Rating /5
ವ್ಯವಸಾಯಕ್ಕೊಂದು ಸಣ್ಣ ತುಂಡು ಭೂಮಿ, ತಾನು ಪ್ರೀತಿಸಿ ಮದುವೆಯಾದ ಮಡದಿಯೊಂದಿಗೆ ನೆಮ್ಮದಿಯ ಜೀವನ, ಜಗತ್ತಿಗೇ ಪ್ರೀತಿ ನೀಡುವ ಅಮ್ಮನನ್ನು ಅಕ್ಕರೆಯಿಂದ ನೋಡಿಕೊಳ್ಳುವುದು.. ಇದಷ್ಟೇ ಕೆರೆಮನೆ ನಾಗನ ಜೀವನದ ಅಪ್ರತಿಮ ಉದ್ದೇಶ. ನಾಗನ ಬದುಕಿನ ಮೇಲಿನ ಈ ಅತೀ ಸಾಮಾನ್ಯ ನಿರೀಕ್ಷೆ ಕೂಡ ಹುಸಿಯಾಗುತ್ತಾ? ಅಥವಾ ಹಟಕ್ಕೆ ಬಿದ್ದು ನಾಗ ತನ್ನ ಅಭಿಲಾಶೆಯನ್ನು ಈಡೆರಿಸಿಕೊಳ್ಳುತ್ತಾನಾ?
Read More : Karataka Damanaka Review: ಕರಿ ಮಣ್ಣಿನ ಖಡಕ್ ಕಥೆ
ಎರಡು ಫೈಟ್, ನಾಲ್ಕು ಹಾಡು ಅದಕ್ಕೊಬ್ಬ ಸ್ಟಾರ್, ಸ್ಟಾರ್‌ಗೊಬ್ಬಳು ಮರ ಸುತ್ತಲು ಸ್ಟಾರಿಣಿ.. ಈ ಫಾರ್ಮುಲದ ಚಿತ್ರಗಳಿಗೆ ಮತ್ತು ಪ್ರೇಕ್ಷನನ್ನು `ಟೇಕನ್ ಫಾರ್ ಗ್ರಾಂಟೆಡ್’ ರೀತಿಯಲ್ಲಿ ಮೆದಳು ಖಾಲಿ ಇದ್ದರೂ ಸಿನಿಮಾ ರಂಗಕ್ಕೆ ನಾನೇ `ಗುರು’ ಅನ್ನುವವರಿಗೆ, ಎರಡೆರೆಡು ಸ್ಟಾರ್‌ಗಳನ್ನಿಟ್ಟುಕೊಂಡೂ ಎಡವುವವರಿಗೆಇದು ಕಾಲವಲ್ಲ. ಈಗ ಏನಿದ್ದರೂ ಕಂಟೆoಟ್&ಕ್ವಾಲಿಟೀ ಮತ್ತು ಹೊಸತನದಿಂದ ಕೂಡಿದ ಈ ನೆಲದ ಕಥೆಗಳಿಗಷ್ಟೇ ಪ್ರೇಕ್ಷಕ ಉಘೇ ಅನ್ನುತ್ತಿರುವುದು. ಈ ನಿಟ್ಟಿನಲ್ಲಿ ಮೂಡಿಬಂದ ಒಂದು ಅಸಮಾನ್ಯ ಚಿತ್ರ ಕೆರೆಬೇಟೆ. ಮಲೆನಾಡಿನ ಸಂಪ್ರದಾಯ, ಸೊಗಡು, ಆಚಾರ-ವಿಚಾರಗಳನ್ನು ಪೋಣಿಸಿಕೊಂಡು ಬೆಚ್ಚಿ ಬೀಳಿಸುವ, ಮನ ಕರಗಿಸುವ ಕಥೆ ಹೇಳಿದ್ದಾರೆ ನಿರ್ದೇಶಕ ರಾಜ್‌ಗುರು.
Read More : Matsyagandha Movie Review; ಕಡಲ ಒಡಲೊಳಗೊಂದು ಕಾಡುವ ಲಹರಿ
ಹಾಗಿದ್ದರೆ ನಿಜಕ್ಕೂ `ಕೆರೆ ಬೇಟೆ’ಯಲ್ಲಿ ಇರುವ ಕಥೆ ಎಂಥದ್ದು? ಇಲ್ಲಿ ನಾಯಕ ಕೆರೆಮನೆ ನಾಗ (ಗೌರಿಶಂಕರ್) ಜೈಲಿನಿಂದ ಪೆರೋಲ್ ಮೇಲೆ ಹೊರಗೆ ಬರುತ್ತಾನೆ. `ಹಾವಿನ ದ್ವೇಶ ಹನ್ನೆರಡು ವರ್ಷವಾದರೆ, ಕೆರೆ ಮನೆ ನಾಗನ ದ್ವೇಶ ಅದನ್ನೂ ಮೀರಿದ್ದು. ಮನಸ್ಸಲ್ಲಿ ಬೆಟ್ಟದಷ್ಟು ಪ್ರೇಮ ತುಂಬಿಕೊAಡು ಬುಸುಗುಡುತ್ತಲೇ ಇರುವ ನಾಗನಿಗೆ ದಾಯಾದಿಗಳು ಮತ್ತು ಊರವರ ಜೊತೆಗೆ ಅಷ್ಟಕ್ಕಷ್ಟೇ. ಕರೆಬೇಟೆ ಸ್ಪರ್ಧೆ, ಹಳ್ಳಿಯ ಜನ ಜೀವನ, ಬೀಡಿ, ಕಳ್ಳು, ಗದ್ದೆ.. ಇದೆಲ್ಲವನ್ನೂ ತೋರಿಸುತ್ತಾ ನಿರ್ದೇಶಕರು ಒಂದು ಪ್ರಮುಖ ಘಟ್ಟಕ್ಕೆ ಕಥೆಯನ್ನು ತಂದು ನಿಲ್ಲಿಸುತ್ತಾರೆ. ಅದೇ `ಕಿಡ್ನಾಪ್ ಪ್ರಸಂಗ’. ಹೌದು, ನಿಗಿ ನಿಗಿ ಕೆಂಡದAತಾದ ನಾಗ ನಾಯಕಿ ಮೀನಾ (ಬಿಂದು ಶಿವರಾಂ) ಮನೆಗೆ ನುಗ್ಗಿ ಅವಳನ್ನು ರಾಕ್ಷಸನಂತೆ ಕಿಡ್ನಾಪ್ ಮಾಡುತ್ತಾನೆ. ಅಸಲಿಗೆ ಇಲ್ಲಿಂದ ಪ್ರೇಕ್ಷಕ ಮೊಬೈಲ್ ಸೈಲೆಂಟ್ ಮೋಡ್‌ಗೆ ಹಾಕಿ ಸಿನಿಮಾ ನೋಡಲು ಶುರು ಮಾಡುತ್ತಾನೆ. ಅಲ್ಲಿಗೆ ಕೆರೆಬೇಟೆ ಅಕ್ಷರಶಃ ತನ್ನ ಬೇಟೆಯನ್ನು ಆರಂಭಿಸಿರುತ್ತೆ.
Read More : Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!
ಕರೆಬೇಟೆ’ ಎಂಬ ಟೈಟಲ್ ಇಟ್ಟುಕೊಂಡು ಅದ್ಭುತ ಪ್ರೇಮಕಥೆಯನ್ನು ಹೇಳಿರುವ ನಿರ್ದೇಶಕರು, ಸಿನಿಮಾದುದ್ದಕ್ಕೂ ತಾನು ಹೇಳಬೇಕಾಗಿದ್ದನ್ನು ಯಾವುದೇ ಅಳುಕಿಲ್ಲದೆ ಹೇಳಿದ್ದಾರೆ. `ಲೋಕಲ್ ಆಲ್‌ವೇಸ್ ಗ್ಲೋಬಲ್’ ಅನ್ನುವಂತೆ ಮಲೆನಾಡ ಭಾಷೆಯನ್ನು, ಅಲ್ಲಿನ ಸಂಪ್ರದಾಯಗಳನ್ನು ಚಿತ್ರತಂಡ ಅದ್ಭುತವಾಗಿ ಬಳಸಿಕೊಂಡು, ಬೇರೇಯದೇ ಫೀಲ್ ನೀಡುವ ಚಿತ್ರ ನೀಡಿದ್ದಾರೆ. ಅವಾಗವಾಗ ಪ್ರೇಕ್ಷನ ಊಹೆಗೂ ನಿಲುಕದ ಆದರೆ ಲಾಜಿಕ್ ಇರುವ ಮ್ಯಾಜಿಕ್ ಟ್ವಿಸ್ಟ್ಗಳನ್ನು ನೀಡುವ `ಕೆರೆಬೇಟೆ’, ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದುಕೊಂಡು, ಕೊನೆಯಲ್ಲಿ ಇಮೋಶನಲ್ ಥ್ರಿಲ್ಲರ್ ಆಗಿ ಮನಕ್ಕೆ ನಾಟಿ ಬಿಡುತ್ತದೆ.
Read More : Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಫ್ಲಾಶ್‌ಬ್ಯಾಕ್ ಕಥೆ ಎಂದು ತೋರಿಸುವ ನಿರ್ದೇಶಕರು, ಕೊನೆಯಲ್ಲಿ ಅದು ಫ್ಲಾಶ್‌ಬ್ಯಾಕ್ ಕಥೆ ಅಲ್ಲ ಅನ್ನುವ ಸ್ಕಿçÃನ್‌ಪ್ಲೇ ಟೆಕ್ನಿಕ್ ನಿಜಕ್ಕೂ ಸಿನಿಮಾದ ಜೀವಾಳ. ನಾಯಕ, ನಾಯಕಿಗೆ ಕೊಡುವ ಚಿತ್ರಹಿಂಸೆ, ಬಳಸಿರುವ ಬೇವರ್ಸಿ, ಹಡಬೆ, ಬೆರೆಕೆಗೆ ಹುಟ್ಟಿದ್ದ ಮುಂದಾದ ಭಾಷೆ, ಒಬ್ಬ `ನಾಯಕ’ ಹೀಗೂ ಇರುತ್ತಾನಾ? ಜೀವಕ್ಕಿಂತ ಹೆಚ್ಚು ಪ್ರೀತಿಸಿದವಳನ್ನು ಮದುವೆಗೂ ಮುಂಚೆ ಮಾಡೋದೆಲ್ಲಾ ಮಾಡಿ ನರಕ ತೋರಿಸುತ್ತಾನಾ? ಇಷ್ಟೊಂದು ಅತಿರೇಕ ಬೇಕಿತ್ತಾ? ಸೆನ್ಸಾರ್ ಮಂಡಳಿ ಸಮ್ಮತಿ ಕೊಟ್ಟಿದ್ದಾರೂ ಯಾಕೆ? ಎಂಬ ಹತ್ತು ಹಲವು ಪ್ರಶ್ನೆ ಮೂಡುತ್ತದೆ. ಆದರೆ ಅದೊಂದು `ಟ್ವಿಸ್ಟ್’ ಇದೆಯಲ್ಲಾ ಆದು ಎಲ್ಲದಕ್ಕೂ ಉತ್ತರ ಕೊಟ್ಟು ಬಿಡುತ್ತದೆ. ಅದೇ `ಟ್ವಿಸ್ಟ್’ಗಾಗಿಯೇ ಸೆನ್ಸಾರ್ ಮಂಡಳಿ ಯೆಸ್ ಅಂದಿದ್ದು ಎಂದು ಎಂಥ ದಡ್ಡನಿಗೂ ಅರ್ಥವಾಗುತ್ತದೆ.
Read More : ಪುನೀತ್ ರಾಜ್ ಕುಮಾರ್ ಜಾಕಿ ರಿ ರಿಲೀಸ್: ಥಿಯೇಟರ್ ಹೌಸ್ ಫುಲ್
ಗಗನ್ ಬಡೇರಿಯಾ ಅವರ ಹಿನ್ನೆಲೆ ಸಂಗೀತ ಮತ್ತು ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಗೌರಿಶಂಕರ್ ಕಂಡ ಕನಸ್ಸನ್ನು ನನಸಾಗಿಸಿದೆ. ನೈಟ್ ಎಫೆಕ್ಟ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರತಂಡ ಪಟ್ಟ ಶ್ರಮ ಪ್ರತೀ ಫ್ರೇಮ್‌ನಲ್ಲೂ ಕಾಣುತ್ತದೆ. ನಾಯಕ ಗೌರಿಶಂಕರ್ ಚಿತ್ರದಲ್ಲಿ ಹಿರೋನಾ ಅಥವಾ ವಿಲನ್ನಾ ಅನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕು. ನಾಗನಾಗಿ ಗೌರಿಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಮುಗಿದ ಮೇಲೂ ನಾಗ ನಾನಾ ರೀತಿಯಲ್ಲಿ ಕಾಡುತ್ತಾನೆ. ಮಲೆನಾಡ ಭಾಷೆಯನ್ನು ಹರಳು ಹುರಿದಂತೆ ಹೇಳುವ ಗೌರಿ, ಡಬ್ಬಿಂಗ್ ಅನ್ನು ಅತ್ಯಂತ ಜತನದಿಂದ ಮಾಡಿದ್ದಾರೆ. ಮೀನಾ ಪಾತ್ರದಲ್ಲಿ ಪರಕಾಯ ಪ್ರೇವೇಶ ಮಾಡಿರುವ ಬಿಂದು ಶಿವರಾಂ ಅವರನ್ನು ಆರಂಭದಲ್ಲಿ `ಹೊಸ ಪರಿಚಯ’ ಎಂದು ಚಿತ್ರತಂಡ ಪರಿಚಯಿಸಿರುವುರದ ಬಗ್ಗೆ ಸಂಶಯ ಮೂಡುತ್ತದೆ. ಯಾಕೆಂದರೆ ಬಿಂದು ನಟನೆಯ ಪ್ರತಿಯೊಂದು ಬಿಂದುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅಪ್ರತಿಮ ನಟ ಎಂಬುದನ್ನು ನಾಯಕಿಯ ಅಪ್ಪನಾಗಿ ಮತ್ತೆ ಪ್ರೂವ್ ಮಾಡಿದ್ದಾರೆ. ಮಿಕ್ಕಂತೆ ಹರಿಣಿ, ಸಂಪತ್ ಮೈತ್ರೇಯಾ ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಒಟ್ಟಿನಲ್ಲಿ, ಕನ್ನಡದಲ್ಲಿ ಉತ್ತಮ ಚಿತ್ರ ಬರುವುದಿಲ್ಲ ಎಂದು ಸೋಶಿಯಲ್ ಮಿಡಿಯಾದಲ್ಲಿ ಉದ್ದುದ್ದ ಗೀಚುವವರು, ಈಗ ಥಿಯೇಟರ್‌ಗೆ ಬಂದು `ಕರೆಬೇಟೆ’ ನೋಡಿ ಒಂದಷ್ಟು ಗೀಚಿದ್ದೇ ಆದರೆ, ನಿಜಕ್ಕೂ ಒಂದು ಪ್ರಮಾಣಿಕ ಚಿತ್ರಕ್ಕೆ ಸಪೋರ್ಟ್ ಮಾಡಿದಂತಾಗುತ್ತದೆ. ಇನ್ನು, ಸಿನಿಮಾವನ್ನು ಟೀವಿಯಲ್ಲೋ, ಓಟಿಟಿಯಲ್ಲೋ ನೋಡಲು ಕಾಯುವುದು ದೊಡ್ಡ ದಡ್ಡತನ. ಏಕೆಂದರೆ, ಸಾಗರ ಸಾಗರವೇ, ಹಳ್ಳ ಹಳ್ಳವೇ. ಸಾಗರದ ಅಲೆಯ ಸದ್ದನ್ನು ಹಳ್ಳದಿಂದ ನಿರೀಕ್ಷಿಸಿದರೆ?!
by: B.Naveen Krishna Puttur