Sandalwood Leading OnlineMedia

*ಕೋಮಲ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ “ಯಲಾಕುನ್ನಿ”  ಚಿತ್ರದ ಫಸ್ಟ್ ಲುಕ್* *ಪೋಸ್ಟರ್ ವೈರಲ್*

 *ಕೋಮಲ್ ಅವರ ವಜ್ರಮುನಿ ಗೆಟಪ್ ಗೆ ಅಭಿಮಾನಿಗಳು ಫಿದಾ* .ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಹಾಗೂ ಎನ್ ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ  “ಯಲಾ ಕುನ್ನಿ” ಚಿತ್ರದ  ಫಸ್ಟ್ ಲುಕ್  ನಾಯಕ ಕೋಮಲ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೋಮಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.ಈ ಫಸ್ಟ್ ಲುಕ್ ನಲ್ಲಿ ಕೋಮಲ್ ಅವರು ಹಿರಿಯ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಲುಕ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಗಣ್ಯರು ಈ ಫಸ್ಟ್ ಲುಕನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಓದಿ ಸುದೀಪ್ ಮೇಲೆ ಗಂಭೀರ ಆರೋಪ; ಕಿಚ್ಚ ಎಡವಿದ್ದೆಲ್ಲಿ?!

“ಯಲಾಕುನ್ನಿ” ಚಿತ್ರದಲ್ಲಿ ಕೋಮಲ್ ಅವರು ಬಹುಭಾಗ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.”ಮೇರಾ ನಾಮ್ ವಜ್ರಮುನಿ ” ಎಂಬ ಅಡಿಬರಹ ಹಾಗೂ “ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ” ಎಂಬ ಬರಹದೊಂದಿಗೆ “ಯಲಾಕುನ್ನಿ” ಚಿತ್ರ ಬರಲಿದೆ. ನವರಸ ನಾಯಕ ಜಗ್ಗೇಶ್ ರವರ ಮಗ “ಯತಿರಾಜ್” ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.

Share this post:

Translate »