ಬಿಗ್ ಬಾಸ್ ಸೀಸನ್ 10ಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಫಿನಾಲೆಗೆ ತೀರಾ ಹತ್ತಿರವಿರುವ ಮನೆ ಸದಸ್ಯರ ತಲೆಯಲ್ಲಿ ಉಳಿದಿರುವುದು ಕೇವಲ ಗೆಲುವು. ಅದಕ್ಕಾಗಿಯೇ ಆಟ-ಅಂಕ ಎಂದು ಬಂದಾಗ, ದೀದಿನೂ ಇಲ್ಲ, ಫ್ರೆಂಡು ಇಲ್ಲ. ಆ ರೀತಿಯ ನಡವಳಿಕೆಗಳು ಬಿಗ್ ಬಾಸ್ ಮನೆಯಲ್ಲಿ ಕಂಡು ಬರುತ್ತಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ.
ಈಗಾಗಲೇ ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಜನ ನಿರೀಕ್ಷೆ ಮಾಡುತ್ತಿದ್ದ ಪ್ರಶ್ನೆಯೇ ಮೂಡಿದೆ. ಕಿಚ್ಚ ಸುದೀಪ್ ಅವರು ಕೂಡ ಮನೆಯೊಳಗೆ ಆದಂತ ಅನ್ಯಾಯದ ಬಗ್ಗೆ ಧ್ವನಿ ಎತ್ತುವ ಸೂಚನೆ ನೀಡಿದ್ದಾರೆ. ಈ ವಾರ ಪೂರ್ತಿ ʻಟಿಕೆಟ್ ಟು ಫಿನಾಲೆʼ ಟಾಸ್ಕ್‌ಗಳನ್ನೇ ಆಡಿಸಲಾಗಿತ್ತು. ಆ ಟಾಸ್ಕ್‌ನಲ್ಲಿ ಗೆದ್ದು, ಅಂಕ ಹೆಚ್ಚಾಗಿ ಪಡೆದವರಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗುವ ಅದ್ಭುತವಾದಂತ ಅವಕಾಶ ನೀಡಲಾಗಿತ್ತು. ಅದರಂತೆ ಅಂಕಗಳಲ್ಲಿ ಮೊದಲ ಸ್ಥಾನದಲ್ಲಿ ಪ್ರತಾಪ್ ಇದ್ದರೆ, ಎರಡನೇ ಸ್ಥಾನದಲ್ಲಿ ಸಂಗೀತಾ, ಮೂರನೇ ಸ್ಥಾನದಲ್ಲಿ ನಮ್ರತಾ ಇದ್ದರು.
ಬಳಿಕ ಬಿಗ್ ಬಾಸ್ ಮನೆ ಮಂದಿಗೆ ಮತ್ತೊಂದು ಅವಕಾಶ ನೀಡಿತ್ತು. ಒಬ್ಬರನ್ನು ಆಯ್ಕೆ ಮಾಡುವುದಕ್ಕೆ. ಅದರಲ್ಲಿ ಎಲ್ಲರು ಸಂಗೀತಾ ಅವರನ್ನೇ ಆಯ್ಕೆ ಮಾಡಿದ್ದರು. ಹಾಗಾದರೆ ಟಾಸ್ಕ್ ಆಡಿದ್ದಕ್ಕೆ ಬೆಲೆ ಎಲ್ಲಿಂದ ಬಂತು ಅನ್ನೋದು ಹೊರಗಿದ್ದ ಬಂದಂತ ಪ್ರಶ್ನೆಗಳಾಗಿದ್ದವು. ಇದಕ್ಕೆ ಕಿಚ್ಚನಿಂದ ಇಂದು ಉತ್ತರ ಸಿಗಲಿದೆ.
ʻಬಿಗ್ ಬಾಸ್ ಮೇಲೆ ಫಸ್ಟ್ ಟೈಮ್ ಆರೋಪ. ವಾರಪೂರ್ತಿ ಟಾಸ್ಕ್ ಆಡಿ , ಲೀಡ್ ನಲ್ಲಿದ್ದವರನ್ನು ಬಿಟ್ಟು ವೋಟಿಂಗ್ ಆಧಾರದಲ್ಲಿ ಫೈನಲಿಸ್ಟ್ ಸೆಲೆಕ್ಷನ್. ತಪ್ಪಾಗಿದ್ದು ಎಲ್ಲಿ..? ಈ ನ್ಯಾಯ ಅಂತ ಎಲ್ಲಾರೂ ಅಂದುಕೊಂಡಿದ್ದಾರೆ ಅದು ಸಿಗಬೇಕಾಗಿರುವುದು ಯಾರಿಗೆ..?ʼ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ ಕಿಚ್ಚನ ಪಂಚಾಯ್ತಿಯಲ್ಲಿ.