ್ಕಷಕರಿಗೆ ಹತ್ತಿರವಾಗಲು ಕಾರಣವೇನು?
ಇದನ್ನೂ ಓದಿ: ಮೋಹಕ ತಾರೆ ರಮ್ಯಾ ಅಭಿನಯದ ಚಿತ್ರದಲ್ಲಿ ದಿಗಂತ್!?
`ಕೌಸಲ್ಯ ಸುಪ್ರಜಾ ರಾಮಾ’ ಶಶಾಂಕ್ ತಮ್ಮ ಸಿನಿಮಾಗಳಲ್ಲಿ ಫ್ಯಾಮಿಲಿ ಆಡಿಯೆನ್ಸ್ಗೆ ಇಷ್ಟವಾಗುವ ಕಥೆ ಹೇಳುವುದರ ಜೊತೆಗೆ ಒಂದಷ್ಟು ಸೂಕ್ಷ್ಮ ದಿಟ್ಟವಾಗಿ ತೆರೆಯೆ ಮೇಲೆ ತಂದಿದ್ದಾರೆ. ತಮ್ಮ ಹಿಂದಿನ ಚಿತ್ರಗಳಿಗಿಂತ `ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದಲ್ಲಿ ವಿಭಿನ್ನ ಪ್ರಯತ್ನವನ್ನು ಶಶಾಂಕ್ ಮಾಡಿದ್ದಾರೆ. ಸಿದ್ದೇಗೌಡ (ರಂಗಾಯಣ ರಘು) ಎಂಬ ವ್ಯಕ್ತಿಗೆ ತನ್ನ ಗಂಡಸ್ತನಕ್ಕೆ ಸವಾಲಾಕುವವನು ಹುಟ್ಟೇ ಇಲ್ಲ ಅನ್ನುವ ದುರಹಂಕಾರ. ತಾನೂ ಹೇಳಿದ್ದೇ ವೇದ ವಾಕ್ಯ ಅನ್ನುವ ಅಹಂ. ಹೆಣ್ಣೆಂದರೆ ತುಚ್ಛವಾಗಿ ಕಾಣುವ ಆತನ ಮಗನಾದ ರಾಮೇಗೌಡ (ಕೃಷ್ಣ) ಕೂಡ ತನ್ನಂತೆ ಇರಬೇಕು ಎಂಬುದು ಅವನ ಜೀವಮಾನದ ಆಸೆ. ಇವರಿಬ್ಬರ ಮನಸ್ಥಿತಿ ಕೊನೆಗೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಇಂಟ್ರೆಸ್ಟಿ0ಗ್ ರೂಪಕಗಳ ಮೂಲಕ ಪ್ರೇಕ್ಷಕನಿಗೆ ಆಪ್ತವಾಗುವಂತೆ ಚಿತ್ರಿಸಿದ್ದಾರೆ ಶಶಾಂಕ್. `ಗಂಡ್ಸೇ ಎಲ್ಲವೂ..ಗಂಡಸಿನಿ0ದ ಹೆಣ್ಣು ಹೊರತು.. ಹೆಣ್ಣಿನಿಂದ ಗಂಡಲ್ಲ’ ಎಂಬ ಈ ಅಪ್ಪ-ಮಗನ ಧೋರಣೆಯಿಂದ ಎನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದನ್ನು ಹಾಸ್ಯ ಮತ್ತು ಎಮೋಶನಲ್ ಅನ್ನು ಹದವಾಗಿ ಉಣಬಡಿಸಿದ್ದಾರೆ ಶಶಾಂಕ್.
ಇದನ್ನೂ ಓದಿ: *ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿ ಸತ್ಯರಾಜ್…’ಆರ’ ಸಿನಿಮಾ ಗುಂಗಿನಲ್ಲಿ ಪ್ರತಿಭಾನ್ವಿತ ಕಲಾವಿದ*
ಭಾರತೀಯ ಕುಟುಂಬಗಳಲ್ಲಿ ನಡೆಯಬಹುದಾದ ಕಥೆಯನ್ನು ಬಹಳ ನಾಜೂಕಾಗಿ, ಸಮರ್ಥ ಪಾತ್ರ ಪೋಷಣೆಯೊಂದಿಗೆ ಚಿತ್ರ ಮಾಡಲಾಗಿದೆ. ಚಿತ್ರದ ಸಿಂಪ್ಲಿಸಿಟಿಯೇ ಅದರ ಶಕ್ತಿ.. ಪುರುಷ ಪ್ರಧಾನ ಸಮಾಜದ ಬೂಟಾಟಿಕೆಯನ್ನು ತೆರೆದಿಡುತ್ತಲೇ ಚಿತ್ರ.. ಹೆಣ್ಣಿನ ಪ್ರಾಮುಖ್ಯತೆ ಮತ್ತು ಆಕೆಯ ತ್ಯಾಗದ ಬಗ್ಗೆ ಹೇಳುತ್ತದೆ. ಎಮೋಷನಲ್ ಲವ್ ಸ್ಟೋರಿಗಳನ್ನು ಸಮರ್ಥವಾಗಿ ಈ ಹಿಂದೆ ಹೇಳಿರುವ ಶಶಾಂಕ, ಈ ಬಾರಿ ತಾಯಿ ಸೆಂಟ್ ಮೆಂಟ್ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಶಶಾಂಕ್ ಬರೆದ ಕಥೆಗೆ ಯಧುನಂದನ್ ರಚಿಸಿರುವ ಚಿತ್ರಕಥೆ, ಸಂಭಾಷಣೆ ಸಿನಿಮಾದ ಅಸಲಿ ಆತ್ಮ. ಮೊದಲಾರ್ಧ ಎನನ್ನೂ ಗಂಭಿರವಾಗಿ ಹೇಳದೆಯೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾ, ಇಂಟರ್‌ವಲ್ ಬ್ಲಾಕ್‌ನಲ್ಲಿ ಅಚ್ಚರಿಯ ತಿರುವು ನೀಡುತ್ತದೆ. ಮುತ್ತುಲಕ್ಷ್ಮೀ ಎಂಬ ಪಾತ್ರದ ಹಿನ್ನೆಲೆಯನ್ನು ಎಷ್ಟು ಬೇಕೋ ಅಷ್ಟು ಬೇಕೋ ಅಷ್ಟೇ ತೋರಿಸಿರೋದು ಚಿತ್ರದ ಓಘವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಕಥೆ ಸಾಗಿದಂತೆ, ಕುತೂಹಲ ಮೂಡಿಸುವ ಕಥೆ CLIMAXನಲ್ಲಿ ಎಂಥವನನ್ನೂ ಎಮೋಷನಲ್ ಮಾಡಿ ಬಿಡುತ್ತದೆ.
ಇದನ್ನೂ ಓದಿ: *’ರಕ್ತಾಕ್ಷ’ ಮಾಸ್ ಟೀಸರ್ ರಿಲೀಸ್….ಪ್ರಮೋದ್-ರೋಹಿತ್ ಭರ್ಜರಿ ಆಕ್ಷನ್..ಭರವಸೆ ಮೂಡಿಸಿದ ಯುವ ಪ್ರತಿಭೆಗಳ ಚೊಚ್ಚಲ ಪ್ರಯತ್ನ*
ಶಶಾಂಕ್ ಕಲಾವಿದರ ಆಯ್ಕೆಯ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿರೋದು ಪ್ರತಿಯೊಂದು ನಟನ ಪರ್‌ಫಾಮೆನ್ಸ್ ನೋಡಿದಾಗ ಅರ್ಥವಾಘುತ್ತದೆ. `ಗಂಡಸ್ತನದ ರಾಯಭಾರಿ’ ಪಾತ್ರದಲ್ಲಿ ರಂಗಾಯಣ ರಘು ಅವರದ್ದು ತೂಕದ ನಟನೆ. ಕೌಸಲ್ಯಾ ಪಾತ್ರದಲ್ಲಿ ಸುಧಾ ಬೆಳವಾಡಿ ಮಾತಿಲ್ಲದೇ ಅಳಿಸುತ್ತಾರೆ. ಪುರುಷ ಪ್ರಧಾನ ಕುಟುಂಬದಲ್ಲಿ ಯಾವುದೇ ಸ್ವಾತಂತ್ರ‍್ಯ ಇಲ್ಲದೇ ಬದುಕುವ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಅವರು ಸಾಕಷ್ಟು ಜನಕ್ಕೆ ಇಂದಿಗೂ ರಿಲೇಟ್ ಆಗುತ್ತಾರೆ. ಡಾರ್ಲಿಂಗ್ ಕೃಷ್ಣ ಅವರ ಪಾತ್ರದಲ್ಲಿ ಎಷ್ಟು ಶೇಡ್ಸ್ಗಳಿವೆ ಎಂಬುದನ್ನೂ ತೆರೆಯಮೇಲೆಯೇ ನೋಡುವುದು ಒಳಿತು. ಕೊಟ್ಟ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ಡಾರ್ಲಿಂಗ್ ಕೃಷ್ಣ, ಪಾತ್ರವನ್ನು ತನ್ನದಾಗಿಸಿಕೊಳ್ಳುವ ಬಗೆ ಅಚ್ಚರಿ ಮೂಡಿಸುತ್ತದೆ. `ಪ್ರೇಮಂ ಪೂಜ್ಯಂ’ ಬೆಡಗಿ ಬೃಂದಾ ಆಚಾರ್ಯ ಇಲ್ಲಿ ಬೆರೇಯದೇ ರೀತಿಯಲ್ಲಿ ಕಾಣಿಸಿಕೊಂಡು ನೆನಪಿನಲ್ಲಿ ಉಳಿಯುತ್ತಾರೆ. ಪ್ರೇಕ್ಷಕರಿಗೆ ಶಾಕ್ ಕೊಡುವ ನಟಿ ಮಿಲನಾ ನಾಗರಾಜ್ ಪಾತ್ರದ ಬಗ್ಗೆ ಎನೂ ಹೇಳಿದರೂ ತಪ್ಪು.. ಅದನ್ನು ನೋಡಿಯೇ ಅನುಭವಿಸಬೇಕು. ನಟ ನಾಗಭೂಷಣ್ ಅವರ ಸಾಂಧರ್ಭಿಕ ಸಿಚುವೇಶನಲ್ ಕಾಮಿಡಿ ಇಷ್ಟವಾಗುತ್ತದೆ.
ಇದನ್ನೂ ಓದಿ: *ಲವ್ ಸಿನಿಮಾದ ಎರಡನೇ ಹಾಡು ರಿಲೀಸ್…ಒಂಟಿ ಅಲ್ಲ ನಾನೀಗ ಮೆಲೋಡಿ ಗಾನಲಹರಿ ಕೇಳಿ*
ಚಿತ್ರದ `ಶಿವಾನಿ..’, `ಇರು ಇರು..’ ಹಾಡುಗಳು ಪ್ರೇಕ್ಷಕರನ್ನು ಚಿತ್ರಮಂದಿರದವರೆಗೂ ಕರೆತರುವಲ್ಲಿ ಯಶಸ್ವಿಯಾಗಿದ್ದು, ಹಿನ್ನೆಲೆ ಸಂಗೀತದಲ್ಲೂ ಅರ್ಜುನ್ ಜನ್ಯ ಒಂದು ವಿಭಿನ್ನ ಅನುಭವ ಕೊಡುವಲ್ಲಿ ಗೆದ್ದಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣದ ಜ್ಞಾನವನ್ನು ಶಶಾಂಕ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ `ಕೌಸಲ್ಯಾ ಸುಪ್ರಜಾ ರಾಮ’ ಮುಂಜಾನೆ ಕೇಳುವ ಸುಪ್ರಭಾತದಂತೆಯೇ ಕುಟುಂಬ ಸಮೇತರಾಗಿ ನೋಡಬಹುದಾದ, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಸರಳ ವಿರಳ ಚಿತ್ರ.
by B.NAVEEN KRISHNA