ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾದ ಕತೆಯ ಎಳೆ ಚಿತ್ರೀಕರಣ ಹಂತದಲ್ಲಿರುವಾಗಲೇ ಸೋರಿಕೆಯಾಗಿದೆಯೇ? ಹೀಗೊಂದು ಅನುಮಾನ ಮೂಡಿದೆ.ಸೋಷಿಯಲ್ ಮೀಡಿಯಾದಲ್ಲಿ ಮ್ಯಾಕ್ಸ್ ಒನ್ ಲೈನ್ ಕತೆ ಹರಿದಾಡುತ್ತಿದ್ದು, ಇದನ್ನು ಹರಿಯಬಿಟ್ಟವರು ಯಾರು ಎಂದು ತಿಳಿದುಬಂದಿಲ್ಲ. ಸದ್ಯಕ್ಕೆ ಮ್ಯಾಕ್ಸ್ ಸಿನಿಮಾ ಚೆನ್ನೈನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಸುತ್ತಿದೆ.
ಸುದೀಪ್ ಈ ಸಿನಿಮಾದಲ್ಲಿ ಅರ್ಜುನ್ ಮಹಾಕ್ಷಯ್ ಎಂಬ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಸ್ಪೆಂಡ್ ಆಗಿ ಎರಡು ತಿಂಗಳ ಬಳಿಕ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಠಾಣೆಗೆ ಬರುವಾಗ ಸಚಿವರ ಪುತ್ರನೊಬ್ಬ ದೌರ್ಜನ್ಯವೆಸಗುವುದು ಕಂಡುಬರುತ್ತದೆ. ಈ ವೇಳೆ ಸಚಿವರ ಪುತ್ರನನ್ನು ಅರ್ಜುನ್ ಅರೆಸ್ಟ್ ಮಾಡುತ್ತಾರೆ. ಆದರೆ ದರುದೃಷ್ಟವಶಾತ್ ಅರ್ಜುನ್ ಕೊಲೆಯಾಗುತ್ತಾನೆ. ಹಾಗಿದ್ದರೆ ಅರ್ಜುನ್ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎಂಬುದೇ ಕತೆ ಎನ್ನಲಾಗಿದೆ.ಮ್ಯಾಕ್ಸ್ ಸಿನಿಮಾ ಔಟ್ ಆಂಡ್ ಔಟ್ ಆಕ್ಷನ್ ಸಿನಿಮಾವಾಗಿರಲಿದೆ. ವಿಜಯ್ ಕಾರ್ತಿಕೇಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ಏಪ್ರಿಲ್ ವೇಳೆಗೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ.