ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ಪ್ರಿಯಾಂಕ ಉಪೇಂದ್ರ ಅಭಿನಯದ “ಕರ್ತ ಕರ್ಮ ಕ್ರಿಯ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನಡೆಯಿತು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು. ವೇದಾಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೇದಾಂತ್ ಗೌಡ ಹಾಗೂ ಶಿವ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜಕಿರಣ್ ಜೆ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ನಟಿಸಿದ್ದ 1980 ಚಿತ್ರವನ್ನು ನಿರ್ದೇಶಿಸಿದ್ದ ರಾಜಕಿರಣ್ ಅವರಿಗೆ ಇದು ಎರಡನೇ ಚಿತ್ರ.
ಹೆಚ್ಚಿನ ಓದಿಗಾಗಿ;- ಜೀವನದ ಸುತ್ತಾಟದ ಸುತ್ತ “ರಂಗಿನ ರಾಟೆ”
ಕ್ರೈಂಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಜುಲೈ ಮೊದಲವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಣ ನಡೆಯಲಿದೆ. “ಕರ್ತ ಕರ್ಮ ಕ್ರಿಯ” ವಿಭಿನ್ನ ಶೀರ್ಷಿಕೆ. ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬ ಮಾತಿಗೆ ಅನುಗುಣವಾಗಿ ಕಥೆ ಹೆಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜಕಿರಣ್.ಜೀವ ಆಂಟೋನಿ ಛಾಯಾಗ್ರಹಣ, ಆನಂದರಾಜ್ ವಿಕ್ರಮ್ ಸಂಗೀತ ನಿರ್ದೇಶನ, ಲೋಕೇಶ್ ಪುಟ್ಟೇಗೌಡ ಸಂಕಲನ ಹಾಗೂ ಪುಷ್ಪರಾಜ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್ ನರೇಂದ್ರಬಾಬು ಸಂಭಾಷಣೆ ಬರೆಯುತ್ತಿದ್ದಾರೆ.
`777 ಚಾರ್ಲಿ’ ನಿರ್ದೇಶಕ ಕಿರಣ್‌ರಾಜ್ ಸಂದರ್ಶನ
“ಕರ್ತ ಕರ್ಮ ಕ್ರಿಯ” ಇದೇ ಹೆಸರಿನ ಚಿತ್ರ ತೆಲುಗಿನಲ್ಲಿ ೨೦೧೮ರಲ್ಲಿ ತೆರೆಕಂಡಿತ್ತು. ನಾಗು ಗವಾರ ನಿರ್ದೇಶನದ ಚಿತ್ರದಲ್ಲಿ ಹೊಸಬರೇ ನಟಿಸಿದ್ದು ಸ್ವಲ್ಪ ಮಟ್ಟಿನ ಸದ್ದು ಮಾಡಿತ್ತು. ಮರ್ಡರ್ ಮಿಸ್ಟರಿಯ ಜಾನರ್ ಚಿತ್ರ ಇದಾಗಿದ್ದು, ಕನ್ನಡದಲ್ಲಿ ಇದೇ ಕಥೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರಾ ಅನ್ನುವ ಗುಮಾನಿ ಚಿತ್ರದ ಟೈಟಲ್ ಡಿಸೈನ್ ನೋಡಿದರೆ ಬಾರದಿರದು.