ತಮ್ಮ ತೀಕ್ಷ್ಣ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕಿರಿಕ್ ಕೀರ್ತಿಯವರು, ನಾನು ಈ ಜಗತ್ತಿಗೆ ವಿದಾಯ ಹೇಳಿಬಿಡಬೇಕು ಎಂದು ನಿರ್ಧಾರ ಮಾಡಿದ್ದೆ. ಡೆತ್ ನೋಟ್ನ್ನು ಕೂಡ ಬರೆದಿಟ್ಟಿದ್ದೆ’ ಎಂದು ಬರೆದುಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಶೀಘ್ರದಲ್ಲೇ ಕನ್ನಡಕ್ಕೆ ದುಲ್ಕರ್ ಸಲ್ಮಾನ್ ?
‘ನಿರ್ಧಾರ ಮಾಡಿಬಿಟ್ಟಿದ್ದೆ…ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ…ಕಾರಣಗಳು ಹಲವು…ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು… ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಹೂಡಿಕೆ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದವು.
ಗಮನಸೆಳೆಯುತ್ತಿದೆ ವಿಭಿನ್ನವಾಗಿ ರಿಲೀಸ್ ಆದ `ರೂಪಾಯಿ’ ಚಿತ್ರದ ಟ್ರೇಲರ್
ನಂತರ ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ. 10 ನಿಮಿಷ ಧ್ಯಾನ ಮಾಡಿದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ. ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ ಜೊತೆಗಿರಲಿ. ಡಿಪ್ರೆಷನ್‌ನಿಂದ ಮತ್ತೆ ವಾಪಸ್ ಬರಲು ಸಹಕರಿಸಿ. ಮತ್ತೆ ನನ್ನ ಮುಖದ ಮೇಲಿನ ನಗು ವಾಪಸ್ ತರುವ ತನಕ ಪ್ರಯತ್ನ ನಿರಂತರ… ಇದು ಹೇಳಿಕೊಳ್ಳಬಾರದ ವಿಷಯ.. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ’ ಎಂದು ಕಿರಿಕ್ ಕೀರ್ತಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇಂತಹ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಕಿರಿಕ್ ಕೀರ್ತಿಯವರು ರಿವೀಲ್ ಮಾಡಿಲ್ಲ.