Sandalwood Leading OnlineMedia

ಖಿನ್ನತೆಗೆ ಒಳಗಾದ ಬಾಲಿವುಡ್ ನಟಿ ಕತ್ರಿನಾ ಕೈಫ್: ಕಾರಣವೇನು ಗೊತ್ತಾ?

ಅಂದ್ಹಾಗೆ ಕ್ಯಾಟ್ ಈ ರೀತಿ ಖಿನ್ನತೆಗೆ ಒಳಗಾಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಕ್ಯಾಟ್ ರಣ್ ಬೀರ್ ಹಾಗೂ ದೀಪಿಕಾ ಪಡುಕೋಣೆ ವಿಚಾರದಲ್ಲಿ ಬೇಸರಗೊಂಡಿಡ್ರು. ಆದ್ರೀಗ ಮತ್ತೆ ಕ್ಯಾಟ್ ಡಲ್ ಆಗಿದ್ದಾರೆ. ಅದಕ್ಕೆ ಸ್ಪಷ್ಟ ಕಾರಣ ಏನು ಅನ್ನೋದು ಮಾತ್ರ ಈ ಬಾರಿ ಯಾರಿಗೂ ಗೊತ್ತಾಗಿಲ್ಲ.

ನಟಿ ಕತ್ರೀನಾ ಕೈಫ್ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ತೊಡಗಿಕೊಂಡಿದ್ರೂ ಕೂಡ ಕ್ಯಾಟ್ ಯಾಕೋ ತುಂಬಾನೇ ಅಪ್ಸೆಟ್ ಆಗಿದ್ದಾರೆ.ಅದೇ ಕಾರಣಕ್ಕೆ ಕತ್ರೀನಾ ಕೈಫ್ ಮೊನ್ನೆ ಮುಂಬೈನ ಬಾಂದ್ರಾದಲ್ಲಿರುವ ಚರ್ಚ್ ಗೆ ಭೇಟಿ ನೀಡಿದ್ರಂತೆ. ಇದೇ ಈಗ ಚರ್ಚೆಗೆ ಕಾರಣವಾಗಿದೆ.
ಕತ್ರೀನಾ ಚರ್ಚ್ ಗೆ ಭೇಟಿ ನೀಡಿರೋದು ಈಗ ಎಲ್ಲೆಡೆ ಸುದ್ದಿಯಾಗಿದೆ. ಅದಕ್ಕೆ ಕಾರಣ ಅಲ್ಲಿ ಕ್ಯಾಟ್ ಕಣ್ಣೀರಿಟ್ಟಿರೋದು. ಹೌದು.. ಮೊನ್ನೆ ದುಃಖತಪ್ತರಾಗಿದ್ದ ಕ್ಯಾಟ್ ಬಾಂದ್ರಾದ ಚರ್ಚ್ ವೊಂದಕ್ಕೆ ಭೇಟಿ ನೀಡಿದ್ರಂತೆ. ಅಲ್ಲದೇ ಚರ್ಚ್ ನಲ್ಲಿದ್ದ ಮೇರಿ ಮಾತೆಯ ವಿಗ್ರಹದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ರಂತೆ. ಇನ್ನು ಫೋಟೋಗ್ರಾಫರ್ ಗೆಫೋಟೋ ತೆಗೆಯೋದಕ್ಕೂ ಕ್ಯಾಟ್ ಅವಕಾಶ ನೀಡಿಲ್ಲವಂತೆ.

Share this post:

Translate »