ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಬಿಲ್ಲ ರಂಗ ಭಾಷಾ’. ಕಿಚ್ಚನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟು ಕೊಳ್ಳಲಾಗಿದ್ದು, ಈ ‘ಬಿಲ್ಲ ರಂಗ ಭಾಷಾ’ಮೇಲೆ ಈಗಾಗಲೇ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಬಿಲ್ಲ ರಂಗ ಬಾಷ ಚಿತ್ರದ ಚಿತ್ರೀಕರಣ ಬುಧವಾರದಿಂದ (ಏಪ್ರಿಲ್ 16) ಆರಂಭವಾಗಿದೆ.
ಚಿತ್ರ ತಂಡ ಚಿತ್ರದ ಚಿತ್ರೀಕರಣ ಆರಂಭದ ಜೊತೆಗೆ ಸುದೀಪ್ ಅವರ ಫಸ್ಟ್ ಲುಕ್’ನ್ನೂ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕಿಚ್ಚನ ಫಸ್ಟ್ ಲುಕ್ ಸೂಪರ್ ಆಗಿದ್ದು, ಹಿಮದ ನಡುವೆ ಸುದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡಕ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.ಚಿತ್ರ ತಂಡ ಚಿತ್ರದ ಚಿತ್ರೀಕರಣ ಆರಂಭದ ಜೊತೆಗೆ ಸುದೀಪ್ ಅವರ ಫಸ್ಟ್ ಲುಕ್’ನ್ನೂ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕಿಚ್ಚನ ಫಸ್ಟ್ ಲುಕ್ ಸೂಪರ್ ಆಗಿದ್ದು, ಹಿಮದ ನಡುವೆ ಸುದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡಕ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.
ಸಿನಿಮಾ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀಪ್ ಪೋಸ್ಟ್ ಹಂಚಿಕೊಂಡಿದ್ದಾರೆ. ‘2209 AD BRB first blood’ ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ. ಪೋಸ್ಟರ್‌ನಲ್ಲಿ ಸುದೀಪ್ ಜಬರ್ದಸ್ತ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.