ಕಿಚ್ಚ ಸುದೀಪ್ (Kiccha Sudeep) ನಟನೆಯ ವಿಕ್ರಾಂತ್ ರೋಣ (Vikranth Rona) ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿದೆ. ದೇಶದಾದ್ಯಂತ ಸಿನಿಮಾ ಅಬ್ಬರಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೇರೆ ಬೇರೆ ಭಾಷೆಯ ಅಭಿಮಾನಿಗಳು ವಿಕ್ರಾಂತ್ ರೋಣನನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಪ್ಯಾನ್ ಇಂಡಿಯಾ ಹೀರೋ ಆಗಿ ಕಿಚ್ಚ ಸುದೀಪ್ ಅವರು ಮಿಂಚುತ್ತಿದ್ದಾರೆ.
Martin Movie : ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರದ ರಿಲೀಸ್ ರಿಲೀಸ್ ದಿನಾಂಕ ಮುಂದೂಡಿಕೆ ?
ದೇಶಾದ್ಯಂತ ಅವರ ಜನಪ್ರಿಯತೆ ಹೆಚ್ಚಿದೆ. ಈ ಚಿತ್ರದ ಪ್ರಚಾರದ ವೇಳೆ ಸುದೀಪ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಉತ್ತರ ಭಾರತದ ಹಲವು ಮಾಧ್ಯಮಗಳು ಕಿಚ್ಚನ ಸಂದರ್ಶನ ನಡೆಸಿವೆ. ಈ ವೇಳೆ ‘ಕನ್ನಡ’ (Kannada) ಎನ್ನುವ ಬದಲು ‘ಕನ್ನಡ್’ (Kannad) ಎಂದ ನಿರೂಪಕಿಗೆ ಸುದೀಪ್ ಅವರು ಕೂಡಲೇ ಖಡಕ್ ಉತ್ತರ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ
https://www.instagram.com/p/CgyVOmNpDs6/
ನಿರೂಪಕಿ ‘ಕನ್ನಡ್’ ಎಂದಾಗ ‘ಅದು ಕನ್ನಡ್ ಅಲ್ಲ.. ಕನ್ನಡ’ ಎಂದು ಸುದೀಪ್ ತಿದ್ದಿ ಹೇಳಿದ್ದಾರೆ. ಆ ನಿರೂಪಕಿ ‘ಕ್ಷಮಿಸಿ ಸರ್..’ ಎಂದು ಕ್ಷಮೆ ಕೇಳಿದರಾದರೂ ತಮ್ಮ ಮಾತನ್ನು ಕೊಂಚ ಸಮರ್ಥಿಸಿಕೊಳ್ಳಲು ಮುಂದಾದರು. ‘ನಾವು ಈಗ ತಾನೇ ಕಲಿಯುತ್ತಿದ್ದೇವೆ ಸರ್’ ಎಂದು ನಿರೂಪಕಿ ಹೇಳಿದರು. ‘ಹಿಂದಿ ಎಂದಿಗೂ ಹಿಂದ್ ಆಗುವುದಿಲ್ಲ.
ತೆಲುಗಿನಲ್ಲಿ ಬ್ಯಾನ್ ಆಗ್ತಾರ ಚಂದನ್?
ಅದೇ ರೀತಿ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸುದೀಪ್ ಸಂದರ್ಶನದ ತುಣುಕನ್ನು ಕನ್ನಡ ಅಭಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ತಮ್ಮ ಪಾಟ್ಸಪ್ ಸ್ಟೇಟಸ್ ಗಳಲ್ಲಿ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ ಇದೇ ಸಂದರ್ಭ ಈ ಮೊದಲು ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲೂ ನಡೆದಿತ್ತು.