Sandalwood Leading OnlineMedia

*ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್* .

ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿದರು.  ‌ ಈ ಟ್ರೇಲರ್ ನಲ್ಲಿ ಬಹಳ ಒಳ್ಳೆಯ ಕಥೆಯನ್ನು ಕಂಡೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ ಸುದೀಪ್,ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷ ಇದೆ. ಶಶಾಂಕ್ ಅವರು ಎಮೋಷನ್ ಗಳನ್ನು ಹಿಡಿದಿಡುವ ರೀತಿ ನನಗೆ ಇಷ್ಟ. ಚಿತ್ರದ ಹಾಡುಗಳು ಚೆನ್ನಾಗಿವೆ. ಈ ಚಿತ್ರ ಸಹ ಚೆನ್ನಾಗಿ ಮೂಡಿಬಂದಿರುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇನ್ನೂ ಓದಿ ತಮಿಳು ಸಿನಿಮಾ ಜೈಲರ್ ಹಾಗೂ ಮಲಯಾಳಂ ಸಿನಿಮಾ ಜೈಲರ್ ಎರಡರ ನಡುವೆ ಕ್ಲಾಶ್, ಕೇರಳದಲ್ಲಿ ಗೊಂದಲಕ್ಕಿಡಾದ ಜೈಲರ್.

ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಇದು. ಕಾರಣ ಈ ಚಿತ್ರದ ಕಥೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ರಿಲೇಟ್ ಆಗುವ ಕಥೆ ಇದು. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ.   ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ನಿರೀಕ್ಷೆಗೂ ಮೀರಿ ಅವರು ನಟಿಸಿದ್ದಾರೆ. ಬೃಂದಾ ಅವರ ಅಭಿನಯ ಕೂಡ ಅದ್ಭುತವಾಗಿದೆ. ಜುಲೈ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇಷ್ಟವಾಗಬಹುದೆಂಬ ನಂಬಿಕೆ ಇದೆ ಎಂದು ನರ್ದೇಶಕ ಶಶಾಂಕ್ ತಿಳಿಸಿದರು.

ಇನ್ನೂ ಓದಿ ಚಿತ್ರ ರಂಗದ ಹಿರಿಯರ, ತಂತ್ರಜ್ಞರ, ನಟರ, ನಿರ್ದೇಶಕರ, ನಿರ್ಮಾಪಕರ ಮೆಚ್ಚುಗೆಗಳಿಸಿದ ಪರಂವಃ, ಚಿತ್ರ ಮತ್ತು ಚಿತ್ರ ತಂಡ,

 ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕಥೆ ಇದು ಎಂದ ನಾಯಕ ಡಾರ್ಲಿಂಗ್ ಕೃಷ್ಣ,  ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ಶಶಾಂಕ್ ಅವರು ಬಂದಾಗ, ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಕೇಳಿದರು. ನೀವು ನಿಮ್ಮ ಸ್ಟೈಲ್ ನಲ್ಲೇ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಮುಗಿದ ಚಿತ್ರ ಇದು. ನಟನೆ ಮಾಡಿದ್ದೇ ಗೊತ್ತಾಗಲಿಲ್ಲ. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ತಿಳಿಸಿದರು.

ಇನ್ನೂ ಓದಿ  *ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ರಿಲೀಸ್…ಈ ಹುಡುಗಿ ಎಷ್ಟು ಚೆಂದ ಎಂದಿದ್ಯಾರು?*

ಶಶಾಂಕ್ ಅವರು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಈ ಚಿತ್ರ‌ ನಿರ್ಮಾಣ ಮಾಡಿದ್ದೇವೆ.‌ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ಎಂದು ಬಿ.ಸಿ.ಪಾಟೀಲ್.

ಇನ್ನೂ ಓದಿ  *ಜುಲೈ 21 ರಂದು ಬಿಡುಗಡೆಯಾಗಲಿದೆ ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ “ಡೇವಿಡ್”*

ಚಿತ್ರದಲ್ಲಿ ನಟಿಸಿರುವ ಮಿಲನ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

Share this post:

Related Posts

To Subscribe to our News Letter.

Translate »