Sandalwood Leading OnlineMedia

ಅಕ್ಷಿತ್ ಸಿನಿಮಾಗೆ ಡಾಲಿ ಧನಂಜಯ್ ಸಾಥ್…ಖೆಯೊಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‌ ಶಶಿಕುಮಾರ್ ಅಭಿನಯದ ಹೊಸ ಸಿನಿಮಾಗೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಓ ಮೈ ಲವ್ ಚಿತ್ರದ ಬಳಿಕ ಅಕ್ಷಿತ್ ಖೆಯೊಸ್ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ನಟರಾಕ್ಷಸ ಡಾಲಿ ಧನಂಜಯ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಅಕ್ಷಿತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಜಿ ವೆಂಕಟೇಶ್ ಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಅಕ್ಷಿತ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಇದೇ‌ ಮೊದಲ ಬಾರಿಗೆ ಶಶಿಕುಮಾರ್ ಹಾಗೂ ಅಕ್ಷಿತ್ ಶಶಿಕುಮಾರ್ ಒಟ್ಟಿಗೆ ತೆರೆಹಂಚಿಕೊಂಡಿದ್ದು, ಅಪ್ಪ-ಮಗನ ಜುಗಲ್ ಬಂದಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

ಸದ್ದು ಮಾಡುತ್ತಿದೆ ಶಿವಣ್ಣ ಬಿಡುಗಡೆ ಮಾಡಿ, ಅಪ್ಪುಗೆ ಅರ್ಪಿಸಿದ `ನಗುವಿನ ಒಡೆಯ’ ಹಾಡು

ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಖೆಯೊಸ್ ಚಿತ್ರಕ್ಕೆ ವೆಂಕಟೇಶ್ ಪ್ರಸಾದ್ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಕ್ಷಿತ್ ಅದಿತಿ ವೈದ್ಯರಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನಿ, ಆರ್‌ಕೆ ಚಂದನ್ , ಶಿವಾನಂದ್ ಸಿಂದಗಿ, ಆರಾಧನಾ ಭಟ್ , ಮಿಮಿಕ್ರಿ ಗೋಪಿ ಮತ್ತು ನಾಗೇಂದ್ರ ಅರಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿ ಬ್ಲಾಕ್ ಪೆಬಲ್ ಎಂಟರ್ ಟೈನ್ಮೆಂಟ್ ನಡಿ ಪಾರುಲ್ ಅಗರ್ವಾಲ್, ಹೇಮಚಂದ್ರ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ವಿಜಯ್ ಹರಿಟ್ಸ್ ಸಂಗೀತ, ಸಂದೀಪ್ ವಲ್ಲೂರಿ,ದುಲಿಪ್ ಕುಮಾರ್ ಛಾಯಾಗ್ರಾಹಣ, ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇನ್ನು, ಕನ್ನಡದಲ್ಲಿ ಖೆಯೊಸ್ ಅಂದರೆ ಅವ್ಯವಸ್ಥೆ ಎಂಬ ಅರ್ಥವಿದೆ, ಚಿತ್ರದಲ್ಲಿ ನಿರ್ದೇಶಕರು ಯಾವ ರೀತಿಯ ಅವ್ಯವಸ್ಥೆಯ ಬಗ್ಗೆ ಹೇಳಲು ಹೊರಟಿದ್ದಾರೆ ಅನ್ನುವುದು ಚಿತ್ರದ ತಂಡ ಕಂಟೆAಟ್‌ಗಳನ್ನು ರಿಲೀಸ್ ಮಾಡಿದ ಮೇಲಷ್ಟೇ ಗೊತ್ತಾಗಲಿದೆ.

 

Share this post:

Related Posts

To Subscribe to our News Letter.

Translate »