Sandalwood Leading OnlineMedia

ಪ್ರೇಮ್‌ ʻಕೆಡಿʼ ಅಡ್ಡಕ್ಕೆ ಯಮುನಾ ಶ್ರೀನಿಧಿ ಎಂಟ್ರಿ

ಜೋಗಿ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. 1970ರ ದಶಕದ ನಡುವೆ ನಡೆಯುವ ನೈಜ ಘಟನೆಯನ್ನು ಆಧರಿಸಿದ ಪ್ರೇಮ್‌ ‘ಕೆಡಿ’ ಚಿತ್ರವನ್ನು ಮಾಡುತ್ತಿದ್ದಾರೆ. ಇದು ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಈ ಸಿನಿಮಾಕ್ಕಾಗಿ ಅದ್ಧೂರಿ ಸೆಟ್‌ಗಳನ್ನ ಹಾಕಿ ಶೂಟ್‌ ಮಾಡಲಾಗಿದೆ. ಸಂಪೂರ್ಣ ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರಲಿದೆ. ಬಹಳ ಅದ್ದೂರಿಯಾಗಿ ಶೂಟಿಂಗ್ ನಡೆಯುತ್ತಿದೆ. ‌

ಕೆಡಿ ಬಳಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಲಾವಿದರ ಎಂಟ್ರಿಯಾಗಿದೆ. ‘ಕೆಡಿ: ದಿ ಡೆವಿಲ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಧ್ರುವ ಸರ್ಜಾ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಜಿಸ್ಸು ಸೇನ್‌ಗುಪ್ತಾ ಮುಂತಾದವರು ನಟಿಸಿದ್ದಾರೆ. ಬಾಲಿವುಡ್ ನಟಿ ನೋರಾ ಫತೇಹಿ ಈ ಸಿನಿಮಾದ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಯಮುನಾ ಶ್ರೀನಿಧಿ ಕೂಡ ಕೆಡಿ ಬಳಗ ಸೇರಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಬಂದ ಕೂಡಲೇ ಇಂಥದ್ದೊಂದು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಯಮುನಾ ಶ್ರೀನಿಧಿ,ʻ ನಾನು ಮೊದಲ ಬಾರಿಗೆ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ನನಗೆ ಕಲಿಕೆಯ ಅನುಭವವಾಗಿತ್ತು. ಅವರು ಸೆಟ್ ಅಲ್ಲಿ ಇರುವಾಗ ಸೋಮಾರಿತನಕ್ಕೆ ಅವಕಾಶವಿಲ್ಲ. ನನ್ನ ಪಾತ್ರ ಅಥವಾ ಚಿತ್ರದ ಬಗ್ಗೆ ನಾನು ಹೆಚ್ಚು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ನಾನು ಒಂದನ್ನು ಹೇಳಲು ಬಯಸುತ್ತೇನೆ … ಹೌದು!! ದೇವರ ಯೋಜನೆ, ನಮ್ಮ ಯೋಜನೆಗಿಂತ ಯಾವಾಗಲೂ ಉತ್ತಮವಾಗಿರುತ್ತದೆʼ ಎಂದಿದ್ದಾರೆ.

 

Share this post:

Related Posts

To Subscribe to our News Letter.

Translate »