ಕಿಚ್ಚ ಸುದೀಪ್ ಕುಟುಂಬದ ಕುಡಿಯೊಂದು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಅದೂ ಎರಡೆರಡು ಜವಾಬ್ದಾರಿ ಹೊತ್ತು, ಅವರು ಯಾರು ಅಂದ್ರೇ ಕಿಚ್ಚ ಸುದೀಪ್ ರವರ ಅಕ್ಕ ಸುಜಾತಾರವರ ಪುತ್ರ ಸಂಚಿತ್ ಸಂಜೀವ್. ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದು,ಬಹುತೇಕ ನಿರ್ದೇಶನದ ಜವಾಬ್ದಾರಿಯನ್ನು ಅವರೇ ಹೊರುವ ಸಾಧ್ಯತೆ ಇದೆ. ಸ್ವತಃ ಸುದೀಪ್ ರವರೇ ಅಕ್ಕನ ಮಗನನ್ನು ಲಾಂಚ್ ಮಾಡುತ್ತಿದ್ದಾರೆ. ಈಗಾಗಲೇ ಸಂಚಿತ್ ಗೆ “ಅಂಬಿ ನಿಂಗೆ ವಯಸ್ಸಾಯ್ತೋ”, “ವಿಕ್ರಾಂತ್ ರೋಣ” ಸಿನಿಮಾದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿರುವ ಅನುಭವವಿದೆ
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಕಲಾವಿದನಾಗಿ ಮತ್ತೊಬ್ಬ ವೈದ್ಯ ಡಾ.ಪಿ.ವಿ.ಆರ್ ಲೀಲಾ ಮೋಹನ್ ಆಗಮನ
ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಕಿಚ್ಚನ ಅಳಿಯ ಸಂಚಿತ್ ಇಂಡಸ್ಟ್ರಿಗೆ ಎಂಟ್ರಿ ನೀಡಲಿದ್ದಾರೆ. ಸಿನಿಮಾದ ನಾಯಕನಾಗಿರುವ ಜೊತೆಗೆ ನಿರ್ದೇಶನವನ್ನೂ ಸಂಚಿತ್ ಅವರೇ ಮಾಡಲಿದ್ದಾರೆ. ಎರಡೂ ಜವಾಬ್ದಾರಿ ಹೊತ್ತು ಬರುತ್ತಿರುವ ಇತ್ತೀಚೆಗಿನ ಯುವ ನಾಯಕ, ಈ ನಾಯಕನ ಮುಂದಿನ ಸಿನಿಮಾದ ಟೈಟಲ್ ಅನ್ನು ಜೂನ್ 15ರಂದು ಘೋಷಿಸಲಾಗುತ್ತಿದೆ.
ಇದನ್ನೂ ಓದಿ: ಅತ್ಯಾಚಾರ, ಕೊಲೆಯ ಬೆನ್ನು ಹತ್ತಿದ `ಆರಂಭ’!
ಈಗಾಗಲೇ ವಿ ಆರ್ ದಿ ಸೇಮ್ ಎಂಬ ಹೆಸರಿನ ಕಿರುಚಿತ್ರವನ್ನು ಸಂಚೀತ್ ನಿರ್ದೇಶನ ಮಾಡಿದ್ದಾರೆ. ಮುಂಬೈನಲ್ಲಿ ನಟನೆ ಕೂಡ ಕಲಿತು ಬಂದಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡೇ ಈ ಪ್ರತಿಭೆ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಸಂಚಿತ್ ಎಂಟ್ರಿ ಕೊಡುತ್ತಿರುವ ಸಿನಿಮಾವನ್ನು ಕೆ.ಪಿ.ಶ್ರೀಕಾಂತ್ ವೀನಸ್, ಲಹರಿ ಸಂಸ್ಥೆ ಮನೋಹರ್ ನಾಯ್ಡು , ಪ್ರಿಯಾ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚನ ಕುಟುಂಬದ ಕುಡಿ ಕನ್ನಡದ ಇನ್ನೊಂದು ಆಸ್ತಿ ಆಗುತ್ತಾ ನೋಡ್ಬೇಕು,