ಜುಲೈ 1ಕ್ಕೆ ಹೊಸಬರ ಚಿತ್ರ “ಕೌಟಿಲ್ಯ” ರಿಲೀಸ್
ಈಗಾಗಲೇ ಹಾಡುಗಳಿಂದ ಸದ್ದು ಮಾಡಿರುವ ಕೌಟಿಲ್ಯ ಚಿತ್ರವು ಜುಲೈ ೧ ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ. ವಿಜೇಂದ್ರ ರವರ ನಿರ್ಮಾಣದಲ್ಲಿ ಪ್ರಬಾಕರ್ ಶೇರ್ ಖಾನೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಂತೆಯೇ ಮನಸಾರೆ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಇಬ್ಬರೂ ನಟರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕೌಟಿಲ್ಯ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದು, ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ.
ಟೀಸರ್ ಮತ್ತು ಹಾಡುಗಳ ಮೂಲಕ ಕುತೂಹಲ ಹುಟ್ಟಿಸಿರುವ ಚಿತ್ರವನ್ನು ಜುಲೈ ಒಂದರಿಂದ ಕಣ್ತುಂಬಿಕೊಳ್ಳಬಹುದು