ಟಾಲಿವುಡ್ ಸ್ಟಾರ್ ನಟಿ ಕೀರ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಕನ್ನಡ ಸಿನಿಮಾಗಾಗಿ ಹಚ್ಚಲು ಮಹಾನಟಿ ರೆಡಿಯಾಗಿದ್ದಾರೆ. ಯಂಗ್ ರೆಬೆಲ್‌ಗೆ ಜೋಡಿಯಾಗಿ ಮಿಂಚಲು ಕೀರ್ತಿ ಸುರೇಶ್ ಸಜ್ಜಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಟಾಲಿವುಡ್ ಅಂಗಳದವೆರೆಗೂ ಸುದ್ದಿಯಾಗುತ್ತಿದೆ.
ಸದ್ಯ ಈಗ ಕನ್ನಡದ ನಿರ್ದೇಶಕರೊಬ್ಬರು ಟಾಲಿವುಡ್ ನ ಮಹಾನಟಿಯನ್ನ ಕರೆತರಲು ಸಿದ್ದತೆ ನಡೆಸಿದ್ದಾರಂತೆ.ಬ್ಯೂಟಿ ಜತೆ ಪ್ರತಿಭೆಯಿರೋ ನಟಿ ಕೀರ್ತಿ ಸುರೇಶ್, ಇದೀಗ ವಿಭಿನ್ನ ಪ್ರಯತ್ನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕೀರ್ತಿ ಸುರೇಶ್ ಮನಸ್ಸು ಮಾಡಿದ್ದಾರಂತೆ.
ಕೀರ್ತಿ ಸುರೇಶ್ ಅಭಿಮಾನಿಯಾಗಿರೋ ನಿರ್ದೇಶಕ ಮಹೇಶ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಯೋಗ್ಯ ಹಾಗೂ ಮದಗಜ ಎರಡು ಚಿತ್ರಗಳು ಸೂಪರ್ ಹಿಟ್ ಆಗಿದ್ದು ಈಗ ಹ್ಯಾಟ್ರಿಕ್ ಬಾರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದ್ದು ನಿರ್ದೇಶಕ ಮಹೇಶ್ ಕುಮಾರ್ ಅವ್ರಿಗೆ ಕೀರ್ತಿ ಸುರೇಶ್ ಅವ್ರನ್ನ ಈ ಹಿಂದಿನ ಚಿತ್ರಗಳಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ರು ಆದ್ರೆ ಅದು ಆಗಿರಲಿಲ್ಲ. ಈಗ ಮತ್ತೊಮ್ಮೆ ಈ ಪ್ರಯತ್ನಕ್ಕೆ ಮುಂದಾಗಿದ್ದು ಅದನ್ನ ಸಕ್ಸಸ್ ಮಾಡಿಕೊಳ್ತಾರಾ ಅನ್ನೋದು ಎಲ್ಲರಲ್ಲಿರೋ ಕುತೂಹಲ.
ಸದ್ಯ ಜ್ಯೂ.ರೆಬೆಲ್ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಮತ್ತು ಕಾಳಿ ಚಿತ್ರದಲ್ಲಿ ಬ್ಯುಸಿಯಿದ್ದು, ಈ ಎರಡು ಪ್ರಾಜೆಕ್ಟ್ ನಂತರವೇ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಕೀರ್ತಿ ಸುರೇಶ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳತ್ತಾರಾ ಎಂದು ಕಾದುನೋಡಬೇಕಿದೆ. ಮಹಾನಟಿಯ ಈ ಗಾಸಿಪ್ ಸುದ್ದಿ ನಿಜವಾಗಲಿ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.
https://www.instagram.com/p/CeJaKgUvvrU/