ಇತ್ತೀಚೆಗೆ ನಟ ಸುದೀಪ್ ವಿರುದ್ದ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ಮೂಲಕ ಸಾಕಷ್ಟು ಆರೋಪ ಮಾಡಿದ್ದರು. ಸುದೀಪ್ ಹಣ ಪಡದು, ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದರು. ಕುಮಾರ್ ಆರೋಪದ ನಂತರ ಒಗಟಿನ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಿ ಸುಮ್ಮನಾಗಿದ್ದ ಸುದೀಪ್, ಇದೀಗ ಮೌನ ಮುರಿದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇನ್ನೂ ಓದಿ *ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದಲ್ಲಿ ಮರಳಿ ಬರುತ್ತಿದೆ ‘ಟಿವಿ ಠೀವಿ’ ಪ್ರತ್ರಿಕೆ*
ವಕೀಲರ ಮೂಲಕ ನಿರ್ಮಾಪಕ ಕುಮಾರ್ ಅವರಿಗೆ ನೋಟಿಸ್ ಕಳುಹಿಸಿರುವ ಸುದೀಪ್, ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ, ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ (Defamation Case) ದಂಡ ಕಟ್ಟಿಕೊಡಿ’ ಎಂದಿದ್ದಾರೆ.
ಸುಳ್ಳು ಆರೋಪ -ಸಾಕ್ಷಿ ರಹಿತ ವಿವಾದ ಮತ್ತು ಕುಮಾರ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ನಿರ್ಮಾಪಕ ಎಂ.ಎನ್ ಸುರೇಶ್ ಮೇಲೆಯೂ ಕಿಚ್ಚನಿಂದ ತೀವ್ರ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು ಈ ಮೂಲಕ ಇಬ್ಬರು ನಿರ್ಮಾಪಕರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇನ್ನೂ ಓದಿ *ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಬಿಡುಗಡೆಯಾಯಿತು “BAD” ಚಿತ್ರದ ಫಸ್ಟ್ ಲುಕ್* ..
ಸುದೀಪ್ ಮತ್ತು ಕುಮಾರ್ ಒಟ್ಟಾಗಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಮತ್ತೊಂದು ಸಿನಿಮಾ ಮಾಡಲು ಇಬ್ಬರೂ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸಂಬಂಧವಾಗಿ ಸುದೀಪ್ ಅವರಿಗೆ ಕುಮಾರ್ ಹಣ ನೀಡಿದ್ದರು ಎಂದು ಸ್ವತಃ ಕುಮಾರ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.