Sandalwood Leading OnlineMedia

ಸುದೀಪ್ ಕಾಂಬಿನೇಷನ್‌ನಲ್ಲಿ ಮೆಗಾ ಪ್ರಾಜೆಕ್ಟ್? ಹುಟ್ಟು ಹಬ್ಬಕ್ಕೆ `ಹೊಂಬಾಳೆ’ ಗಿಫ್ಟ್?!

ಬಾದ್‌ಶಾ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಸುದೀಪ್ ಸದ್ಯ ಕಿಚ್ಚ46 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಹಾಗಾದರೆ ಈ ಸಿನಿಮಾ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆ ಮೂಡಿದೆ. ‘ವಿಕ್ರಾಂತ್ ರೋಣ’ ಬಳಿಕ ಬರೋಬ್ಬರಿ 1 ವರ್ಷ ಸುದೀಪ್ ಸಿನಿಮಾ ಚಿತ್ರೀಕರಣದಿಂದ ದೂರ ಉಳಿದಿದ್ದರು. ಕೆಸಿಸಿ, ಸಿಸಿಎಲ್‌ ಕ್ರಿಕೆಟ್, ಚುನಾವಣೆ ಪ್ರಚಾರ ಅಂತೆಲ್ಲಾ ಬ್ಯುಸಿ ಇದ್ದರು. ಇತ್ತೀಚೆಗಷ್ಟೆ ತಮಿಳಿನ ಕಲೈಪುಲಿ ಎಸ್. ತನು ನಿರ್ಮಾಣದಲ್ಲಿ ಕಿಚ್ಚ46 ಸಿನಿಮಾ ಘೋಷಿಸಿದ್ದರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮಹಾಬಲಿಪುರಂನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ.

 

ಇದನ್ನೂ ಓದಿ*ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಯಿತು “ಯಥಾಭವ” ಚಿತ್ರದ ಟೀಸರ್* .

ಕಿಚ್ಚ46 ಚಿತ್ರದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಹುಟ್ಟುಹಬ್ಬ ಆಚರಣೆಗಾಗಿ ಬೆಂಗಳೂರಿಗೆ ವಾಪಸ್ ಆಗಿರುವ ಸುದೀಪ್ ಶೀಘ್ರದಲ್ಲೇ ಮತ್ತೆ ಸೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಡಿ ಬರ್ತಿದೆ. ತಮಿಳು ಯುವ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುದೀಪ್ ಹುಟ್ಟುಹಬ್ಬಕ್ಕೆ ಮತ್ತೊಂದು ಟೀಸರ್ ಅಥವಾ ಪೋಸ್ಟರ್ ರಿವೀಲ್ ಆಗುವ ಸಾಧ್ಯತೆಯಿದೆ. ಕಿಚ್ಚ46 ಬಳಿಕ ಸುದೀಪ್ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ‘KGF’ ಸರಣಿಗೂ ಮುನ್ನ ಹೊಂಬಾಳೆ ಸಂಸ್ಥೆ ಕಿಚ್ಚನ ಜೊತೆ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅದಕ್ಕೆ ವೇದಿಕೆ ಸಿದ್ಧವಾದಂತೆ ಕಾಣುತ್ತಿದೆ. ಇತ್ತೀಚೆಗೆ ಹೊಂಬಾಳೆ ಸಂಸ್ಥೆ ಜೊತೆಗಿನ ಸುದೀಪ್ ಒಡನಾಟ ನೋಡಿ ಶೀಘ್ರದಲ್ಲೇ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ಸುದೀಪ್ ಕೂಡ 1 ವರ್ಷದ ಗ್ಯಾಪ್‌ನಲ್ಲಿ 3 ಕತೆಗಳನ್ನು ಫೈನಲ್ ಮಾಡಿರುವುದಾಗಿ ಹೇಳಿದ್ದರು. ದಿ ವೈರಲ್ ಫೀವರ್ ಸಂಸ್ಥೆ ಜೊತೆ ಸೇರಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ಪೌಡರ್’ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಸುದೀಪ್ ಭಾಗಿ ಆಗಿದ್ದರು. ದಿಗಂತ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು ಸೇರಿದಂತೆ ಸಾಕಷ್ಟು ಜನ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಸುದೀಪ್ ಕ್ಲಾಪ್ ಮಾಡಿದ್ದರು. ಇನ್ನು ಕೆಸಿಸಿ ಟೂರ್ನಿ ಸಮಯದಿಂದಲೂ ಕಾರ್ತಿಕ್ ಗೌಡ ಹಾಗೂ ಸುದೀಪ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿ ಶೀಘ್ರದಲ್ಲೇ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಇದನ್ನೂ ಓದಿಎರಡು ದಶಕಗಳ ನಂತರ ಮತ್ತೆ ನಟ ದರ್ಶನ್ ಮತ್ತು ಪ್ರೇಮ್ ಅವರನ್ನು ಒಂದಾಗಿಸಿದ `ಕೆವಿಎನ್’

ಸೆಪ್ಟೆಂಬರ್ 2ರಂದು ಸುದೀಪ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದೇ ಸುದೀಪ್ ಹಾಗೂ ಹೊಂಬಾಳೆ ಸಿನಿಮಾ ಘೋಷಣೆ ಆಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ ಹೊಂಬಾಳೆ ಸಂಸ್ಥೆ ಭಾರತೀಯ ಚಿತ್ರರಂಗದಲ್ಲೇ ಎಲ್ಲರ ಗಮನ ಸೆಳೆದಿದೆ. ಸುದೀಪ್ ಈ ಸಂಸ್ಥೆ ಜೊತೆ ಕೈಜೋಡಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಹೊಂಬಾಳೆ ಸಂಸ್ಥೆ ಈಗಾಗಲೇ ತೆಲುಗು, ತಮಿಳು, ಮಲಯಾಳಂನಲ್ಲೂ ಸಿನಿಮಾಗಳ ನಿರ್ಮಾಣ ಆರಂಭಿಸಿದೆ. 5 ವರ್ಷಗಳಲ್ಲಿ 3000 ಕೋಟಿ ರೂ. ಹಣವನ್ನು ಮನರಂಜನೆ ಕ್ಷೇತ್ರದ ಮೇಲೆ ಹೂಡುವುದಾಗಿ ಈಗಾಗಲೇ ವಿಜಯ್ ಕಿರಗಂದೂರ್ ಹೇಳಿದ್ದಾರೆ. ‘ಸಲಾರ್’ ಸರಣಿ, ‘ಕಾಂತಾರ’-2, ‘ರಿಚರ್ಡ್ ಆಂಟನಿ’ ಹೀಗೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಶುರುವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಿಸಲಿದೆ. ಆ ಲಿಸ್ಟ್‌ನಲ್ಲಿ ಸುದೀಪ್ ಜೊತೆಗಿನ ಸಿನಿಮಾ ಕೂಡ ಇರಲಿದೆ.

 

 

Share this post:

Related Posts

To Subscribe to our News Letter.

Translate »