Sandalwood Leading OnlineMedia

“ಕೊರಗಜ್ಜ” ಸಿನಿಮಾ: ಸೆಟ್ ಗೆ ನುಗ್ಗಿಹಾನಿಗೊಳಿಸಿದ್ದ,ಪೋಲೀಸ್ ಕಸ್ಟಡಿಯಲ್ಲಿದ್ದ ದೈವ ನರ್ತಕರೆನ್ನುವವರನ್ನು ಬಂಧಿಸದೆ ಬಿಟ್ಟುಬಿಡಲು ನಿರ್ದೇಶಕರ ಮನವಿ

ಕಳಸದಲ್ಲಿ “ಕೊರಗಜ್ಜ” ಸಿನಿಮಾದ ಹಾಡಿನ ಸನ್ನಿವೇಷದ ಚಿತ್ರೀಕರಣದ ವೇಳೆ ಮೊನ್ನೆ ಧಾಂದಲೆ ನಡೆಸಿದ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳನ್ನು ಬಂಧಿಸಿ ಕಳಸದ ಪೊಲೀಸ್ ಸ್ಟೇಷನ್ ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ನಿನ್ನೆ ರಾತ್ರಿ ಕೇಸು ದಾಖಲಿಸುವ ಪ್ರಕ್ರಿಯೆಯ ಭಾಗವಾಗಿ ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ ಸುಮಾರು 9.30ಕ್ಕೆ ಪೋನ್ ಮಾಡಿ ಆರೋಪಿಗಳನ್ನು ವಿಚಾರಣ ಖೈದಿಗಳಾಗಿಸಲು ಇ ಮೇಲ್ ನಲ್ಲಿ ದೂರು ನೀಡಲು ತಿಳಿಸಿದರು. ಇದಕ್ಕೆ ಉತ್ತರವಾಗಿ ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದರು. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂ ಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ “ಕತ್ತಲೆ” ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆಹಚ್ಚಲು ಚಿತ್ರದ ನಿರ್ದೇಶಕರು ಮನವಿ ಮಾಡಿದರು ಎಂದು ವರದಿಯಾಗಿದೆ.

ಇನ್ನೂ ಒದಿ ಚಿ.ತು ಯುವಕರ ಟೀಸರ್ ನ ಕೊಂಡಾಡಿದ ಅಧ್ಯಕ್ಷ ಶರಣ್

Share this post:

Related Posts

To Subscribe to our News Letter.

Translate »