ವಿಜಯ್- ರಶ್ಮಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಬಹಳ ದಿನಗಳಿಂದ ಕೇಳಿಬರ್ತಿದೆ. ‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಲಿಪ್ ಲಾಕ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದರು. ಇವರಿಬ್ಬರನ್ನು ಮತ್ತೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೋ ಇಲ್ವೋ? ಒಳ್ಳೆ ಸ್ನೇಹಿತರು ಎನ್ನುವುದು ನಿಜ.
ಸದ್ಯ ವಿಜಯ್ ದೇವರಕೊಂಡ ನಟನೆಯ ‘ಕಿಂಗ್‌ಡಮ್’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದನ್ನು ನೋಡಿ ರಶ್ಮಿಕಾ ಮಂದಣ್ಣ ಮೆಚ್ಚಿ ಕಾಮೆಂಟ್ ಮಡಿದ್ದಾರೆ. ಚಿತ್ರಕ್ಕೆ ಗೌತಮ್ ತಿನ್ನನೂರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮತ್ತೊಮ್ಮೆ ರಗಡ್ ಲುಕ್‌ನಲ್ಲಿ ದೇವರಕೊಂಡ ದರ್ಶನ ಕೊಟ್ಟಿದ್ದಾರೆ. ಜ್ಯೂ. ಎನ್‌ಟಿಆರ್ ಖಡಕ್ ವಾಯ್ಸ್ ಓವರ್ ಹಿನ್ನೆಲೆಯಲ್ಲಿ ‘ಕಿಂಗ್‌ಡಮ್’ ಅನ್ನು ಪರಿಚಯಿಸಲಾಗಿದೆ. ಹೈವೋಲ್ಟೇಜ್ ಆಕ್ಷನ್ ಹಾಗೂ ಭಾವೋದ್ವೇಗದ ಸನ್ನಿವೇಶಗಳನ್ನು ಟೀಸರ್‌ನಲ್ಲಿ ನೋಡಬಹುದು.
ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ಯುದ್ಧದಿಂದ ನಲುಗಿದ ಸಮುದಾಯ. ಎಲ್ಲೆಲ್ಲೂ ಬೆಂಕಿಯ ಜ್ವಾಲೆ. ಹೆಣದ ರಾಶಿ. ಭಾರೀ ಹಿಂಸಾಚಾರ ನಡುವೆ ಅಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಮುಂದಾದ ಧೈರ್ಯಶಾಲಿ ಪೊಲೀಸ್ ಅಧಿಕಾರಿ ಎಂಟ್ರಿ ಕೊಡುವಂತೆ ‘ಕಿಂಗ್‌ಡಮ್’ ಟೀಸರ್ ಕಟ್ಟಿಕೊಡಲಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.”ವಿಜಯ್ ದೇವರಕೊಂಡ ಪ್ರತಿ ಬಾರಿ ಏನಾದರೂ ಮೆಂಟಲ್ ಹಿಡಿಸುವಂತಹ ಅದ್ಭುತದೊಂದಿಗೆ ನಮ್ಮ ಮುಂದೆ ಬರ್ತಿರ್ತಾನೆ. ಬಹಳ ಹೆಮ್ಮೆ ಎನಿಸುತ್ತದೆ” ಎಂದು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇನ್ನು ‘ಋಷಿ’ ಎಂದು ಬರೆದುಕೊಂಡಿದ್ದು ಇದು ದೇವರಕೊಂಡಗೆ ರಶ್ಮಿಕಾ ಇಟ್ಟಿರುವ ನಿಕ್‌ನೇಮ್ ಎನ್ನುವ ಊಹಾಪೋಹ ಶುರುವಾಗಿದೆ.