Sandalwood Leading OnlineMedia

‘ಕೆಂಡದ ಸೆರಗು’ ಸಿನಿಮಾದ ಡಬ್ಬಿಂಗ್ ಮುಗಿಸಿದ, ಆಕ್ಷನ್ ಕ್ವಿನ್ ಮಾಲಾಶ್ರೀ.

ಕೆಂಡದ ಸೆರಗು ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ ಅವರು ಇಂದು ತಾವೇ ಸ್ವತಃ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಮಾಲಾಶ್ರೀ ಅವರು ನಟಿಸಿರುವ ಸಿನಿಮಾಗಳಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ ತಮ್ಮ ಧ್ವನಿ ಕೊಡುತ್ತಾರೆ ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಕಿ‌ ಸೋಮ್ಲಿ ಅವರು.
ಈ ಹಿಂದೆ ಕೆಂಡದ ಸೆರಗು ಸಿನಿಮಾದ ಪ್ರೆಸ್ ಮಿಟ್ ನಲ್ಲಿ ಮಾತಾನಾಡಿದ್ದ ಮಾಲಾಶ್ರೀ ಅವರು, “ಕೆಂಡದ ಸೆರಗು” ದೇಸಿಕ ಕುಸ್ತಿ ಕಥೆಯ ಜೊತೆಗೆ ಹೃದಯ ಅಂಟುವ ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳು.

ಇದನ್ನೂ ಓದಿತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…ನನ್ನ ಯೌವ್ವನ‌ ಟಪಾಸ್ ಎನ್ನುತ್ತಾ ಹಾಡಿ ಕುಣಿದ ಚಿಕ್ಕಣ್ಣ..

ತಂಡದ ಪ್ರತಿ ಒಬ್ಬರು ಸಹ ಸಿನಿಮಾವನ್ನು ಆರಾಧಿಸುವ ತಂತ್ರಜ್ಞಾನರ ತಂಡ, ನಾನು ತುಂಬ ಖುಷಿಯಿಂದ ಸೆಟ್ ನಲ್ಲಿ ಪ್ರೀತಿಯಿಂದ ಕೆಲಸ ಮಾಡಿದ್ದೇನೆ, ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ, ಈ ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ, ಈ ತಂಡದ ಜೊತೆಗೆ ನಾ ಸದ ಇರುತ್ತೇನೆ ಎಂದು ಹೇಳಿದ್ದಾರೆ. ಚಿತ್ರಿಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ.
ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್, ಆರು ಹಾಡುಗಳಲ್ಲಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಇನ್ನೂ ಉಳಿದ ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂದೂಲೋಕನಾಥ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಪಿನ್ ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಬ್ಳಿ ಯವರ ಸಂಗೀತ, ಶ್ರೀಕಾಂತ್ ರವರ ಸಂಕಲನ, ಶ್ರೀಮುತ್ತು ಟಾಕೀಸ್ ಅಡಿಯಲ್ಲಿ , ಕೊಟ್ರೇಶ್ ಗೌಡ ಅವರು ಬಂಡವಾಳ ಹೂಡಿದ್ದು ಗೆಲ್ಲುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ

Share this post:

Related Posts

To Subscribe to our News Letter.

Translate »