ಕನ್ನಡದಲ್ಲಿ ಮತ್ತೊಂದು “ಕಿರಿಕ್ ಸ್ಟೋರಿ”
ಮೆಕಾನಿಕ ಹುಡುಗ ಮತ್ತು ಶ್ರೀಮಂತ ಹುಡುಗಿಯ ಸುತ್ತ ನಡೆಯುವ ಜಗಳ, ಪ್ರೀತಿ ಕಥಾವಸ್ತುವನ್ನು ಇಟ್ಟುಕೊಂಡು ಬಹತೇಕ ಹೊಸಬರ ತಂಡವೊAದು “ಕಿರಿಕ್” ಚಿತ್ರವನ್ನು ತೆರೆಹೆ ತರಲು ಸಜ್ಜಾಗಿದೆ.
ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರವಿ ಶೆಟ್ಟಿ ನಾಯಕಿಯಾಗಿ ಪೂಜಾ ರಾಮಚಂದ್ರ ಕಾಣಿಸಿಕೊಂಡಿದ್ದಾರೆ ಮತ್ತು ಹೊನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಬಲರಾಜವಾಡಿ, ನಾಗಮಂಗಲ ಜೈರಾಮ್, ಕುರಿ ರಂಗ, ಸೀರುಂಡೆ ರಘು, ನಿಹಾಲ್ ಸಾಗರ್, ಜ್ಯೋತಿ ಮರೂರು, ರಾಧಕಾ ಶೆಟ್ಟಿ, ರಾಮಿಗೌಡ, ಸಿದ್ದಾರ್ಥ್ ಮತ್ತಿತರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀ ಮುಕ್ತಿನಾಗ ಫಿಲಿಂಸ್ ಬ್ಯಾನರ್‌ನಲ್ಲಿ ನಾಗರಾಜು ನಿರ್ಮಿಸಿ ನಾಗತಿಹಳ್ಳಿ ಗಂಗಾಧರ್ ಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.