`ಮಾಸ್ತಿಗುಡಿ’ ದುರಂತಕ್ಕೆ ಹೊಸ ಟ್ವಿಸ್ಟ್: ಸಿಕ್ಸ್ ಪ್ಯಾಕ್ ತೆಗೀತಾ ಪ್ರಾಣ?!
ಜೋಗಿ ಪ್ರೇಮ್ ಅವರ ಬಹು ನಿರೀಕ್ಷೆಯ ‘ಕೆಡಿ‘ ಸಿನಿಮಾದ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಬಹಿರಂಗಗೊಳಿಸಿದೆ. ಇದರ ಬಗ್ಗೆ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ‘ಕೆಡಿ’ ಎಂಬ ಬಿಗ್ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸಿನಿಮಾಗೆ ಈಗ ನಾಯಕಿಯಾಗಿ ರೀಷ್ಮಾ ನಾಣಯ್ಯ ಆಯ್ಕೆಯಾಗಿದ್ದಾರೆ.
EXCLUSIVE PHOTOS / `Bera’ Film Press Meet
ಜೋಗಿ ಪ್ರೇಮ್ ಸಿನಿಮಾ ಬರುತ್ತದೆ ಎಂದಾದರೆ ಅದು ಹೆಚ್ಚು ಸದ್ದು ಮಾಡುವುದು ಸಹಜ. ಈಗ ‘ಕೆಡಿ’ ಚಿತ್ರದ ಬಗ್ಗೆಯೂ ಈಗ ಅಂತಹದೇ ಕ್ರೇಜ್ ಸೃಷ್ಟಿಯಾಗಿದೆ. ಇದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಅಣ್ಣಯ್ಯಪ್ಪ ಎಂಬ ಪಾತ್ರದಲ್ಲಿರಲಿದ್ದಾರೆ. ಸಂಜಯ್ದತ್ ಹೊರತುಪಡಿಸಿ ಶಿಲ್ಪಾ ಶೆಟ್ಟಿ ಮತ್ತು ರವಿಚಂದ್ರನ್ ಅವರ ಲುಕ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಇದರ ನಾಯಕಿಯನ್ನು ಸಹ ವಿಭಿನ್ನವಾಗಿ ರಿವೀಲ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್.
EXCLUSIVE PHOTOS / `LUCK’ Film Song Release Press Meet
‘ಏಕ್ ಲವ್ ಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ರೀಷ್ಮಾರನ್ನು ಪ್ರೇಮ್ ಪರಿಚಯ ಮಾಡಿಸಿದ್ದರು. ಈಗ ಎರಡನೇ ಬಾರಿಗೆ ಅವರನ್ನೇ ತಮ್ಮ ಸಿನಿಮಾಗೆ ನಾಯಕಿಯನ್ನಾಗಿಸಿಕೊಂಡಿದ್ದಾರೆ. ರೀಷ್ಮಾ ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ಬಿಝಿ ಇದ್ದು, ಸ್ಟಾರ್ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವರು ನಾಯಕಿಯಾಗಿದ್ದಾರೆ.
ಶಿವಣ್ಣ, ಉಪೇಂದ್ರ, ರಾಜ್.ಬಿ.ಶೆಟ್ಟಿ ಅಭಿನಯದ `45′ ಚಿತ್ರ ಮೈಸೂರಿನಲ್ಲಿ ಆರಂಭ
ಈ ಚಿತ್ರದಲ್ಲಿ MACHHLAKXHMI ಎಂಬ ಹೆಸರಿನ ಪಾತ್ರದಲ್ಲಿ ರೀಷ್ಮಾ ಇರಲಿದ್ದು, ಇದು ಸಾಮಾನ್ಯರ ಆಲೋಚನೆಗಿಂತಲೂ ದೊಡ್ಡ ಪಾತ್ರ. ತುಂಬಾ ಚಾಲೆಂಜಿ0ಗ್ ಆಗಿದೆ, ಥ್ರಿಲ್ಲಿಂಗ್ ಆಗಿದೆ, ಸಿಕ್ಕಾಪಟ್ಟೆ ತೂಕದ ಪಾತ್ರ. ಮರ ಸುತ್ತುವ ಪಾತ್ರವಲ್ಲ. `ನನಗೆ ಪ್ರೇಮ್ ಸರ್ ಈ ಪಾತ್ರ ಆಫರ್ ಮಾಡಿದಾಗ ಸರ್ಪ್ರೈಸ್ ಆಯ್ತು. ಸೆಟ್ನಲ್ಲಿ ಮತ್ತು ನನ್ನ ನಟನೆ ಎರಡೂ ಕ್ರೇಜಿಯಾಗಿರುತ್ತದೆ. ಈಗ ರಿಲೀಸ್ ಆಗಿರುವ ಪೋಸ್ಟರ್ ಕೂಡ ಕ್ರೇಜಿ ಮತ್ತು ರಗಡ್ ಆಗಿದೆ. ನನ್ನ ಪರ್ಫಾಮೆನ್ಸ್ಗೆ ತುಂಬಾ ಒತ್ತು ಕೊಡುವ ಪಾತ್ರವಿದು. ಕೊಂಚ ಚಾಲೆಂಜಿ0ಗ್ ಆಗಿಯೂ ಇದೆ‘ ಎಂದಿದ್ದಾರೆ ರೀಷ್ಮಾ ನಾಣಯ್ಯ. ಇನ್ನು, ಚಿತ್ರವನ್ನು ಪ್ರತಿಷ್ಠಿತ `ಕೆ.ವಿ.ಎನ್’ ಸಂಸ್ಥೆ ನಿರ್ಮಿಸುತ್ತಿದ್ದು, ಸಂಪೂರ್ಣ ನಿರ್ಮಾಣದ ಜವಾಬ್ದಾರಿಯನ್ನು ಸುಪ್ರೀತ್ ಹೊತ್ತಿದ್ದಾರೆ.