ಅತೀ ಶೀಘ್ರದಲ್ಲೇ ಬರಲಿದೆ ‘ಕಥಾಲೇಖನ’ ಇದು ವಿಭಿನ್ನ ಕಥಾವಸ್ತುವಿನ ಅಪರೂಪದ ಪ್ರಯತ್ನ.
G.K. ENTERTAINMENT ಸಂಸ್ಥೆಯಲ್ಲಿ ನಿರ್ಮಾಣವಾಗಿರು “ಕಥಾಲೇಖನ”ಚಿತ್ರವು ಪೂರ್ಣಗೊಂಡಿದ್ದು ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
“ಕಥಾಲೇಖನ” ಚಿತ್ರ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ಗಮನಸೆಳಿದಿತ್ತು.
ಈಗ ಸೆನ್ಸಾರ್ ಕೆಲಸ ಮುಗಿಸಿ ಪ್ರಚಾರ ಕಾರ್ಯ ಬಿರುಸಿನಿಂದ ಆರಂಭಿಸಿದ್ದಾರೆ. ಇದೊಂದು two dimensions ಸ್ಟೋರಿ ಆಗಿದ್ದು ಪಕ್ಕ ಲವ್, ಧ್ರಿಲ್ರ್ ಕಮ್ ಸಸ್ಪೆನ್ಸ್ ಕಥಾಹಂದರ ಹೊಂದಿದ್ದು ಪ್ರೇಕ್ಷಕರಿಗ ಬಹುಪೂರ ಮನರಂಜನೆ ನೀಡಲಿದೆ.
ಇನ್ನು, ಈ ಚಿತ್ರದಲ್ಲಿ ನಾಯಕನಾಗಿ ಅರ್ಫತ್ ಮತ್ತು ನಾಯಕಿಯಾಗಿ ಕಾವ್ಯ ಭಾಗವತ್ ಕಾಣಿಸಿಕೊಂಡಿದ್ದಾರೆ ವಿಶೆಷ ಪಾತ್ರದಲ್ಲಿ ನಿರ್ಮಾಪಕರಾದ ಗೋಪಾಲ್ ಕುಲಕರ್ಣಿ ನಟಿಸುವುದರೊಂದಿಗೆ, ಸಾಗರೋತ್ತರದಲ್ಲಿ ಇವರು ಕನ್ನಡದ ಕಾರ್ಯಕ್ರಗಳನ್ನು ನಡೆಸಿಕೊಡುತ್ತಾ ಭಾಷೆಯ ಹಿರಿಮೆಯನ್ನು ಮೂಲೆ-ಮೂಲೆಗಳಲ್ಲಿ ಮತ್ತಷ್ಟು ಹೆಚ್ಚಿಸಿದ್ದಾರೆ.