Sandalwood Leading OnlineMedia

ಲಕ್ಕಿ ಮ್ಯಾನ್ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ, ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ: ಕಿಚ್ಚ ಸುದೀಪ್

ಲಕ್ಕಿ ಮ್ಯಾನ್ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ, ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್

ಸೆಪ್ಟೆಂಬರ್ 9 ಅಂದು ಪುನೀತ್ ರಾಜ್ಕುಮಾರ್ ಅವರ ‘ಲಕ್ಕಿ ಮ್ಯಾನ್’ ಸಿನಿಮಾ ಬಿಡುಗಡೆ ಆಗಲಿದೆ. ಅಪ್ಪು ನಿಧನರಾಗುವುದಕ್ಕೂ ಮುನ್ನ ಈ ಚಿತ್ರದಲ್ಲಿ ನಟಿಸಿದ್ದರು. ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಸಿಗುತ್ತಿರುವ ಅವಕಾಶವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆಯಿತು. ಆ ಇವೆಂಟ್ಗೆ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಮಾತನಾಡಿದ ಅವರು ಪುನೀತ್ ಬಗ್ಗೆ ಭಾವುಕ ನುಡಿಗಳನ್ನು ಹಂಚಿಕೊಂಡರು.

ಈ ಸಿನಿಮಾ ರಿಲೀಸ್ ಆದಾಗ ಎಲ್ಲರೂ ಎರಡೂ ಕೈಗಳನ್ನು ಚಾಚಿ ತಬ್ಬಿಕೊಂಡು ನೋಡಿ. ಯಾಕೆಂದರೆ, ಮತ್ತೆ ಬೇಕು ಎಂದರೂ ಕೂಡ ಇದು ಸಿಗಲ್ಲ. ಇರುವಾಗ ನಾವು ಬೆಲೆ ಕೊಡುತ್ತೇವೆ. ಕಳೆದುಕೊಂಡ ನಂತರ ಅದಕ್ಕೆ ಇನ್ನೂ ಜಾಸ್ತಿ ಬೆಲೆ ಕೊಡುತ್ತೇವೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಆಗಿತ್ತು. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಟ್ರೇಲರ್ ನೋಡುವಾಗ ನಾನು ಸ್ಮೈಲ್ ಮಾಡುತ್ತಿದ್ದೆ. ಯಾಕೆಂದರೆ ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ತಬ್ಬಿಕೊಂಡು ಅನುಭವಿಸಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


ಈ ಚಿತ್ರಕ್ಕೆ ವಿ2 ವಿಜಯ್ ವಿಕ್ಕಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ಅವರು ನಾಯಕಿಯರಾಗಿ ನಟಿಸಿದ್ದಾರೆ.

Share this post:

Related Posts

To Subscribe to our News Letter.

Translate »