Kiccha Sudeep: ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ‘ಕಿಚ್ಚ’ ಸುದೀಪ್ : ಹೂ ಮಳೆ ಸುರಿಸಿದ ಅಭಿಮಾನಿಗಳು
ಕಿಚ್ಚ ಸುದೀಪ್ (Kiccha Sudeep) ವಿಕ್ರಾಂತ್ ರೋಣ (Vikrant Rona) ಸಿನಿಮಾದ ಸಕ್ಸಸ್ ಹಿನ್ನೆಲೆಯಲ್ಲಿ ನಟ ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿದ್ದು, ಚಾಮುಂಡೇಶ್ವರಿ ತಾಯಿಗೆ ನಟ ಸುದೀಪ್ ಪೂಜೆ ಸಲ್ಲಿಸಿದ್ದಾರೆ.
ನಟನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಸುದೀಪ್ ಭಾವ ಚಿತ್ರ ಇರುವ ಧ್ವಜ ಹಿಡಿದು ಅಭಿಮಾನಿಗಳು ಬೆಟ್ಟಕ್ಕೆ ಬಂದಿದ್ದಾರೆ. ಇನ್ನು ಸುದೀಪ್ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿದ್ದು, ಕಿಚ್ಚನನ್ನ ನೋಡಿ ಸಂಭ್ರಮ ಪಟ್ಟಿದ್ದಾರೆ.
ಕಿಚ್ಚ ಸುದೀಪ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಮೋಡಿ ಮಾಡಿದವರು. ಇದೀಗ ಕಿರುತೆರೆಯಿಂದ ಒಟಿಟಿಗೂ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಒಟಿಟಿಯಲ್ಲಿಯೂ ಹೊಸ ಹವಾ ಸೃಷ್ಠಿ ಮಾಡಲು ಮುಂದಾಗಿದ್ದಾರೆ.ಕಿರುತೆರೆಯಲ್ಲಿ ಸುದೀಪ್ ನಡೆಸಿಕೊಡುವ ಬಿಗ್‍ಬಾಸ್ ರಿಯಾಲಿಟಿ ಶೋ, ಇದೀಗ ಇದೇ ಮೊದಲ ಬಾರಿಗೆ ಒಟಿಟಿಗೆ ದಾಪುಗಾಲು ಇರಿಸಿದೆ. ಹೀಗಾಗಿ ಒಂದಷ್ಟು ಕುತೂಹಲ ಹೆಚ್ಚಳಕ್ಕೂ ಕಾರಣವಾಗಿದೆ.