Sandalwood Leading OnlineMedia

ಜಪಾನ್​ನಲ್ಲೂ ಸುದೀಪ್​ ಅಭಿಮಾನಿಯಿಂದ ರಕ್ಕಮ್ಮ ಹಾಡಿಗೆ ಡ್ಯಾನ್ಸ್​; ವಿಡಿಯೋ ವೈರಲ್​

ಜಪಾನ್​ನಲ್ಲೂ ಸುದೀಪ್​ ಅಭಿಮಾನಿಯಿಂದ ರಕ್ಕಮ್ಮ ಹಾಡಿಗೆ ಡ್ಯಾನ್ಸ್​; ವಿಡಿಯೋ ವೈರಲ್​

ಕಿಚ್ಚ ಸುದೀಪ್​ ನಟನೆಯ ವಿಕ್ರಾಂತ್​ ರೋಣ’ (Vikran Rona) ಸಿನಿಮಾ ಗೆಲುವಿನ ನಗೆ ಬೀರಿದೆ. ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಎಸ್​ಎಸ್​ ರಾಜಮೌಳಿ (S.S Rajamouli ) ಅವರಂತಹ ದಿಗ್ಗಜ ನಿರ್ದೇಶಕರು ಕೂಡ ಭೇಷ್​ ಎಂದಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅವರ ವೃತ್ತಿಜೀವನದಲ್ಲಿ ಬಿಗ್ಗೆಸ್ಟ್​ ಓಪನಿಂಗ್​ ಪಡೆದ ಸಿನಿಮಾ ಎಂಬ ಖ್ಯಾತಿಗೆ ವಿಕ್ರಾಂತ್​ ರೋಣ ಪಾತ್ರವಾಗಿದೆ.

ರಾ ರಾ ರಕ್ಕಮ್ಮ..’ (Ra Ra Rakkamma) ಹಾಡಿಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮತ್ತು ಲಕ್ಷಾಂತರ ಅಭಿಮಾನಿಗಳು ರೀಲ್ಸ್ ಮಾಡಿದ್ದಾರೆ. ಈಗ ಜಪಾನ್​ನಲ್ಲಿನ ವ್ಯಕ್ತಿಯೊಬ್ಬರು ಇದೇ ಹಾಡಿಗೆ ರೀಲ್ಸ್​ ಮಾಡಿ ಗಮನ ಸೆಳೆದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿದೇಶಿ ನೆಲದಲ್ಲೂ ಕಿಚ್ಚ ಸುದೀಪ್​ ಬಗ್ಗೆ ಜನರು ಇಟ್ಟುಕೊಂಡಿರುವ ಅಭಿಮಾನಕ್ಕೆ ಈ ವಿಡಿಯೋ ಸಾಕ್ಷಿ. ಕಿಚ್ಚನ ಅಭಿಮಾನಿಗಳು ಹೆಮ್ಮೆಯಿಂದ ಈ ವಿಡಿಯೋವನ್ನು ಶೇರ್​ ಮಾಡುತ್ತಿದ್ದಾರೆ.

 

ಸುದೀಪ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಯಾಗಿ ಹೆಜ್ಜೆ ಹಾಕಿರುವವ ಈ ಹಾಡು ಈಗಾಗಲೇ ಯುಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡಿದೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹಾಡನ್ನು ಅನುಪ್ ಭಂಡಾರಿ ಬರೆದಿದ್ದಾರೆ. 

ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಈ  ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ. ಯೂಟೂಬ್‌, ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹೀಗೆ ಎಲ್ಲಾ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. 

Share this post:

Related Posts

To Subscribe to our News Letter.

Translate »