Sandalwood Leading OnlineMedia

*ಜುಲೈ 6 ಕಿಚ್ಚನಿಗೆ ಸ್ಪೆಷಲ್ ಡೇ…ಹುಚ್ಚ@22..ಈಗ@11..ಫ್ಯಾನ್ಸ್ ಸೆಲೆಬ್ರೇಷನ್*

ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ?ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಈ ದಿನ ಬಹಳ ವಿಶೇಷ.. ಸುದೀಪ್ ಸಿನಿಕರಿಯರ್ ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಬಿಡುಗಡೆಯಾಗಿ ಸರಿಯಾಗಿ 22 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಸುದೀಪ್ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮ್ನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.

ಇನ್ನೂ ಓದಿ : *ಲೈಕಾ ಪ್ರೊಡಕ್ಷನ್ ಸಂಸ್ಥೆಯ ಹೊಸ ಸಿನಿಮಾ ಅನೌನ್ಸ್….ಸೆನ್ಸೇಷನಲ್ ಸಿನಿಮಾ ’2018’ ನಿರ್ದೇಶಕರ ಜೊತೆ ಕೈ ಜೋಡಿಸಿದ ಸುಭಾಷ್ ಕರಣ್*

ಅದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ಜಕ್ಕಣ್ಣ ಜೊಯೆ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜು.6ರಂದು. ಅಂದರೆ ಇವತ್ತಿಗೆ 11 ವರ್ಷ..ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ತುಂಬಾ ಸ್ಪೆಷಲ್.

*ಧೂಳ್ ಎಬ್ಬಿಸಿದ ಕಿಚ್ಚ 46 ಟೀಸರ್*ಕಿಚ್ಚ ಸುದೀಪ್ ಸದ್ಯ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 2ರಂದು ಯೂಟ್ಯೂಬ್ ಲೋಕಕ್ಕೆ ಎಂಟ್ರಿ ಕೊಟ್ಟ ಡಿಮೋನ್ ಟೀಸರ್ ಭಾರೀ ಸದ್ದು ಮಾಡ್ತಿದೆ. ರಕ್ತಸಿಕ್ತ ದೇಹದ ಹೆಬ್ಬುಲಿ ಘರ್ಜನೆ ಜೋರಾಗಿದೆ. ಇದೇ ಜುಲೈ 15ರಿಂದ ಸುದೀಪ್ ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.

Share this post:

Related Posts

To Subscribe to our News Letter.

Translate »