Sandalwood Leading OnlineMedia

ಜಪಾನ್ ನಲ್ಲಿ ಕೆ ಜಿ ಎಫ್, ಮತ್ತು ರಂಗಸ್ಥಲಂ   ಮೊದಲ ವಾರದ ಕಲೆಕ್ಷನ್ ಎಷ್ಟು?

 ಜಪಾನ್ ಬಾಕ್ಸಾಫೀಸ್‌ನಲ್ಲಿ ಸದ್ಯ ದಕ್ಷಿಣ ಭಾರತ ಸಿನಿಮಾ ಆರ್ಭಟ ನಡೀತಿದೆ. ಯಶ್ ನಟನೆಯ ‘KGF’ ಸರಣಿ ಹಾಗೂ ರಾಮ್‌ಚರಣ್ ನಟನೆಯ ‘ರಂಗಸ್ಥಳಂ’ ಸಿನಿಮಾಗಳು ಕಳೆದ ವಾರ ಜಪಾನ್ ದೇಶದಾದ್ಯಂತ ರಿಲೀಸ್ ಆಗಿತ್ತು. ಎರಡೂ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.ಜಪಾನ್ ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಜಪಾನ್ ದೇಶದಲ್ಲಿ ಶತದಿನೋತ್ಸವ ಆಚರಿಸಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದರ ಬೆನ್ನಲ್ಲೇ 5 ವರ್ಷಗಳ ಹಿಂದೆ ತೆಲುಗಿನಲ್ಲಿ ಸಕ್ಸಸ್ ಕಂಡಿದ್ದ ‘ರಂಗಸ್ಥಳಂ’ ಚಿತ್ರವನ್ನು ಜಪಾನ್‌ನಲ್ಲಿ ರಿಲೀಸ್ ಮಾಡಲಾಗಿದೆ. ಇನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ‘KGF’ ಸರಣಿ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮೂರು ಸಿನಿಮಾಗಳನ್ನು ಒಂದೇ ದಿನ ಜಪಾನ್‌ನಲ್ಲಿ ರಿಲೀಸ್ ಮಾಡಲಾಗಿದೆ.ಹಲವು ವರ್ಷಗಳಿಂದ ಭಾರತದ ಸಿನಿಮಾಗಳು ಜಪಾನ್‌ ಪ್ರೇಕ್ಷಕರ ಮುಂದೆ ಹೋಗುತ್ತಿವೆ. ಆದರೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಗುತ್ತಿಲ್ಲ. 2 ದಶಕಗಳ ಹಿಂದೆ ರಜನಿಕಾಂತ್ ‘ಮುತ್ತು’ ಸಿನಿಮಾ ಮಾತ್ರ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ‘RRR’ ಸಿನಿಮಾ ದಾಖಲೆ ಬರೀತು. ಇದೀಗ ‘ರಂಗಸ್ಥಲಂ’ಮತ್ತು ‘KGF’ ಸರಣಿ ಸಿನಿಮಾಗಳ ಅಬ್ಬರ ಜೋರಾಗಿದೆ.

‘KGF’ ಸರಣಿ ಫಸ್ಟ್‌ ವೀಕೆಂಡ್ ಗಳಿಕೆ ಎಷ್ಟಾಗಿದೆ ಅಂದ್ರೇ? ಕಳೆದ ಶುಕ್ರವಾರ ‘KGF’ ಚಾಪ್ಟರ್-1 ಹಾಗೂ ‘KGF’ ಚಾಪ್ಟರ್- 2 ಸಿನಿಮಾಗಳು ಜಪಾನ್ ದೇಶದಲ್ಲಿ ತೆರೆಗಪ್ಪಳಿಸಿವೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಫಸ್ಟ್ ವೀಕೆಂಡ್‌ನಲ್ಲಿ ‘KGF’ ಮೊದಲ ಭಾಗದ 4120 ಟಿಕೆಟ್ ಮಾರಾಟವಾಗಿದೆ. ಇದರಿಂದ 34 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಿರುವ ಅಂದಾಜಿದೆ. ಅದೇ ರೀತಿ 2ನೇ ಭಾಗಕ್ಕೆ 3718 ಟಿಕೆಟ್ ಮಾರಾಟವಾಗಿದೆ. ಮೂಲಕ ಅಂದಾಜು 30 ಲಕ್ಷ ರೂ. ಗಳಿಕೆ ಕಂಡಿದೆ.

ರಂಗಸ್ಥಳಂ’ ಕಲೆಕ್ಷನ್ ಎಷ್ಟು? ,ಸುಕುಮಾರ್ ನಿರ್ದೇಶನದ ‘ರಂಗಸ್ಥಲಂ ‘ ಚಿತ್ರಕ್ಕೆ ಜಪಾನ್ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಫಸ್ಟ್ ವೀಕೆಂಡ್‌ನಲ್ಲಿ ಚಿತ್ರದ 7110 ಟಿಕೆಟ್‌ಗಳು ಮಾರಾಟವಾಗಿ 65.67 ಲಕ್ಷ ರೂ. ಗಳಿಕೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಚಿಟ್ಟಿಬಾಬು ಆಗಿ ರಾಮ್‌ಚರಣ್ ಅಭಿನಯಕ್ಕೆ ಜಪಾನ್ ಪ್ರೇಕ್ಷಕರು ಮಾರು ಹೋಗಿದ್ದಾರೆ. ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದರು. ಜಗಪತಿ ಬಾಬು, ಆದಿ ಪಿನಿಶೆಟ್ಟಿ, ಪ್ರಕಾಶ್ ರಾಜ್‌ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

 ರಂಗಸ್ಥಳಂ’ಗೆ ‘RRR’ ಬಲ,ಜಪಾನ್ ದೇಶದಲ್ಲಿ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ‘RRR’ ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಾಮ್ ಚರಣ್ ಅಭಿನಯಕ್ಕೆ ಅಲ್ಲಿನ ಪ್ರೇಕ್ಷಕರು ಮನಸೋತಿದ್ದರು. ಅದೇ ಕಾರಣಕ್ಕೆ ರಾಮ್‌ಚರಣ್ ನಟನೆಯ ‘ರಂಗಸ್ಥಳಂ’ ಸಿನಿಮಾ ಬರ್ತಿದೆ ಎಂದಾಗ ಸಹಜವಾಗಿಯೇ ಕ್ರೇಜ್ ಇತ್ತು. ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕ್ಕಿಂಗ್ ನಡೆದಿತ್ತು.

 

 ರಾಕಿಭಾಯ್ ರಾಜ್ಯಭಾರ ನೋಡಿ ಜಪಾನ್ ಪ್ರೇಕ್ಷಕರು ಏನಂದ್ರು? ,ರಂಗಸ್ಥಲಂ’ಮತ್ತು ‘KGF’ ಸರಣಿ ಸಿನಿಮಾಗಳು ಅಲ್ಲಿ 70ರಿಂದ 80 ಸ್ಕ್ರೀನ್‌ಗಳಲ್ಲಿ ಮಾತ್ರ ರಿಲೀಸ್ ಆಗಿದೆ. ಮಲ್ಟಿಪ್ಲೆಕ್ಸ್‌ಗಳ ಗಾತ್ರ ಕೂಡ ಚಿಕ್ಕದು. ಆದರೆ ಸಿನಿಮಾ ಚೆನ್ನಾಗಿದ್ದರೆ ದೀರ್ಘಕಾಲದವರೆಗೆ ಪ್ರದರ್ಶನ ಕಾಣುತ್ತದೆ. ‘RRR’ ಸಿನಿಮಾ ಕೂಡ ಇದೇ ರೀತಿ ಕಡಿಮೆ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ ನೋಡ ನೋಡುತ್ತಾ ಸಿನಿಮಾ ಸ್ಕ್ರೀನ್ಸ್ ಹೆಚ್ಚಿಸಿಕೊಂಡಿತ್ತು. 100 ದಿನಕ್ಕೂ ಅಧಿಕ ಪ್ರದರ್ಶನ ಕಂಡು ಎಲ್ಲರ ಹುಬ್ಬೇರಿಸಿತ್ತು. ಇನ್ನೂ ಜಪಾನ್ ದೇಶದಲ್ಲೂ ನಮ್ಮ  ದಕ್ಷಿಣ ಭಾರತದ ಚಿತ್ರಗಳು  ತಮ್ಮ ನೆಲೆ ಸ್ಥಾಪಿಸಿಕೊಂಡಿವೆ, ಇನ್ನೂ ಮುಂದೆ ಅಲ್ಲಿ ನಿಂತು ಮನರಂಜಸಬೇಕು  ಆ  ನಿಟ್ಟಿನಲ್ಲಿ ಪ್ರಯತ್ನ  ಸಾಗಬೇಕು.

Share this post:

Related Posts

To Subscribe to our News Letter.

Translate »