ಆಗಸ್ಟ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ “ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ”ಕ್ಕೆ “ಏಪ್ರಾನ್ ಪ್ರೊಡಕ್ಷನ್ಸ್” ಸಂಸ್ಥೆ ನಿರ್ಮಿಸಿರುವ, ಖ್ಯಾತ ಕತೆಗಾರ ಕಾ.ತಾ ಚಿಕ್ಕಣ್ಣನವರ ಕತೆಯಾಧಾರಿತ ಚಂಪಾ ಪಿ ಶೆಟ್ಟಿಯವರ ನಿರ್ದೇಶನದ ಕನ್ನಡದ ‘ಕೋಳಿ ಎಸ್ರು’ ಸಿನೆಮಾ ಆಯ್ಕೆಗೊಂಡಿದೆ. ಮತ್ತು ಇದೇ ಚಿತ್ರದ ನಟಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೆಟ್ ಆಗಿದ್ದಾರೆ. ಚಂಪಾ ಶೆಟ್ಟಿಯವರು ಈಗಾಗಲೇ ತಮ್ಮ ನಿರ್ದೇಶನದ ನಾಟಕಗಳ ಮೂಲಕ, ನಟನೆಯ ಮೂಲಕ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ತಮ್ಮ ಚೊಚ್ಚಲ ಚಿತ್ರ `ಅಮ್ಮಚ್ಚಿಯೆಂಬ ನೆನೆಪು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಗಮನ ಸೆಳೆದಿದ್ದರು.
ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಬಾಲಿವುಡ್ ಖ್ಯಾತ ನಟಿಯರ ಜೊತೆ ಅಕ್ಷತಾ ನಾಮಿನೇಟ್ ಆಗಿರುವುದು ಕನ್ನಡದ ಹೆಮ್ಮೆ ಎಂದೇ ಹೇಳಬಹುದು. ಇತ್ತೀಚೆಗೆ ನಡೆದ ಕೆನಡಾದಲ್ಲಿ ಆಯೋಜಿಸಲ್ಪಟ್ಟ ‘ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಕೂಡ ಕೋಳಿ ಎಸ್ರು ಸಿನೆಮಾ ಪ್ರದರ್ಶನಗೊಂಡು, ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.
ವಿಜಯ್ ಸೇತುಪತಿಯನ್ನು ಹುಚ್ಚ ಎಂದ ಶಾರುಖ್ ಖಾನ್, ಜವಾನ್ ಚಿತ್ರದ ನಟನೆ ಸಮಯದಲ್ಲಿ ನಡೆದ ಘಟನೆ.
ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಷಯ. ಈಗಾಗಲೇ ಹಲವಾರು ಹೊರ ದೇಶಗಳ ಹಾಗೂ ಭಾರತೀಯ ಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.
ಅಟ್ಲಿ ಎಂಬ ಸಿನಿಮಾ ಮಾಂತ್ರಿಕ, ಸಿನಿಮಾ ತಾಂತ್ರಿಕ, ಒಟ್ಟಾರೆ ಚಿತ್ರಗಳ ಒಂದು ನೋಟ, ಹಿಟ್ ಎಷ್ಟು, ಫ್ಲಾಪ್ ಎಷ್ಟು.!?
‘ಕೋಳಿ ಎಸ್ರು’ ಸಿನೆಮಾ ಆಯ್ಕೆಯಾದ ಚಿತ್ರೋತ್ಸವಗಳು ಹಾಗೂ ಪ್ರಶಸ್ತಿಗಳ ಹೀಗಿದೆ ನೋಡಿ:
- ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಯು.ಎಸ್ ಎ) 2. ಇಂಡೋ ಜರ್ಮನ್ ಫಿಲ್ಮ್ ವೀಕ್ (ಜರ್ಮನಿ)
- ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಕೆನಡಾ) 4. ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಆಸ್ಟ್ರೇಲಿಯಾ)
- ಅಜಂತಾ ಎಲ್ಲೋರ ಅಂತರರಾಷ್ಟ್ರೀಯ ಚಿತ್ರೋತ್ಸವ (ಔರಂಗಾಬಾದ್) 6. ಅಂತರಾಷ್ಟ್ರೀಯ ಚಿತ್ರೋತ್ಸವ ತ್ರಿಶೂರ್ (ಕೇರಳ) 7.ಅಂತರಾಷ್ಟ್ರೀಯ ಚಿತ್ರೋತ್ಸವ ಇರಿಂಜಾಲಕುಡ (ಕೇರಳ) 8.ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ (ಬೆಂಗಳೂರು) 9. ನಿಟ್ಟೆ ಅಂತರಾಷ್ಟ್ರೀಯ ಚಿತ್ರೋತ್ಸವ (ಮಂಗಳೂರು) ಪ್ರಶಸ್ತಿಗಳು
- ಅತ್ಯುತ್ತಮ ಭಾರತೀಯ ಚಿತ್ರ ‘ಕೋಳಿಎಸ್ರು’ (ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ )
- ಅತ್ಯುತ್ತಮ ನಿರ್ದೇಶಕಿ, ಚಂಪಾ ಪಿ ಶೆಟ್ಟಿ (ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
3 ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ (ಒಟ್ಟವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
- ಅತ್ಯುತ್ತಮ ನಟಿ, ಅಕ್ಷತಾ ಪಾಂಡವಪುರ (ಅಜಂತಾ ಎಲ್ಲೋರ ಅಂತರಾಷ್ಟ್ರೀಯ ಚಿತ್ರೋತ್ಸವ)
- ಅತ್ಯುತ್ತಮ ಬಾಲನಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿ- ಅಪೇಕ್ಷಾ ಚೋರನಹಳ್ಳಿ (ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ)