Sandalwood Leading OnlineMedia

ಮರ್ಡರ್ ಮಿಸ್ಟರಿ ಕಥೆ ಹೇಳುವ `ಕಥಾಲೇಖನ’ ಇದೆ ಅಕ್ಟೋಬರ್ 21ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ

ಜಿ.ಕೆ.ಎಂಟರ್ಟೈನೆಂಟ್ ಸಂಸ್ಥೆಯ ಅಡಿಯಲ್ಲಿ ಗೋಪಾಲ್ ಕುಲಕರ್ಣಿ ಮತ್ತು ರವಿ ಮಹದೇವ ಜಂಟಿ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿರುವ ಕನ್ನಡ ಮತ್ತು ತೆಲುಗು ಅವತರಣಿಕೆಯಲ್ಲಿ ಚಿತ್ರ ಕಥಾಲೇಖನ. ಚಿತ್ರತಂಡ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಅಕ್ಟೋಬರ್ 21ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. `ಕಥಾಲೇಖನ’ ಚಿತದ್ರ ಟ್ರೈಲರ್ ಮತ್ತು ಹಾಡುಗಳ ಈಗಾಗಲೇ ರಿಲೀಸ್ ಆಗಿದ್ದು ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಪ್ರಚಾರ ಕಾರ್ಯದಲ್ಲಿ ಬಿರುಸಿನಿಂದ ತೊಡಗಿಸಿಕೊಂಡಿದೆ. 

     

`ಕಥಾಲೇಖನ’ ವಿಭಿನ್ನ ಕಥಾಹಂದರವಿರುವ ಚಿತ್ರವಾಗಿದ್ದು, ಪ್ರೇಕ್ಷಕರಿಗ ಬಹುಪೂರ ಮನರಂಜನೆ ನೀಡಲಿದೆ. ಇನ್ನು, ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಇದೊಂದು ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಶದ ಕಥೆ… ಆಸೆ-ದುರಾಸೆಯ ಮನಸ್ಥಿತಿಗಳ ನಡುವಿನ ಗುದ್ದಾಟದ ಕಥೆ. ಇನ್ನು, ಈ ಚಿತ್ರದಲ್ಲಿ ನಾಯಕನಾಗಿ ಅರ್ಫತ್ ಮತ್ತು ನಾಯಕಿಯಾಗಿ ಕಾವ್ಯ ಭಾಗವತ್ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ನಿರ್ಮಾಪಕರಾದ ಗೋಪಾಲ್ ಕುಲಕರ್ಣಿ ನಟಿಸುವುದರೊಂದಿಗೆ, ಸಾಗರೋತ್ತರದಲ್ಲಿ ಇವರು ಕನ್ನಡದ ಕಾರ್ಯಕ್ರಗಳನ್ನು ನಡೆಸಿಕೊಡುತ್ತಾ ಭಾರತೀಯ ಹಿರಿಮೆಯನ್ನು ಮೂಲೆ- ಮೂಲೆಗಳಲ್ಲಿ ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಹಿಂದೆ ಗೋಪಾಲ್ ಕುಲಕರ್ಣಿ ನಿರ್ಮಾಪಕರಾಗುವ ಮೊದಲು ಅನುಕೂಲಕೊಬ್ಬ ಗಂಡ, ಅಶೋಕ ಚಕ್ರ… ಹೀಗೆ ಸಾಕಷ್ಟು ಚಿತ್ರಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದು ಈಗ ಚಿತ್ರ ನಿರ್ಮಾಣ ಮಾಡುವಷ್ಟರ ಮಟ್ಟಿಕೆ ಬೆಳೆದಿರೋದು ನಿಜಕ್ಕೂ ಶ್ಲಾಘನೀಯ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸತ್ಯರತ್ನಮ್ ಅವರಿಗಿದು ಚೊಚ್ಚಲ ಚಿತ್ರ. ಛಾಯಾಗ್ರಾಹಕರಾಗಿ ರಂಗಸ್ವಾಮಿ ಅವರ ಕೈಚಳಕವಿದ್ದು, ಸಂಗೀತ ಸಂಯೋಜನೆ ಕರಣಂ ಶ್ರೀ ರಾಘವೇಂದ್ರ ನೀಡುತ್ತಿದ್ದಾರೆ. ಖ್ಯಾತ ಗಾಯಕಿ ಅನುರಾಧ ಭಟ್,ಹರ್ಷವರ್ಧನ ಹೆಗಡೆ ನಿಟ್ಟೂರು ಮತ್ತು ಸತ್ಯರತ್ನಮ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದು. ತಾರಾಬಳಗದಲ್ಲಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಖ್ಯಾತಿಯ ಗೋಪಾಲ್ ಕುಲಕರ್ಣಿ, ನಾಗೇಂದ್ರ ಅರಸ್, ಮಜಾಭಾರತ ಖ್ಯಾತಿಯ ಚಂದ್ರಪ್ರಭ, ಜಗಪ್ಪ, ಗೋವಿಂದ ಲಾಕ್ ಮಂಜು ಕಾಮಿಡಿ ಕಿಲಾಡಿಗಳು, ಸಂತು, ಅರುಣ್ ಕುಮಾರ್, ಪ್ರಶಾಂತ್ ಶೆಟ್ಟಿ, ರಾಜೇಶ್ವರಿ ಪಾಂಡೆ ನಟಿಸಿದ್ದಾರೆ.

ಇದೊಂದು ಸಿನಿಮಾದೊಳಗೊಂದು ಸಿನಿಮಾ ಮಾದರಿಯ ಚಿತ್ರ. ಚಿತ್ರದಲ್ಲಿ ನಾಯಕ ನಟನಿಗೆ ಕಥೆ ಬರೆಯುವಾಗ ಹುಟ್ಟುವ ಕಥೆಯೆ ಚಿತ್ರದ ಜೀವಾಳವಾಗಿರೋದ್ದರಿಂದ ಚಿತ್ರಕ್ಕೆ `ಕಥಾ ಲೇಖನ’ ಎಂದು ಹೆಸರಿಡಲಾಗಿದೆ.ಇದೊಂದು ರಿವೇಂಜ್ ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಕರ್ನಾಟಕದ ನಾನಾ ಜಾಗಗಳಲ್ಲಿ ಚಿತ್ರೀಕರಣಗೊಂಡಿದ್ದು, ಪ್ರೇಕ್ಷಕರಿಗೆ ಒಂದು ಅನುಭೂತಿಯನ್ನು ಚಿತ್ರ ಕಟ್ಟಿಕೊಡುವುದು ಗ್ಯಾರಂಟಿ

-ಸತ್ಯರತ್ನಮ್, ನಿರ್ದೇಶಕ

ಸಿನಿಮಾ ನಟನೆಯ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಆಸಕ್ತಿ ಇತ್ತು. ಇದರಿಂದ ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಇಂಡಿಯಾ ವರ್ಸಸ್ ಇಂಗ್ಲೇಡ್ ಚಿತ್ರಕ್ಕೆ ಹಲವು ನಿರ್ಮಾಪರು ಸೇರಿ ನಿರ್ಮಿಸಿದ ಚಿತ್ರ. ಆ ಚಿತ್ರದಲ್ಲಿ ನಾನೂ ಒಬ್ಬ
ನಿರ್ಮಾಪಕನಾಗಿದ್ದುಕೊಂಡು ಖಳ ನಟನ ಪಾತ್ರನ್ನೂ ಮಾಡಿದ್ದೆ. ಈಗ `ಕಥಾಲೇಖನ’ದ ಮೂಲಕ ಸ್ವತಂತ್ರ ನಿರ್ಮಾಪಕನಾಗುತ್ತಿದ್ದೇನೆ. `ಕಥಾ ಲೇಖನ’ ಚಿತ್ರ ನಿರ್ದೇಶಕ ಸತ್ಯರತ್ನಮ್‍ಗಾಗಿ ನಿರ್ಮಿಸಿದ ಚಿತ್ರ. ಏಕೆಂದರೆ ಸತ್ಯರತ್ನಮ್
ಪ್ರತಿಭಾವಂತ ನಿರ್ದೇಶಕನಾಗಿದ್ದು, ಅವಕಾಶಕ್ಕಾಗಿ ಹುಡುಕಾಡುತ್ತಿದ್ದಿರು.ಅವರಿಗೆ ಒಳಿತಾಗಲಿ, ಆ ಮೂಲಕ ಒಬ್ಬ ಉತ್ತಮ ನಿರ್ದೇಶಕ ಚಿತ್ರಮಂದಿರಕ್ಕೆ ಬರಲಿಎಂಬ ಉದ್ದೇಶದಿಂದ ಚಿತ್ರ ನಿರ್ಮಿಸಿದ್ದೇನೆ. ಇನ್ನು ಚಿತ್ರದ ಹಾಡು-ಸಂಗೀತ
ಉತ್ತಮವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ಮುದ ನೀಡಲಿದೆ.

-ಗೋಪಾಲ್ ಕುಲಕರ್ಣಿ, ನಿರ್ಮಾಪಕ

Share this post:

Related Posts

To Subscribe to our News Letter.

Translate »