Left Ad
ಆ ನಟಿಯ ಜೊತೆ ನಟಿಸುವುದು ಸಾಧ್ಯವಿಲ್ಲ ಎಂದ ಕತ್ರಿನಾ ಕೈಫ್ - Chittara news
# Tags

ಆ ನಟಿಯ ಜೊತೆ ನಟಿಸುವುದು ಸಾಧ್ಯವಿಲ್ಲ ಎಂದ ಕತ್ರಿನಾ ಕೈಫ್

ದೀಪಿಕಾ ಹೇಳಿ ಕೇಳಿ ಕತ್ರಿನಾ ಮಾಜಿ ಪ್ರೇಮಿ ರಣಬೀರ್ ಕಪೂರ್ ನ ಮಾಜಿ ಗೆಳತಿ. ಹೀಗಾಗಿ ಆಕೆಯ ಜತೆಗೆ ಖಂಡಿತಾ ಅಭಿನಯಿಸಲಾರೆ ಎನ್ನುತ್ತಿದ್ದಾರೆ ಕತ್ರಿನಾ. ಹೀಗಾಗಿ ನಿರ್ದೇಶಕರಿಗೆ ಅವರನ್ನು ಬಿಟ್ಟು ಇನ್ಯಾರು ಎಂದು ತಲೆಕೆಡಿಸಿಕೊಂಡು ಕೂರುವ ಪರಿಸ್ಥಿತಿ.

ಇದನ್ನೂ ಓದಿ ಯುವ ಪ್ರತಿಭೆಗಳ ಸಂಗಮ; ಶೀಘ್ರವೇ ’ಬೆಂಬಿಡದ ನಾವಿಕ’ ತೆರೆಗೆ!

ದೀಪಿಕಾ ಪಡುಕೋಣೆ ಜತೆ ಯಾವುದೇ ಕಾರಣಕ್ಕೂ ಅಭಿನಯಿಸುವುದಿಲ್ಲ. ಒಂದು ವೇಳೆ ತನ್ನ ಸಿನಿಮಾಗೆ ಆಕೆಯನ್ನು ಕರೆತಂದರೆ ನಾನೆ ಚಿತ್ರದಿಂದ ಹೊರ ನಡೆಯುತ್ತೇನೆ ಎಂದು ಕತ್ರಿನಾ ಕೈಫ್ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರದ ಖ್ಯಾತಿಯ ನಿರ್ದೇಶಕ ಆನಂದ್ ಎಲ್ ರೈ ಶಾರುಖ್ ಖಾನ್ ಜತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದು ತ್ರಿಕೋನ ಪ್ರೇಮಕತೆಯಾಗಿದ್ದು, ಇಬ್ಬರು ಹೀರೋಯಿನ್ ಗಳ ಅಗತ್ಯವಿದೆ. ಹೀಗಾಗಿ ಕತ್ರಿನಾ ಕೈಫ್ ಸಂಪರ್ಕಿಸಿದ ನಿರ್ದೇಶಕರು ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ದೀಪಿಕಾ ಅವರನ್ನು ಕರೆತರಲು ಯೋಜನೆ ಹಾಕಿದ್ದರಂತೆ.

Spread the love
Translate »
Right Ad