ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ಸಿನಿಮಾ ‘ಕೆಜಿಎಫ್: ಚಾಪ್ಟರ್ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವವೇ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ ಖ್ಯಾತ ಈ ಚಿತ್ರಕ್ಕೆ ಸಲ್ಲುತ್ತದೆ.
ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ದಾಖಲೆ, ನೀರಿಕ್ಷೆಗಳನ್ನು ಮೀರಿ ಯಶಸ್ಸು ಕಂಡಿದ್ದ ಸಿನಿಮಾ ಎಂದರೆ ಕೆಜಿಎಫ್ 2. ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನೂರು ದಿನ ಪೂರೈಸಿದೆ. ಯಶ್ , ಶ್ರೀನಿಧಿ ಶೆಟ್ಟಿ, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿನಯದ ಈ ಪ್ಯಾನ್ ಇಂಡಿಯಾ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ 100 ದಿನಗಳನ್ನು ಪೂರೈಸಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕರ್ನಾಟಕದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗಿ ಹೊರಹೊಮ್ಮಿದೆ. ಈಗ ಬಾಕ್ಸ್ ಆಫೀಸ್‌ನಲ್ಲಿ 100 ದಿನಗಳನ್ನು ಪೂರೈಸಿದ್ದು, ತಂಡದ ಸದಸ್ಯರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾ ವಿಶ್ವದಾದ್ಯಂತ 1250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಪ್ರಸ್ತುತ ಎಲ್ಲರ ಮನಗೆದ್ದು, ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ. ಕೆಜಿಎಫ್ 1 ಮತ್ತು 2ನೇ ಭಾಗವು ಚಿತ್ರ ತಂಡದ ಪ್ರತಿಯೊಬ್ಬರಿಗೂ ಬಿಗ್ ಹಿಟ್ ನೀಡಿದ್ದು, ನಟ ಯಶ್ ತೂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಜನರಿಗೆ ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್
Thank You for scripting and stitching this amazing journey for us. We can still feel the jubilation & reverberation all around us. We promise to keep you enthralled with our next #Monster hit and of our home run!#KGF2 #100MonsterDaysOfKGF2#HombaleFilms pic.twitter.com/WDfHTG7fR6
— Hombale Films (@hombalefilms) July 22, 2022
ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ, ಅಭಿಮಾನಿಗಳ ಜೊತೆ ತಾವು ಎಷ್ಟು ಹೆಮ್ಮೆಪಡುತ್ತಿದ್ದೇವೆಂದು ಎಂದು ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. #100MonsterDaysOfKGF2 ಪ್ರಸ್ತುತ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ನಿರ್ಮಾಣ ಮಾಡಿದ್ದ ಫಿಲ್ಮ್ಸ್ ಟ್ವೀಟ್ ಮಾಡಿದೆ, “ನಮಗಾಗಿ ಈ ಅದ್ಭುತ ಪ್ರಯಾಣವನ್ನು ಸ್ಕ್ರಿಪ್ಟ್ ಮಾಡಿದ್ದಕ್ಕೆ ಧನ್ಯವಾದಗಳು. ನಾವು ಇನ್ನೂ ಇದೇ ರೀತಿಯ ಅದ್ಬುತ ಪ್ರಾಜೆಕ್ಟ್ಗಳನ್ನು ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡುತ್ತೇವೆ ಎಂದು ಬರೆದುಕೊಂಡಿದೆ.
https://twitter.com/prashanth_neel/status/1550359505116221441