ಕಾರುಣ್ಯಾ ಹಾಗೂ ಕೀರ್ತಿ ಇಬ್ಬರೂ ಸಹ ಙಕಾರ್ನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆದರೆ ಆ ಸಂದರ್ಭದಲ್ಲಿ ಕೀರ್ತಿ ಕಾರು ಪಂಚರ್ ಆಗುತ್ತದೆ. ನಂತರ ಅವಳು ಕೆಲಘಡೆ ಇಳಿದು ಛೆ ಯಾಕೆ ಹೋಗಾಯ್ತು ನಾನು ಇಂದು ಯಾವುದೇ ಕಾರಣಕ್ಕೂ ಆ ಡಾನ್ಸ್ ವರ್ಕ್ಶಾಪ್ಗೆ ಹೋಗಲೇಬೇಕು ಎಂದು ಹಠ ಹಿಡಿಯುತ್ತಾಳೆ.
ಆದರೆ ಕಾರುಣ್ಯಾಗೆ ಇದು ಇಷ್ಟ ಆಗೋದಿಲ್ಲಾ. ಅಲ್ಲಿಗೆ ನೀನು ಹೋಗೋದು ಬೇಡ ಎಂದು ಹಠ ಮಾಡುತ್ತಾಳೆ. ಆದ್ರೆ ಕೀರ್ತಿಯ ಹಠದ ಮುಂದೆ ಯಾರ ಹಠವೂ ನಿಲ್ಲೋದಿಲ್ಲಾ. ಅವಳು ನಾನು ಹೋಗಲೇಬೇಕು ಎನ್ನುತ್ತಾ ಬೇರೆ ಕಾರಿಗೆ ಕೈ ಮಾಡುತ್ತಾಳೆ. ಇದಿಲ್ಲಾ ಅಂದ್ರೆ ಇನ್ನೊಂದು ಕಾರಿಗೆ ಹೋಗ್ತೀನಿ ಅಂತ ಹೇಳ್ತಾ ಇದ್ಲು.
ಇದಾದ ನಂತರ ಕಾರುಣ್ಯಾ ತುಂಬಾಗಟ್ಟಿಯಾಗಿ ಹೇಳುತ್ತಾಳೆ. ಕಾರ್ ಪಂಚರ್ ಆಗಿದೆ ನೀನು ಅತಿಯಾಗಿ ಆಡ್ಬೇಡ ಎಂದು. ಯಾಕೆ ಅಮ್ಮಾ? ಅದು ಎಷ್ಟು ಇಂಪಾರ್ಟೆಂಟ್ ನಿನ್ನ ಕರಿಯರ್ ಗ್ರೌತ್ ಆಗುತ್ತೆ ಅಂತೆಲ್ಲಾ ಇಷ್ಟೊತ್ತು ನೀನೇ ಹೇಳ್ತಾ ಇದ್ದೆ. ಆದ್ರೆ ಯಾಕೆ ಈಗ ಬೇಡ ಎಂದು ಹೇಳ್ತಾ ಇದೀಯಾ ಅಂತ ಕೇಳುತ್ತಾಳೆ.
ಇದನ್ನೂ ಓದಿ :ಸಲ್ಮಾನ್ ಖಾನ್ ಮೇಲೆ ಯಾಕಿಷ್ಟು ದ್ವೇಷ : ಅವರ ಹತ್ಯೆ ಪ್ರಕರಣದಲ್ಲಿ ಕೇಳಿ ಬಂತು ಹೊಸ ಹೆಸರು..!
ಯಾಕಂದ್ರೆ ಅಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಬಂದಿರುತ್ತಾರೆ. ಅದಕ್ಕೆ ನಾನು ಅಲ್ಲಿಗೆ ಹೋಗಬೇಕು ಎಂದು ಕೀರ್ತಿ ಹೇಳುತ್ತಾಳೆ. ನಾನು ಅದಕ್ಕೇ ನೀನು ಹೋಗೋದು ಬೇಡ ಎಂದು ಹೇಳ್ತಾ ಇರೋದು ಎಂದು ಹೇಳುತ್ತಾಳೆ. ಅವರಿಬ್ಬರನ್ನು ನೀನು ಅಲ್ಲಿ ನೋಡಿ ಬೇಸರ ಮಾಡಿಕೊಳ್ಳೋದು ಬೇರೆ ರೀತಿ ವರ್ತನೆ ಮಾಡೋದು ನನಗೆ ಇಷ್ಟ ಇಲ್ಲಾ ಎಂದು ಹೇಳುತ್ತಾಳೆ.
ಆಡ್ತಾ ಇರೋ ಮಾತ್ ಕೇಳಿದ್ರೆ ನೀನೇ ಕಾರ್ ಪಂಚರ್ ಮಾಡಿದ ರೀತಿ ಇದೆ ಎಂದು ಕೀರ್ತಿ ಹೇಳುತ್ತಾಳೆ. ಆಗ ಕಾರುಣ್ಯ ಹೌದು ನಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾಳೆ. ಇದಾದ ನಂತರ ಇತ್ತ ವೈಷ್ಣವ್ ಹಾಗೂ ಲಕ್ಷ್ಮೀ ಡಾನ್ಸ್ ಕಲಿಯುತ್ತಾ ಇರುತ್ತಾರೆ. ವಾರ್ಮ್ ಅಪ್ ಮಾಡಿಸುತ್ತಾ ಇರುತ್ತಾರೆ. ಆದರೆ ವೈಷ್ಣವ್ಗೆ ಅದು ಇಷ್ಟ ಆಗೋದಿಲ್ಲಾ. ಮನಸಿಲ್ಲದ ಮನಸಿನಿಂದ ಅವನು ಅಲ್ಲಿಗೆ ಬಂದಿರುತ್ತಾನೆ.
ಆಗ ಅವರಿಬ್ಬರು ಸಣ್ಣದಾಗಿ ಮಾತಾಡಿಕೊಳ್ಳುತ್ತಾ ಇರುತ್ತಾರೆ. ಯಾಕೆ ಸುಮ್ಮನೆ ನಿಂತುಕೊಂಡು ಇದೀರಾ ವ್ಯಾಯಾಮ ಮಾಡಿ ಎಂದು ಲಕ್ಷ್ಮೀ ಹೇಳುತ್ತಾಳೆ. ಇದೆಲ್ಲಾ ತುಂಬಾ ಕಷ್ಟ ನಂಗೆ ಮಾಡೋದಿಕ್ಕೆ ಆಗೋದಿಲ್ಲಾ ಅಂತ ಅವನು ಹೇಳುತ್ತಾನೆ. ಆದ್ರೆ ಅವಳು ಕೇಳೋದಿಲ್ಲಾ. ನೀವು ಮಾಡ್ಲೇಬೇಕು ಎಂದು ಹೇಳುತ್ತಾಳೆ.
ಅವನು ಹೇಳ್ತಾನೆ ನಂಗೆ ಇದೆಲ್ಲಾ ಬರೋದಿಲ್ಲಾ. ನೀವು ಡಾನ್ಸ್ ಕಲಿರಿ ನಾನು ದೂರದಲ್ಲಿ ಕುಳಿತು ನೋಡ್ತೀನಿ ಒಟ್ಟಿನಲ್ಲಿ ನಿಮ್ಮ ಜೊತೆ ಇರ್ತೀನಿ ಎಂದು ಹೇಳುತ್ತಾನೆ. ಆಗ ಅವನು ಅಲ್ಲಿಂದ ದೂರ ಸರಿತಾನೆ ಇವಳು ಕೈಹಿಡಿದು ನಿಲ್ಲಿಸುತ್ತಾಳೆ.