Sandalwood Leading OnlineMedia

ಕಿಚ್ಚನ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್‌ನಲ್ಲಿ ರಶ್ಮಿಕಾ ನಾಯಕಿ? 

ಬಾಲಿವುಡ್‌ನಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಈಗಾಗಲೇ ಕಿರಿಕ್ ಬೆಡಗಿಯ 2 ಹಿಂದಿ ಸಿನಿಮಾಗಳು ಬಂದೋಗಿದೆ. ಇದೀಗ ರಣ್‌ಬೀರ್ ಕಪೂರ್ ಜೊತೆ ‘ಅನಿಮಲ್’ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಇತ್ತ ತಮಿಳು, ತೆಲುಗು ಚಿತ್ರಗಳಲ್ಲೂ ಕಮಾಲ್ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಸೂಪರ್ ಹಿಟ್ ಸೀಕ್ವೆಲ್‌ಗೆ ರಶ್ಮಿಕಾ ಮಂದಣ್ಣ ಹೆಸರು ಹೇಳಿಬರ್ತಿದೆ.ಭಾರತೀಯ ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳೋದು, ಅಥವಾ ಈಗಾಗಲೇ ಹಿಟ್ ಆಗಿರುವ ಸಿನಿಮಾ ಕಥೆಯನ್ನು ಮುಂದುವರೆಸಿ ಮತ್ತೊಂದು ಸಿನಿಮಾ ಮಾಡುವ ಲೆಕ್ಕಾಚಾರ ನಡೀತಿದೆ. ಬಾಲಿವುಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಸೋತು ಸುಣ್ಣವಾಗಿದೆ. ಸೌತ್ ಸಿನಿಮಾಗಳನ್ನು ರಿಮೇಕ್‌ ಮಾಡಿ ಕೂಡ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ತೆರೆಗೆ ತರುವ ಪ್ರಯತ್ನ ನಡೀತಿದೆ.

ಇದನ್ನೂ ಓದಿ:  ಅಭಿಷೇಕ್ ಹಾಗೂ ಅವಿವಾ ಅದ್ದೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯಾತಿಗಣ್ಯರು, ಇಲ್ಲಿದೆ Exclusive Photos

ರಾಜಮೌಳಿ ನಿರ್ದೇಶನದ ‘ವಿಕ್ರಮಾರ್ಕುಡು’ ಸಿನಿಮಾ ದಶಕದ ಹಿಂದೆ ಸೂಪರ್ ಹಿಟ್ ಆಗಿತ್ತು. 2006ರಲ್ಲಿ ಬಂದಿದ್ದ ಈ ಚಿತ್ರದಲ್ಲಿ ರವಿತೇಜಾ ಅಡಬಲ್ ರೋಲ್‌ನಲ್ಲಿ ದರ್ಬಾರ್ ನಡೆಸಿ ಗೆದ್ದಿದ್ದರು. ಅನುಷ್ಕಾ ಶೆಟ್ಟಿ ಗ್ಲಾಮರ್‌ ಟಚ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಈ ಸಿನಿಮಾ ಮುಂದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರೀಮೆಕ್ ಆಗಿ ಸದ್ದು ಮಾಡಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ‘ವೀರ ಮದಕರಿ’ ಹೆಸರಿನಲ್ಲಿ ಸುದೀಪ್ ನಿರ್ದೇಶಿಸಿ, ನಟಿಸಿ ಸಕ್ಸಸ್ ಕಂಡಿದ್ದರು.‘ವಿಕ್ರಮಾರ್ಕುಡು’ ಚಿತ್ರವನ್ನು ಪ್ರಭುದೇವಾ ಹಿಂದಿಯಲ್ಲಿ ರೀಮೆಕ್ ಮಾಡಿದ್ದರು. ಅಕ್ಷಯ್‌ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಲೀಡ್ ರೋಲ್‌ಗಳಲ್ಲಿ ನಟಿಸಿ ಗೆದ್ದಿದ್ದರು. ಸಾಜಿದ್ ವಾಜಿದ್ ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇದೇ ಚಿತ್ರದ ಸೀಕ್ವೆಲ್‌ಗೆ ಈಗ ಬಾಲಿವುಡ್‌ನಲ್ಲಿ ತಯಾರಿ ನಡೀತಿದೆ.

ಇದನ್ನೂ ಓದಿ:  ಸಕ್ಸಸ್ ಖುಷಿಯಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’…ಅಮೋಘ ಪ್ರದರ್ಶನ ಕಾಣ್ತಿದೆ ಪೂಚಂತೇ ಕಥೆಯಾಧಾರಿತ ಸಿನಿಮಾ

‘ರೌಡಿ ರಾಥೋರ್’ -2 ಸಿನಿಮಾ ಬರುತ್ತೆ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಶುರುವಾಗಿದೆ. ಚಿತ್ರವನ್ನು ಪ್ರಭುದೇವಾ ನಿರ್ದೇಶನ ಮಾಡ್ತಾರೆ, ಆದರೆ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಸೀಕ್ವೆಲ್‌ನಲ್ಲಿ ನಟಿಸಲ್ಲ. ಬದಲಿಗೆ ಸಿದ್ದಾರ್ಥ್ ಮಲ್ಹೋತ್ರಾ, ಕೈರಾ ಲೀಡ್‌ ರೋಲ್‌ನಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಇದೀಗ ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಹೆಸರುಗಳು ಈ ಚಿತ್ರಕ್ಕಾಗಿ ಕೇಳಿಬರ್ತಿದೆ ಎನ್ನಲಾಗ್ತಿದೆ. ಸಂಜಯ್ ಲೀಲಾ ಬನ್ಸಾಲಿ ‘ರೌಡಿ ರಾಥೋರ್’ -2 ನಿರ್ಮಾಣ ಮಾಡ್ತಾರೆ ಎನ್ನಲಾಗ್ತಿದೆ.ಅಸಲಿಗೆ ‘ವಿಕ್ರಮಾರ್ಕುಡು’ ಕಥೆ ಬರೆದಿದ್ದು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್. ಈ ಹಿಂದೆ ಕೂಡ ಈ ಸಿನಿಮಾ ಸೀಕ್ವೆಲ್ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆದರೆ ರಾಜಮೌಳಿ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ ‘ವಿಕ್ರಮಾರ್ಕುಡು’ ಸೀಕ್ವೆಲ್ ಬರಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಆದರೆ ಆ ಸಿನಿಮಾ ರೀಮೆಕ್ ಮಾಡಿದ್ದ ಬಾಲಿವುಡ್ ಮಂದಿ ಸೀಕ್ವೆಲ್ ಮಾಡಲು ಹೊರಟಿದ್ದಾರೆ. ಬಾಲಿವುಡ್‌ನಲ್ಲಿ ಇಂತಹ ಪ್ರಯತ್ನಗಳು ಕಾಮನ್.

ಇದನ್ನೂ ಓದಿ:   ಬರೋಬ್ಬರಿ 23ವರ್ಷಗಳ ನಂತರ ವಿ.ಮನೋಹರ್ `ದರ್ಬಾರ್’! ಇದೇ ಶುಕ್ರವಾರ ಬಹುನಿರೀಕ್ಷಿತ ಚಿತ್ರ ತೆರೆಗೆ

ರೌಡಿ ರಾಥೋರ್ – 2′ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಿರುವುದು ನಿಜ. ಆದರೆ ಆ ಸಿನಿಮಾ ರೀಮೇಕ್‌ನಲ್ಲಿ ಶಾಹಿದ್- ರಶ್ಮಿಕಾ ನಟಿಸ್ತಿಲ್ಲ ಎನ್ನಲಾಗ್ತಿದೆ. ಸಿದ್ಧಾರ್ಥ್‌ – ಕೈರಾ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಶಾಹಿದ್- ರಶ್ಮಿಕಾ ಬೇರೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸುವ ಬಗ್ಗೆ ಮಾತುಗಳು ಕೇಳಿಬರ್ತಿದೆ. ಯಾವುದು ಸತ್ಯ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.

 

Share this post:

Related Posts

To Subscribe to our News Letter.

Translate »