ಕಾರುಣ್ಯಾ ಹಾಗೂ ಕೀರ್ತಿ ಇಬ್ಬರೂ ಸಹ ಬೇರೆ ಒಂದು ಜಾಗಕ್ಕೆ ಹೋಗಿದ್ದಾರೆ. ಕಾರುಣ್ಯಳಿಗೆ ಸಮಾಧಾನ ಬೇಕಾಗಿರುತ್ತದೆ. ಆ ಕಾರಣಕ್ಕಾಗಿ ಅವಳನ್ನು ಕರೆದುಕೊಂಡು ಕೀರ್ತಿ ಹೋಗಿದ್ದಾಳೆ. ಹಾರ್ಟ್ ಅಟ್ಯಾಕ್ ಆಗಿರುವ ಕಾರಣ ಅಮ್ಮನನ್ನು ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕೀರ್ತಿ ಅಂದುಕೊಂಡಿರುತ್ತಾಳೆ. ಅಪ್ಪಾ ಕೂಡ ಈಗ ನಮ್ಮ ಜೊತೆ ಇಲ್ಲಾ ಅಂತ ಅವಳಿಗೆ ಅರ್ಥ ಆಗಿದೆ.
ಇದನ್ನೂ ಓದಿ :ಕೊನೆಗೂ ಸಾಕಾರವಾಯ್ತು ರಕ್ಷಿತ್ ಶೆಟ್ಟಿ ಬಹುಕಾಲದ ಕನಸು!
ಇನ್ನು ವೈಷ್ಣವ್ ಹಾಗೂ ಲಕ್ಷ್ಮೀ ತುಂಬಾ ಸಂತೋಷದಿಂದ ಕಾಲ ಕಳೆಯುತ್ತಾ ಇರುತ್ತಾರೆ. ಅದನ್ನು ನೆನೆಸಿಕೊಂಡರೆ ಕೀರ್ತಿಗೆ ಮೈಯೆಲ್ಲಾ ಉರಿಯುತ್ತದೆ. ಅವಳಿಗೆ ಅವರನ್ನು ನೋಡಿ ತುಂಬಾ ಬೇಸರ ಆಗಿದೆ. ಆದರೂ ಅವಳು ಎಲ್ಲವನ್ನೂ ಸಹಿಸಿಕೊಂಡು ಬಂದಿರುತ್ತಾಳೆ. ಅಮ್ಮನ ಸಲುವಾಗಿ ಈಗ ಅವಳು ಏನು ಬೇಕಾದರೂ ಮಾಡಲು ರೆಡಿ ಇದ್ದಾಳೆ.
ನಂತರದಲ್ಲಿ ಅವರು ಒಂದು ರೆಸ್ಟೋರೆಂಟ್ಗೆ ಬಂದಿದ್ದಾರೆ. ಅಮ್ಮನ ವಿಶ್ರಾಂತಿ ಸಮಯ ಇದು ಎಂದು ಅವಳು ತಿಳಿದುಕೊಂಡಿದ್ದಾಳೆ. ಆದರೆ ಕೀರ್ತಿಗೆ ಗೊತ್ತಿಲ್ಲದಂತೆ ಕಾರುಣ್ಯಾ ತನಗೆ ಹುಷಾರಿಲ್ಲಾ ಅನ್ನುವ ನಾಟಕ ಮಾಡುತ್ತಿದ್ದಾಳೆ. ನಂತರ ಅವರು ಅಲ್ಲಿಗೆ ಬಂದಾಗ ಒಬ್ಬಳು ಅಲ್ಲಿ ಬರುತ್ತಾಳೆ. ಬಂದು ಅವಳ ಹೆಸರನ್ನು ಹೇಳುತ್ತಾಳೆ. ಅವಳು ಇವರು ಇರುವಷ್ಟು ದಿನ ಅವರನ್ನು ನೋಡಿಕೊಳ್ಳುವವಳಾಗಿರುತ್ತಾಳೆ.
ಇದನ್ನೂ ಓದಿ :‘ಪುಷ್ಪ 2 ದಿ ರೂಲ್’ ಚಿತ್ರದ ‘ಪುಷ್ಪ ಪುಷ್ಪ’ ಹಾಡು ಆಕರ್ಷಕವಾಗಿದೆ
ಆಗ ಅವಳ ಹೆಸರಿನ ಟ್ಯಾಗ್ ಅವಳ ಎದೆ ಭಾಗದಲ್ಲಿ ಇರುತ್ತದೆ. ಅವಳ ಹೆಸರು ವೈಷ್ಣವಿ ಎಂದಾಗಿರುತ್ತದೆ. ಆ ಹೆಸರಲ್ಲಿ ವೈಷ್ಣವ್ ಅಡಗಿದ್ದಾನೆ ಅನ್ನೋದರಿಂದ ಕೀರ್ತಿ ತುಂಬಾ ಕೋಪ ಮಾಡಿಕೊಳ್ಳುತ್ತಾಳೆ. ಅವಳಿಗೆ ಆ ನೇಮ್ ಟ್ಯಾಗ್ ನೋಡಲು ಸಾಧ್ಯ ಆಗುತ್ತಾ ಇರುವುದಿಲ್ಲಾ. ತುಂಬಾ ಕೋಪ ಮಾಡಿಕೊಂಡು ಆ ನೇಮ್ ಟ್ಯಾಗ್ ಅನ್ನು ತೆಗೆಯುವ ಪ್ರಯತ್ನ ಮಾಡುತ್ತಾಳೆ.
ಒಮ್ಮೆ ಇವಳೇ ಅವಳಿಗೆ ನಿನ್ನ ನೇಮ್ ಟ್ಯಾಗ್ ತೆಗಿ ಎಂದು ಏಕವಚನದಲ್ಲಿ ಹೇಳಿರುತ್ತಾಳೆ. ಆದರೆ ಇದನ್ನು ನಾವು ಕೆಲಸ ಮಾಡುವ ಸಮಯದಲ್ಲಿ ಹಾಕಿಕೊಳ್ಳಲೇ ಬೇಕು ಎಂದು ಅವಳು ಹೇಳುತ್ತಾಳೆ. ಅದೇನೇ ಆಗಿರಲಿ ಇದನ್ನ ನೀನು ತೆಗಿಲೇ ಬೇಕು ಎಂದು ಹಠ ಮಾಡುತ್ತಾಳೆ. ಆಗ ಕಾರುಣ್ಯಾಗೆ ಮತ್ತೆ ಬೇಸರ ಆಗುತ್ತದೆ. ಅವಳು ಕೀರ್ತಿಯನ್ನು ಕರೆದುಕೊಂಡು ಸ್ವಲ್ಪ ದೂರ ಬರುತ್ತಾಳೆ.
ಇದನ್ನೂ ಓದಿ :ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವರಸನ್
ಬಂದವಳೇ ಬೇಬಿ ನಿನಗೆ ಕಷ್ಟ ಆಗ್ತಾ ಇದ್ಯಾ? ಕಷ್ಟ ಆಗ್ತಾ ಇದೆ ಅಂದ್ರೆ ನಾವು ಇಲ್ಲಿಂದ ವಾಪಸ್ ಹೋಗಿಬಿಡೋಣ ಎಂದು ಹೇಳುತ್ತಾಳೆ. ಇಲ್ಲಾ ನಾನು ಇಲ್ಲೇ ಇರ್ತೀನಿ ಎಂದು ಕೀರ್ತಿ ಹೇಳುತ್ತಾಳೆ. ಆದ್ರೆ ನೀನು ಮತ್ತೆ ಈ ರೀತಿ ಮಾಡಬಾರದು ಎಂದು ಹೇಳುತ್ತಾಳೆ. ನಾನು ನೆಮ್ಮದಿ ಬೇಕು ಅಂತ ಇಲ್ಲಿಗೆ ಬಂದಿದಿನಿ. ನೀನು ಮತ್ತೆ ಕೇವಲ ಒಂದು ಹೆಸರನ್ನು ನೋಡಿ ಇಷ್ಟೊಂದು ಡಿಸ್ಟರ್ಬ್ ಆಗ್ತೀಯಾ ಅಂದ್ರೆ ಹೇಗೆ? ಎಂದು ಪ್ರಶ್ನೆ ಮಾಡುತ್ತಾಳೆ.
ಆಗ ಕೀರ್ತಿ ತನ್ನನ್ನು ತಾನು ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಇನ್ನು ಇತ್ತ ವೈಷ್ಣವ್ ಲಕ್ಷ್ಮೀಯ ಫೋಟೋ ತೆಗಿತಾ ಇರ್ತಾನೆ. ಅಲ್ಲಿ ಒಬ್ಬ ಚಿಕ್ಕ ಹುಡುಗ ಬಂದು ನಾನು ಫೋಟೋ ಕ್ಲಿಕ್ ಮಾಡ್ತೀನಿ ಎಂದು ಹೇಳುತ್ತಾನೆ.